ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಕೇಸ್​.. RCB ಮಾರ್ಕೆಟಿಂಗ್ ಮುಖ್ಯಸ್ಥ ಸೇರಿ ಮೂವರು ಅರೆಸ್ಟ್​

author-image
Veena Gangani
Updated On
ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಕೇಸ್​.. RCB ಮಾರ್ಕೆಟಿಂಗ್ ಮುಖ್ಯಸ್ಥ ಸೇರಿ ಮೂವರು ಅರೆಸ್ಟ್​
Advertisment
  • ಆರ್​ಸಿಬಿ ಮಾರ್ಕೆಟಿಂಗ್ ಹೆಡ್ ನಿಖಿಲ್ ಸೋಸಲೆ ಅರೆಸ್ಟ್
  • ಪೊಲೀಸರ ಅನುಮತಿ ಪಡೆಯದೇ ಪೋಸ್ಟ್ ಹಾಕಿದ್ದ ನಿಖಿಲ್
  • ಬೆಂಗಳೂರಲ್ಲಿ ವಿಕ್ಟರಿ ಪರೇಡ್ ಅಂತ ಪೋಸ್ಟ್ ಹಾಕಿದ್ದ ನಿಖಿಲ್

ಬೆಂಗಳೂರು: ಆರ್​ಸಿಬಿ ಮಾರ್ಕೆಟಿಂಗ್ ಹೆಡ್ ನಿಖಿಲ್ ಸೋಸಲೆ ಸೇರಿದಂತೆ ಮೂವರನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಖಿಲ್ ಸೋಸಲೆ ಬೆಂಗಳೂರಲ್ಲಿ ವಿಕ್ಟರಿ ಪರೇಡ್ ಅಂತ ಪೋಸ್ಟ್ ಹಾಕಿದ್ದ.

ಇದನ್ನೂ ಓದಿ: ಕಬ್ಬನ್ ಪಾರ್ಕ್ ಠಾಣೆಯಲ್ಲಿ ದಾಖಲಾದ FIR ಸಿಐಡಿಗೆ ವರ್ಗಾವಣೆ -ಕಾಲ್ತುಳಿತದ ವಿರುದ್ಧ ಸರ್ಕಾರ 6 ಆದೇಶ

publive-image

ಪೊಲೀಸರ ಅನುಮತಿ ಪಡೆಯದೇ ಪೋಸ್ಟ್ ಹಾಕಿದ್ದಕ್ಕೆ ಆರ್​ಸಿಬಿ ಮಾರ್ಕೆಟಿಂಗ್ ಹೆಡ್ ನಿಖಿಲ್ ಸೋಸಲೆಯನ್ನು ಅರೆಸ್ಟ್ ಮಾಡಲಾಗಿದೆ. ಅಲ್ಲದೇ ಡಿಎನ್​ಎ ಸಂಸ್ಥೆಯ ಇಬ್ಬರನ್ನ ಪೊಲಿಸರು ಅರೆಸ್ಟ್​ ಮಾಡಿದ್ದಾರೆ. ಡಿಎನ್​ಎ ಸಂಸ್ಥೆಯ ಕಿರಣ್ ಮತ್ತು ಸುಮಂತ್ ಬಂಧಿತರಾಗಿದ್ದಾರೆ.

publive-image

ನಿಖಿಲ್ ಸೋಸಲೆ ಬಂಧನಕ್ಕೆ ಕಾರಣಗಳೇನು?

ನಿಖಿಲ್ ಸೋಸಲೆ RCB ಮ್ಯಾನೇಜ್ಮೆಂಟ್​​ನ ಮಾರ್ಕೆಟಿಂಗ್ ಹೆಡ್ ಆಗಿದ್ದ. ಇವರೇ ಸೋಷಿಯಲ್​ ಮೀಡಿಯಾದಲ್ಲಿ ಚಿನ್ನಸ್ವಾಮಿ ಸ್ಟೇಡಿಯಂವರೆಗೂ ವಿಕ್ಟರಿ ಪರೇಡ್ ಅಂತ ಪೋಸ್ಟ್ ಹಾಕಿದ್ದಾರೆ. ಅಲ್ಲದೇ ಪೊಲೀಸರ ಅನುಮತಿ ಪಡೆಯದೇ ಪೇಜ್​ನಲ್ಲಿ ಪರೇಡ್​​ ಬಗ್ಗೆ0 ಪೋಸ್ಟ್ ಮಾಡಿದ್ದಾರೆ. ಆದ್ರೆ ಪರೇಡ್​​ ಬಗ್ಗೆ ಕಮಿಷನರ್ ನಿರಾಕರಿಸಿದ ನಂತರ ಪೋಸ್ಟ್ ಡಿಲೀಟ್ ಮಾಡಿರಲಿಲ್ಲ. ಇಷ್ಟೇ ಅಲ್ಲದೇ ಸ್ಟೇಡಿಯಂನಲ್ಲಿ ಸೆಲೆಬ್ರೇಷನ್​​ಗೆ ಉಚಿತ ಟಿಕೆಟ್ ಅಂತ ಘೋಷಿಸಲಾಗಿತ್ತು.  ಗೇಟ್ 9 ಮತ್ತು 10ರ ಬಳಿ 1 ಗಂಟೆಗೆ ಟಿಕೆಟ್ ಸಿಗತ್ತೆ ಅಂತ ಹೇಳಿದ್ದರು. ಮಧ್ಯಾಹ್ನ 3ಕ್ಕೆ ಸ್ಟೇಡಿಯಂಗೆ ಅಭಿಮಾನಿಗಳಿಗೆ ಉಚಿತ ಪ್ರವೇಶ ಅಂತ ಪೋಸ್ಟ್ ಹಾಕಲಾಗಿದೆ. ನಿಖಿಲ್ ಸೂಚನೆಯಂತೆ ಡಿಎನ್​ಎ ಮ್ಯಾನೇಜ್ಮೆಂಟ್ ಕಂಪನಿ ವರ್ತಿಸಿತ್ತು. ಈ ಪೋಸ್ಟ್​ ಹಾಕಿದ್ದಕ್ಕೆ ಲಕ್ಷಾಂತರ ಮಂದಿ ಸೇರೋದಕ್ಕೆ ಕಾರಣವಾಗಿದೆ. ಹೀಗಾಗಿಯೇ ಕಾಲ್ತುಳಿತ ಉಂಟಾಗಿ 11 ಮಂದಿ ಜೀವಬಿಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment