ಕೊಹ್ಲಿಗೆ ಕ್ಯಾಪ್ಟನ್ಸಿ ಏಕೆ ನೀಡಲಿಲ್ಲ? ಎಂದು ಬಿಚ್ಚಿಟ್ಟ RCB; ಈ ಬಗ್ಗೆ ಮ್ಯಾನೇಜ್ಮೆಂಟ್​ ಹೇಳಿದ್ದೇನು?

author-image
Ganesh Nachikethu
Updated On
ಆರ್​​​ಸಿಬಿಯಿಂದ IPL ವಿನ್ನಿಂಗ್​ ಕ್ಯಾಪ್ಟನ್​ಗೆ ಬಿಗ್​ ಆಫರ್​​; ಬೆಂಗಳೂರಿಗೆ ಬಂತು ಹಾರ್ಸ್​ ಪವರ್​​
Advertisment
  • ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​​
  • ಆರ್​​ಸಿಬಿ ಕ್ಯಾಪ್ಟನ್​ ಆಗಿ ರಜತ್​ ಪಾಟಿದಾರ್ ಘೋಷಣೆ!
  • ಕೊಹ್ಲಿಗೆ ಕ್ಯಾಪ್ಟನ್ಸಿ ಏಕೆ ನೀಡಲಿಲ್ಲ? ಎಂಬುದಕ್ಕೆ RCB ಸ್ಪಷ್ಟನೆ

ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಆರ್​​​ಸಿಬಿ ತಂಡವನ್ನು ಲೀಡ್​ ಮಾಡೋದು ಯಾರು? ಅನ್ನೋ ಚರ್ಚೆಗೆ ಕೊನೆಗೆ ತೆರೆ ಬಿದ್ದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕ್ಯಾಪ್ಟನ್​ ಆಗಿ ರಜತ್​ ಪಾಟಿದಾರ್ ಘೋಷಣೆ ಆಗಿದ್ದಾರೆ. ಇದರ ಮಧ್ಯೆ ವಿರಾಟ್​ ಕೊಹ್ಲಿಗೆ ಕ್ಯಾಪ್ಟನ್ಸಿ ಏಕೆ ನೀಡಲಿಲ್ಲ? ಎಂಬುದಕ್ಕೆ ಆರ್​​ಸಿಬಿ ಮ್ಯಾನೇಜ್ಮೆಂಟ್​​ ಸ್ಪಷ್ಟನೆ ನೀಡಿದೆ.

ಆರ್​​​ಸಿಬಿ ತಂಡದ ಕ್ಯಾಪ್ಟನ್​ ಆಗಿ ಭಾರತೀಯ ಆಟಗಾರರನ್ನೇ ಮಾಡಬೇಕು ಎಂಬ ಆಲೋಚನೆ ಇತ್ತು. ಈ ಲಿಸ್ಟ್​​ನಲ್ಲಿದ್ದ ಮೊದಲ ಹೆಸರೇ ವಿರಾಟ್​ ಕೊಹ್ಲಿ. ಇತ್ತೀಚೆಗೆ ಬ್ಯಾಟಿಂಗ್​ ಕೋಚ್​ ದಿನೇಶ್​ ಕಾರ್ತಿಕ್​​​, ಆರ್​​ಸಿಬಿ ಡೈರೆಕ್ಟರ್​​​ ಮೊ ಬೊಬಾಟ್​​​ ಮತ್ತು ಮುಖ್ಯ ಕೋಚ್​​ ಆ್ಯಂಡಿ ಫ್ಲವರ್​​ ವಿರಾಟ್​ ಕೊಹ್ಲಿ ಜತೆಗೆ ಸಭೆ ನಡೆಸಿದರು. ಕೊನೆಗೂ ಈ ಸಭೆಯಲ್ಲಿ ರಜತ್​​ ಹೆಸರೇ ಫೈನಲ್​ ಮಾಡಿದ್ದಾರೆ. ಈ ಬಗ್ಗೆ ಇವಾಗ ಮೊ ಬೊಬಾಟ್​​​ ಮಾತಾಡಿದ್ದಾರೆ.

ಮೊ ಬೊಬಾಟ್​ ಏನಂದ್ರು?

ಭಾರತದ ಆಟಗಾರರನ್ನೇ ಕ್ಯಾಪ್ಟನ್​ ಮಾಡಬೇಕು ಎಂಬುದು ಆರ್​​ಸಿಬಿ ಮ್ಯಾನೇಜ್ಮೆಂಟ್​ ಆಸೆ ಆಗಿತ್ತು. ಇದು ಇಂಡಿಯನ್​ ಪ್ರೀಮಿಯರ್​ ಲೀಗ್​ ಆದ ಕಾರಣ ಸ್ಥಳೀಯರಿಗೆ ಮೊದಲ ಆದ್ಯತೆ ನೀಡಿದೆವು ಎಂದರು ಬೊಬಾಟ್​​.

ಕೊಹ್ಲಿ ಬಗ್ಗೆ ಹೇಳಿದ್ದೇನು?

ಆರ್​​ಸಿಬಿ ಕ್ಯಾಪ್ಟನ್ಸಿ ಲಿಸ್ಟ್​ನಲ್ಲಿದ್ದ ಮೊದಲ ಹೆಸರು ವಿರಾಟ್​. ಇವರು ಆರ್​​ಸಿಬಿ ತಂಡವನ್ನು ಲೀಡ್​​ ಮಾಡಲು ಕ್ಯಾಪ್ಟನ್​ ಆಗಬೇಕಾದ ಅಗತ್ಯ ಇಲ್ಲ. ಕಳೆದ ಬಾರಿ ಫಾಪ್ ಡುಪ್ಲೆಸಿಸ್ ಕ್ಯಾಪ್ಟನ್ ಆಗಿದ್ದರು. ಆಗಲೂ ಹಿಂದಿನಿಂದ ತಂಡವನ್ನು ಮುನ್ನಡೆಸಿದ್ದು ಕೊಹ್ಲಿಯೇ. ರಜತ್ ಅವರ ಸ್ಟ್ರೈಕ್ ರೇಟ್ ಚೆನ್ನಾಗಿದೆ. ಇವರನ್ನು ಕ್ಯಾಪ್ಟನ್​ ಮಾಡಿದ ಉದ್ದೇಶವೇ ಕೊಹ್ಲಿ ಮೆಂಟರ್​ ಆಗಿದ್ದಾರೆ ಎಂದು. ಈಗಲೂ ರಜತ್​ ಬೆನ್ನಿಗೆ ನಿಂತಿರುವುದು ಕೊಹ್ಲಿಯೇ ಎಂದರು.

ಇದನ್ನೂ ಓದಿ: ಶಿವರಾತ್ರಿಗೆ ಜಿಯೋ ಭರ್ಜರಿ ಆಫರ್​; ₹3,000 ವೋಚರ್​​​; ವಿಮಾನದಲ್ಲೂ ಪ್ರಯಾಣಿಸಬಹುದು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment