ಮುಂಬೈನಲ್ಲಿ ದೈತ್ಯ ಬ್ಯಾಟಿಂಗ್ ಪಡೆ.. MI ವಿರುದ್ಧ 3 ಅಸ್ತ್ರ ಪ್ರಯೋಗಿಸಲು ರಜತ್ ಪ್ಲಾನ್..!

author-image
Ganesh
Updated On
ಮುಂಬೈನಲ್ಲಿ ದೈತ್ಯ ಬ್ಯಾಟಿಂಗ್ ಪಡೆ.. MI ವಿರುದ್ಧ 3 ಅಸ್ತ್ರ ಪ್ರಯೋಗಿಸಲು ರಜತ್ ಪ್ಲಾನ್..!
Advertisment
  • ವಾಂಖೆಡೆ ವಾರ್​ ಗೆಲ್ಲಲು RCB ಮಾಸ್ಟರ್​ ಪ್ಲಾನ್​
  • ಮುಂಬೈನ ಬಲಿಷ್ಟ ಬ್ಯಾಟಿಂಗ್​ಗೆ ಕಾದಿದೆ ‘ಚಮಕ್​’..!
  • ರಜತ್​ ಪಾಟಿದಾರ್​ ಬತ್ತಳಿಕೆಯಲ್ಲಿರೋ ಅಸ್ತ್ರ ಏನು?

ಇಂಡಿಯನ್​​ ಪ್ರೀಮಿಯರ್​ ಲೀಗ್​ನ ಮೆಗಾ ಕದನದಲ್ಲಿ ಮುಂಬೈ ಮಣಿಸಲು ಆರ್​​ಸಿಬಿ ಸಜ್ಜಾಗಿದೆ. ಹೋಮ್​​ಗ್ರೌಂಡ್​ ಚಿನ್ನಸ್ವಾಮಿಯಲ್ಲಿ ಸೋತಿರುವ ಆರ್​​ಸಿಬಿ ಮುಂಬೈನ ವಾಂಖೆಡೆಯಲ್ಲಿ ಗೆದ್ದು ಬೀಗಲು ತಯಾರಿ ನಡೆಸಿದೆ. ಅಭ್ಯಾಸದ ಜೊತೆ ಜೊತೆಗೆ ಬಲಿಷ್ಟ ಮುಂಬೈ ಟಕ್ಕರ್​ ಕೊಡಲು ಸಖತ್​ ಗೇಮ್​ಪ್ಲಾನ್​ ಮಾಡಿದೆ. ಬ್ಯಾಟಿಂಗ್​​ ಅಲ್ಲ.. ಬೌಲಿಂಗ್​ ದಾಳ ಉರುಳಿಸಿ ಮುಂಬೈ ಮಣಿಸಲು ರೆಡಿಯಾಗಿದೆ.

ಇದನ್ನೂ ಓದಿ:ಜಸ್ಟ್ 10 ಸೆಕೆಂಡ್​ನಲ್ಲಿ ಭಾರತದ ಷೇರು ಮಾರುಕಟ್ಟೆಗೆ 20 ಲಕ್ಷ ಕೋಟಿ ನಷ್ಟ, ಈ ಮಹಾಕುಸಿತಕ್ಕೆ ಕಾರಣಗಳೇನು?

publive-image

ಇಂಡಿಯನ್​ ಪ್ರೀಮಿಯರ್​​ ಲೀಗ್​.. ಈ ಐಪಿಎಲ್​ ಬ್ಯಾಟ್ಸ್​ಮನ್​ಗಳ ಗೇಮ್​ ಅಂತಲೇ ಫೇಮಸ್​. ಈ ಮಾತನ್ನ ಸುಳ್ಳಾಗಿಸೋಕೆ ಇವತ್ತು ಆರ್​​ಸಿಬಿ ರೆಡಿಯಾಗಿದೆ. ಎದುರಾಳಿ ಮುಂಬೈ ಇಂಡಿಯನ್ಸ್​​ಗೆ ಅವರದ್ದೇ ಹೋಮ್​​ಗ್ರೌಂಡ್​ನಲ್ಲಿ ಚಮಕ್​ ಕೊಡಲು ಚಾಲೆಂಜರ್ಸ್​​ ಸ್ಪೆಷಲ್​ ಪ್ಲಾನ್​ ರೂಪಿಸಿದೆ. ಈ ಸೀಸನ್​ನಲ್ಲಿ ಮುಂಬೈ ಇಂಡಿಯನ್ಸ್​​ ತಂಡ ಹೇಳಿಕೊಳ್ಳುವಂತಾ ಪರ್ಫಾಮೆನ್ಸ್​ ನೀಡ್ತಿಲ್ಲ. ಹಾಗಂತ ಅಂಬಾನಿ ಬ್ರಿಗೆಡ್​ನ ಕಡೆಗಣಿಸೋಕೆ ಸಾಧ್ಯನೇ ಇಲ್ಲ. ಎಸ್ಪೆಷಲಿ ಆ ಬ್ಯಾಟಿಂಗ್​ ಲೈನ್​ಅಪ್.

ರೋಹಿತ್​ ಶರ್ಮಾ, ಸೂರ್ಯಕುಮಾರ್​ ಯಾದವ್​, ರಿಯಾನ್​ ರಿಕಲ್ಟನ್​, ವಿಲ್​ ಜಾಕ್ಸ್​, ತಿಲಕ್​ ವರ್ಮಾ ಮತ್ತು ಕ್ಯಾಪ್ಟನ್​ ಹಾರ್ದಿಕ್​ ಪಾಂಡ್ಯ. ಎಲ್ರೂ ಭಯಾನಕ ಬ್ಯಾಟ್ಸ್​ಮನ್​ಗಳೇ. ಸಿಂಗಲ್​ ಹ್ಯಾಂಡೆಡ್ಲಿ ಮ್ಯಾಚ್​ ಗೆಲ್ಲಿಸೋ ತಾಕತ್ತಿರೋ ಬ್ಯಾಟರ್ಸ್​​. ಮುಂಬೈನ ಬಲಿಷ್ಟ ಬ್ಯಾಟಿಂಗ್​ ಪಡೆಯನ್ನ ಕಡೆಗಣಿಸುವಂತೆ ಇಲ್ಲ. ಫಾರ್ಮ್​ ಅಲ್ಲಿ ಇಲ್ಲದೇ ಇರೋರೆಲ್ಲಾ ಆರ್​​ಸಿಬಿ ಎದುರು ಆಡಿದ್ರೆ ರಿದಮ್​ ಕಂಡುಕೊಳ್ತಾರೆ ಅನ್ನೋ ಮಾತೇ ಬೇರೆ ಇದೆ. ಹಲವು ಬಾರಿ ಇದು ನಿಜ ಕೂಡ ಆಗಿದೆ. ಹೀಗಾಗಿ ಮುಂಬೈ ಬ್ಯಾಟರ್ಸ್​​ ಖೆಡ್ಡಾಗೆ ಕೆಡವಲು ಆರ್​​ಸಿಬಿ ಥಿಂಕ್​ ಟ್ಯಾಂಕ್ಸ್,​ ಪೇಸರ್ಸ್​ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆ.

ಅಸ್ತ್ರ ನಂ.1: ಭುವನೇಶ್ವರ್​ ಕುಮಾರ್​

ಸ್ವಿಂಗ್ ಕಿಂಗ್​ ಭುವನೇಶ್ವರ್​ ಕುಮಾರ್​​ ಪ್ರಸಕ್ತ ಐಪಿಎಲ್​ನಲ್ಲಿ ಸಾಲಿಡ್​​ ಸ್ಪೆಲ್​​ ಹಾಕ್ತಿದ್ದಾರೆ. ಹೊಸ ಬಾಲ್​ ಹಿಡಿದು ದಾಳಿಗಿಳಿತಾ ಇರೋ ಭುವಿ ಬ್ಯಾಟ್ಸ್​ಮನ್​ಗಳನ್ನ ಟ್ರಬಲ್​ ಮಾಡ್ತಿದ್ದಾರೆ. ಪವರ್​​ ಪ್ಲೇನಲ್ಲಿ ಪವರ್​ಫುಲ್​ ಬೌಲಿಂಗ್​ ಮಾಡ್ತಿರೋ ಭುವನೇಶ್ವರ್​, ಡೆತ್​ ಓವರ್​ಗಳಲ್ಲೂ ಬ್ಯಾಟ್ಸ್​ಮನ್​ಗಳ ಅಬ್ಬಕ್ಕೆ ಕಡಿವಾಣ ಹಾಕ್ತಿದ್ದಾರೆ. ಈ ಸೀಸನ್​ನಲ್ಲಿ ಕೇವಲ 6.14ರ ಎಕಾನಮಿಯಲ್ಲಿ ರನ್​ ಬಿಟ್ಟು ಕೊಟ್ಟಿರೋ ಭುವಿ ವಾಂಖೆಡೆ ಅಂಗಳದಲ್ಲಿ ಎಕಾನಮಿಕಲ್​ ಸ್ಪೆಲ್​ ಹಾಕಿರೋ ದಾಖಲೆ ಹೊಂದಿದ್ದಾರೆ. ವಾಂಖೆಡೆಯಲ್ಲಿ 13 ಪಂದ್ಯಗಳನ್ನಾಡಿರೋ ಭುವನೇಶ್ವರ್​​ 45.1 ಓವರ್​ ಬೌಲಿಂಗ್​ ಮಾಡಿದ್ದಾರೆ. 11 ವಿಕೆಟ್​ಗಳನ್ನ ಬೇಟೆಯಾಡಿದ್ದು 6.61ರ ಎಕಾನಮಿ ಹೊಂದಿದ್ದಾರೆ.

ಇದನ್ನೂ ಓದಿ: RCB vs MI ; ಇವತ್ತಿನ ಪಂದ್ಯಕ್ಕೂ ಮೊದಲು ಈ 5 ವಿಚಾರಗಳು ನಿಮಗೆ ಗೊತ್ತಿರಲಿ..!

publive-image

ಅಸ್ತ್ರ ನಂ.2

ಪೇಸರ್​​ ಜೋಶ್​ ಹೇಜಲ್​ವುಡ್​ಗೆ​ ವಾಂಖೆಡೆಯಲ್ಲಿ ಆಡಿದ ಅನುಭವ ಕಡಿಮೆಯಿದ್ರೂ, ಸದ್ಯ ಸಾಲಿಡ್​ ರಿದಮ್​ನಲ್ಲಿದ್ದಾರೆ. ಇಂದಿನ ಪಂದ್ಯದಲ್ಲಿ ಪವರ್​​ ಪ್ಲೇನಲ್ಲಿ ಹೇಜಲ್​ವುಡ್ ಪವರ್​ನ ಬಳಸಿಕೊಳ್ಳೋ ಲೆಕ್ಕಾಚಾರ ಆರ್​​ಸಿಬಿ ತಂಡದ್ದಾಗಿದೆ. ಪಕ್ಕಾ ಲೈನ್​ ಅಂಡ್ ಲೆಂಥ್​ ಬೌಲಿಂಗ್​ ಮಾಡ್ತಿರೋ ಬ್ಯಾಟ್ಸ್​ಮನ್​ಗಳಿಗೆ ಸಖತ್​ ಕಾಟ ಕೊಡ್ತಿದ್ದಾರೆ. ಮುಖ್ಯವಾಗಿ ಪವರ್​ ಪ್ಲೇನಲ್ಲೇ ವಿಕೆಟ್​ ಬೇಟೆಯಾಡಿ ಆರಂಭದಲ್ಲೇ ತಂಡದ ಕಾನ್ಫಿಡೆನ್ಸ್​ ಹೆಚ್ಚಿಸ್ತಿದ್ದಾರೆ. 3 ಪಂದ್ಯಗಳಿಂದ ಪವರ್​ ಪ್ಲೇನಲ್ಲಿ ಜೋಶ್​ ಹೇಜಲ್​ವುಡ್​ 6 ಓವರ್​​ ಬೌಲಿಂಗ್​ ಮಾಡಿದ್ದಾರೆ. ಹಾಕಿದ 36 ಎಸೆತಗಳ ಪೈಕಿ 26 ಎಸೆತಗಳನ್ನ ಡಾಟ್​ ಮಾಡಿದ್ದಾರೆ. 3 ವಿಕೆಟ್​ ಬೇಟೆಯಾಡಿದ್ದು 5.16ರ ಎಕಾನಮಿ ಕಾಯ್ದುಕೊಂಡಿದ್ದಾರೆ.

ಅಸ್ತ್ರ ನಂ.3

ಹೊಸ ಬಾಲ್​ ಹಿಡಿದು ಭುವನೇಶ್ವರ್​​, ಹೇಜಲ್​ವುಡ್​ ಜಾದೂ ಮಾಡಿದ್ರೆ ಬಾಲ್​ ಹಳೆಯದಾದ ಬಳಿಕ ಯಶ್​ ದಯಾಳ್​ ಮ್ಯಾಜಿಕ್​ ಮಾಡ್ತಿದ್ದಾರೆ. ಡೆತ್​ ಒವರ್​ಗಳಲ್ಲಿ ಬ್ಯಾಟ್ಸ್​ಮನ್​ಗಳ ಭರಾಟೆಗೆ ಬ್ರೇಕ್​ ಹಾಕ್ತಿರೋ ಯಶ್​ ದಯಾಳ್​ ಕೇವಲ 7.10ರ ಎಕಾನಮಿಯಲ್ಲಿ ರನ್​ ಬಿಟ್ಟು ಕೊಟ್ಟಿದ್ದಾರೆ. ಸೀಸನ್​ನಲ್ಲಿ 3 ಪಂದ್ಯಗಳಲ್ಲಿ 3 ವಿಕೆಟ್​ ಬೇಟೆಯಾಡಿ ಮಿಂಚಿರುವ ಲೆಫ್ಟಿ ಪೇಸರ್​​ನಿಂದ ವಾಂಖೆಡೆಯಲ್ಲೂ ಅದ್ಭುತ ಪರ್ಫಾಮೆನ್ಸ್​​ನ ನಿರೀಕ್ಷೆಯಿದೆ.

ಹೇಳಿ ಕೇಳಿ ವಾಂಖೆಡೆ ಮೈದಾನ ಪೇಸರ್ಸ್​ಗೆ ಹೆಚ್ಚು ನೆರವಾಗೋ ಪಿಚ್​. ಇಲ್ಲಿ ಸ್ಪಿನ್ನರ್​ಗಳಿಗಿಂತ ವೇಗಿಗಳೇ ಹೆಚ್ಚು ವಿಕೆಟ್​ ಬೇಟೆಯಾಡಿದ್ದಾರೆ. ವೇಗಿಗಳು 725 ವಿಕೆಟ್ಸ್​ ಬೇಟೆಯಾಡಿದ್ರೆ, ಸ್ಪಿನ್ನರ್ಸ್​ 310 ವಿಕೆಟ್​ ಉರುಳಿಸಿದ್ದಾರಷ್ಟೇ. ಈ ಇತಿಹಾಸವನ್ನ ಅರಿತೇ ಆರ್​ಸಿಬಿ ಮ್ಯಾನೇಜ್​ಮೆಂಟ್​ ಪೇಸಾಸ್ತ್ರ ಪ್ರಯೋಗಕ್ಕೆ ಮುಂದಾಗಿದೆ. ಬತ್ತಳಿಕೆಯ ಬಾಣ ಆನ್​​ಫೀಲ್ಡ್​ನಲ್ಲಿ ವರ್ಕೌಟ್​ ಆಗುತ್ತಾ.? ಕಾದು ನೋಡೋಣ.

ಇದನ್ನೂ ಓದಿ: ಮುಂಬೈ ಇಂಡಿಯನ್ಸ್​ಗೆ ಬಂತು ಆನೆ ಬಲ.. ಆರ್​ಸಿಬಿಗೆ ಕಾಡಿದ ಆತಂಕ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment