/newsfirstlive-kannada/media/post_attachments/wp-content/uploads/2025/06/nikhil.jpg)
ಬೆಂಗಳೂರು: ಜೂನ್ 4ರಂದು ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತ ಪ್ರಕರಣದ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಬಂಧಿತ ನಾಲ್ವರು ಆರೋಪಿಗಳನ್ನು ಪೊಲೀಸರು 41ನೇ ಎಸಿಎಂಎಂ ಕೋರ್ಟ್ ಮುಂದೆ ಹಾಜರು ಪಡೆಸಿದ್ದರು. ವಿಚಾರಣೆ ನಡೆಸಿದ ಕೋರ್ಟ್ ಜೂನ್ 19ರವರಗೆ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿ ಮಹತ್ವದ ಆದೇಶ ನೀಡಿದೆ.
ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತದಲ್ಲಿ 11 ಮಂದಿ ಆರ್‌ಸಿಬಿ ಅಭಿಮಾನಿಗಳು ನಿಧನರಾಗಿದ್ದರು. DNS ಡೈರೆಕ್ಟರ್ ಸುನೀಲ್ ಮ್ಯಾಥ್ಯೂ, DNA ಮ್ಯಾನೇಜ್ಮೆಂಟ್ ಮ್ಯಾನೇಜರ್ ಕಿರಣ್, DNA ಮ್ಯಾನೇಜ್ಮೆಂಟ್ ಸಿಬ್ಬಂದಿ ಸುಮಂತ್, RCB ಮಾರ್ಕೆಟಿಂಗ್ ಹೆಡ್ ನಿಖಿಲ್ ಅವರನ್ನು ಬಂಧಿಸಿದ ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು.
ಯಾರು ನಿಖಿಲ್ ಸೋಸಲೆ..?
ಆರ್‌ಸಿಬಿ ಮಾರ್ಕೆಟಿಂಗ್ ಹೆಡ್ ನಿಖಿಲ್ ಸೋಸಲೆ RCB ಆಟಗಾರರ ಕುಟುಂಬಕ್ಕೂ ಅಚ್ಚುಮೆಚ್ಚಾಗಿದ್ದ. RCBಯ ಪ್ರತಿ ಪ್ಲಾನಿಂಗ್ನಲ್ಲಿ ನಿಖಿಲ್ನದ್ದೇ ಪ್ರಮುಖ ಪಾತ್ರ ವಹಿಸಿದ್ದ. ತಂಡದ ಪ್ಲಾನಿಂಗ್ ಮತ್ತು ಎಕ್ಸಿಕ್ಯೂಷನ್ ನೋಡಿಕೊಳ್ತಿದ್ದ. ಪ್ಲೇಯರ್ಸ್ ಸೆಲೆಕ್ಷನ್ ಪ್ರಕ್ರಿಯೆಯಲ್ಲ್ಲೂ ಸಕ್ರಿಯನಾಗಿದ್ದ.
ಇದನ್ನೂ ಓದಿ: ಅಭಿಮಾನಿಗಳಿಗೆ RCB ಅಂದ್ರೆ ಜೀವ.. ಫ್ರಾಂಚೈಸಿ ಮಾಲೀಕರಿಗೆ ಫ್ಯಾನ್ಸ್ ಅಂದ್ರೆ ಜಸ್ಟ್ ಬ್ಯುಸಿನೆಸ್..!
ಅಷ್ಟೇ ಅಲ್ಲದೇ ಬಾಲಿವುಡ್ನ ಕೆಲ ಸೆಲೆಬ್ರಿಟಿಗಳಿಗೂ ನಿಖಿಲ್ ಸೋಸಲೆ ಆಪ್ತನಾಗಿದ್ದಾನೆ. ಕೊಹ್ಲಿ ಜೊತೆ ಅನುಷ್ಕಾ ಬರ್ತ್ಡೇ ಪಾರ್ಟಿಯಲ್ಲಿ ಕೂಡ ಭಾಗಿಯಾಗಿದ್ದ. ಆರ್‌ಸಿಬಿ ಆಟಗಾರರ ಕುಟುಂಬಕ್ಕೂ ಕೂಡ ನಿಖಿಲ್ ಅಚ್ಚುಮೆಚ್ಚು ಆಗಿದ್ದಾನೆ. ಆದ್ರೆ ಪೊಲೀಸರ ಅನುಮತಿ ಪಡೆಯದೇ ವಿಕ್ಟರಿ ಪರೇಡ್ ಬಗ್ಗೆ ಪೋಸ್ಟ್ ಹಾಕಿದ್ದ. ಈ ಹಿಂದಿನ ಪ್ಲಾನ್ ಸಹ ನಿಖಿಲ್ದಂತೆ. ಸದ್ಯ ಈ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್ ಜೂನ್ 19ರವರಗೆ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿ ಮಹತ್ವದ ಆದೇಶ ನೀಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ