ರಜತ್ ಪಾಟೀದಾರ್ ಯಾರು.. ಅಂದು RCB ಸೇರಲು ಅದೃಷ್ಟ ಹೇಗೆ ಒಲಿದಿತ್ತು ಗೊತ್ತಾ..?

author-image
Bheemappa
Updated On
RCB ಕಪ್ ಗೆಲ್ಲಬೇಕಾ?; ಈ ಪ್ಲೇಯರ್ಸ್​ ರೋಲ್ ಇಂಪಾರ್ಟೆಂಟ್​.. ಇವರು ಏನೇನು ಮಾಡಬೇಕು?
Advertisment
  • ಹೊಸ ನಾಯಕನ ಹೆಸರನ್ನ ಘೋಷಣೆ ಮಾಡಿದ RCB ಫ್ರಾಂಚೈಸಿ
  • ಪಾಟೀದಾರ್ ಎಷ್ಟನೇ ವಯಸ್ಸಲ್ಲಿ ಕ್ರಿಕೆಟ್ ಆಡಲು ಆರಂಭಿಸಿದರು.?
  • ರಜತ್ ಬ್ಯಾಟಿಂಗ್ ಮಾಡಿದ್ರೆ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ಪಕ್ಕಾ

2025ರ ಐಪಿಎಲ್ ಮೆಗಾ ಆವೃತ್ತಿ 18 ಇನ್ನೇನು ಮುಂದಿನ ತಿಂಗಳಲ್ಲೇ ಆರಂಭವಾಗಲಿದೆ. ಈಗಾಗಲೇ ಎಲ್ಲ ಫ್ರಾಂಚೈಸಿಗಳು ಸಿದ್ಧತೆ ನಡೆಸಿದ್ದು ಟ್ರೋಫಿ ಗೆಲ್ಲುವ ಉದ್ದೇಶದಿಂದ ಅಖಾಡಕ್ಕೆ ಇಳಿಯುತ್ತಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕ್ಯಾಪ್ಟನ್ ಆಗಿ ರಜತ್ ಪಾಟೀದಾರ್ ಹೆಸರನ್ನು ಇದೀಗ ಅನೌನ್ಸ್ ಮಾಡಲಾಗಿದೆ. ಸದ್ಯ ಈ ರಜತ್ ಪಾಟೀದಾರ್ ಯಾರೆಂದು ನೋಡುವುದಾದರೆ..

ರಜತ್ ಪಾಟೀದಾರ್ ಪೂರ್ಣ ಹೆಸರು ರಜತ್ ಮನೋಹರ್ ಪಾಟೀದಾರ್ ಆಗಿದೆ. ಇವರು ಒಬ್ಬ ಭಾರತೀಯ ಅಂತರಾಷ್ಟ್ರೀಯ ಕ್ರಿಕೆಟರ್ ಆಗಿದ್ದಾರೆ. ಮಧ್ಯಪ್ರದೇಶದ ಇಂದೋರ್ ಮೂಲದವರಾದ ರಜತ್, 1993ರ ಜೂನ್​ 1 ರಂದು ಜನಿಸಿದ್ದು ಇಲ್ಲಿಗೆ ಅವರಿಗೆ 31 ವರ್ಷದ 257 ದಿನಗಳು ತುಂಬಿವೆ. ಬಲಗೈ ಬ್ಯಾಟ್ಸ್​ಮನ್ ಆಗಿರುವ ರಜತ್ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡಬಲ್ಲರು. ಬಲಗೈ ಬೌಲರ್​ ಕೂಡ ಆಗಿದ್ದು ತಂಡ ಸಂಕಷ್ಟಕ್ಕೆ ಸಿಲುಕಿದ್ದಾಗ ಗೆಲ್ಲಿಸಿಕೊಂಡು ಬರುವ ಛಲಗಾರ ಆಗಿದ್ದಾರೆ.

publive-image

ಕ್ರಿಕೆಟ್ ಆಡುತ್ತಾ ಪದವಿ ಪಡೆದಿರುವ ರಜತ್

ರಜತ್ ತಂದೆ ಬ್ಯುಸಿನೆಸ್ ಮ್ಯಾನ್, ರಜತ್ ಪಾಟೀದಾರ್ 8 ವರ್ಷದವರು ಇದ್ದಾಗಲೇ ಕ್ರಿಕೆಟ್​ ಕ್ಲಬ್​ಗೆ ಸೇರಿಸಿದ್ದರು. ಮೊದಲು ಬೌಲರ್ ಆಗಿದ್ದ ಇವರು ಅಂಡರ್- 15 ಟೂರ್ನ್​ಮೆಂಟ್​ನಿಂದ ಬ್ಯಾಟಿಂಗ್​ ಕಡೆ ಹೆಚ್ಚಿನ ಹೊತ್ತು ಕೇಂದ್ರಿಕರಿಸಿದರು. ಹೀಗಾಗಿಯೇ ಪಂದ್ಯದಲ್ಲೇ ಬೌಲಿಂಗ್, ಬ್ಯಾಟಿಂಗ್​ನಿಂದ ಆಲ್​ರೌಂಡರ್ ಪ್ರದರ್ಶನ ನೀಡಬಲ್ಲರು. ಇಂದೋರ್‌ನ ನ್ಯೂ ದಿಗಂಬರ್ ಪಬ್ಲಿಕ್ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡಿ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ನಂತರ ಮಧ್ಯಪ್ರದೇಶದ ಗುರು ವಶಿಷ್ಠ ಕೊಲಾಜ್ ದೇವಾಸ್​ ಸಂಸ್ಥೆಯಲ್ಲಿ ಪದವಿ ಪೂರ್ಣಗೊಳಿಸಿದರು.

2015-16ರಲ್ಲಿ ರಜತ್ ಪಾಟಿದಾರ್ ಮಧ್ಯಪ್ರದೇಶದ ಪರವಾಗಿ ಫಸ್ಟ್​ ಕ್ಲಾಸ್​ ಕ್ರಿಕೆಟ್​ಗೆ ಡೆಬ್ಯೂ ಮಾಡಿದರು. ಡೆಬ್ಯೂ ಮಾಡಿದ ಪಂದ್ಯದಲ್ಲೇ ರಜತ್ ಪಾಟೀದಾರ್ ಅವರು ಸೆಂಚುರಿ ಸಿಡಿಸಿದ್ದರು. ಇದಾದ ಮೇಲೆ ಮುಂದಿನ ಪಂದ್ಯದಲ್ಲೂ ಹಂಡ್ರೆಡ್ ಬಾರಿಸಿ ಅಚ್ಚರಿ ಮೂಡಿಸಿದ್ದರು. 2022ರ ರಣಜಿ ಟ್ರೋಫಿಯಲ್ಲಿ ಮುಂಬೈ ತಂಡದ ವಿರುದ್ಧ ರಜತ್ ಬ್ಯಾಟ್​ನಿಂದ ಅತ್ಯಮೂಲ್ಯವಾದ ಶತಕ ಬಂದಿತ್ತು. ಈ ಶತಕದ ನೆರವಿನಿಂದಲೇ ಮಧ್ಯಪ್ರದೇಶ 69 ವರ್ಷಗಳ ಬಳಿಕ ಟ್ರೋಫಿಗೆ ಮುತ್ತಿಕ್ಕಿ ಸಂಭ್ರಮಿಸಿತ್ತು.

publive-image

ಟೀಮ್ ಇಂಡಿಯಾಕ್ಕೆ ಡೆಬ್ಯೂ

2023ರಲ್ಲಿ ಟೀಮ್ ಇಂಡಿಯಾಕ್ಕೆ ಎಂಟ್ರಿ ಕೊಟ್ಟಿದ್ದ ರಜತ್, ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯವನ್ನು ಆಡಿದ್ದರು. ಇದಾದ ಕೆಲವೇ ದಿನಗಳಲ್ಲಿ 2024ರ ವಿಶಾಖಪಟ್ಟಣಂನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಚೊಚ್ಚಲ ಟೆಸ್ಟ್ ಪಂದ್ಯಕ್ಕೆ ಡೆಬ್ಯೂ ಮಾಡಿದ್ದರು. ಎರಡು ಟೆಸ್ಟ್ ಪಂದ್ಯದಲ್ಲಿ 63 ರನ್​ ಗಳಿಸಿದ್ದರು.

2021ರ ಫೆಬ್ರುವರಿಯಲ್ಲಿ ರಜತ್ ಪಾಟೀದಾರ್ ಅವರು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಟೀಮ್​ಗೆ ಸೇರಿಕೊಂಡರು. ಈ ಸೀಸನ್​​ನಲ್ಲಿ 4 ಪಂದ್ಯಗಳನ್ನು ಆಡಿ ಕೇವಲ 71 ರನ್ ಮಾತ್ರ ಗಳಿಸಿದ್ದರು. ಹೀಗಾಗಿ ಮುಂದಿನ ವರ್ಷ ಅಂದರೆ 2022ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮೊದಲೇ ತಂಡದಿಂದ ಬಿಡುಗಡೆ ಮಾಡಲಾಗಿತ್ತು. ಪರ್ಫಾಮೆನ್ಸ್​ ಚೆನ್ನಾಗಿಲ್ಲದ ಕಾರಣ ಅವರನ್ನು 2022ರಲ್ಲಿ ಯಾರೂ ಖರೀದಿ ಮಾಡಿರಲಿಲ್ಲ.

ಇದನ್ನೂ ಓದಿ:BREAKING: ಆರ್​ಸಿಬಿಯಿಂದ ಅಧಿಕೃತ ಘೋಷಣೆ.. ಕೊಹ್ಲಿ ಆಪ್ತನಿಗೆ ಕ್ಯಾಪ್ಟನ್ಸಿ ಪಟ್ಟ..!

publive-image

ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್​

ಆದರೆ 2022ರ ಐಪಿಎಲ್​ ಸೀಸನ್​ ಅಲ್ಲಿ ಲುವ್ನಿತ್ ಸಿಸೋಡಿಯಾ ಎನ್ನುವ ಆರ್​ಸಿಬಿ ಆಟಗಾರ ಇಂಜುರಿಗೆ ಒಳಗಾಗಿದ್ದರಿಂದ ಆ ಸ್ಥಾನಕ್ಕೆ ರಜತ್​ ಪಾಟೀದಾರ್ ಅವರನ್ನು ಆಯ್ಕೆ ಮಾಡಲಾಗಿತ್ತು. ಈ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡ ರಜತ್, ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಬೆಂಗಳೂರು ಪರವಾಗಿ 54 ಎಸೆತಗಳಲ್ಲಿ ಅಜೇಯ 112 ರನ್ ಗಳಿಸಿ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್​ ನೀಡಿದ್ದರು. ಈ ಸೀಸನ್​ನಲ್ಲಿ ಕೇವಲ 8 ಪಂದ್ಯಗಳನ್ನು ಆಡಿದ್ದ ಅವರು ಒಟ್ಟು 333 ರನ್​ಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದರು. ಇಲ್ಲಿಂದಲೇ ರಜತ್​ರನ್ನು ಎಲ್ಲರೂ ಗುರುತಿಸಲು ಪ್ರಾರಂಭಿಸಲಾಯಿತು ಎನ್ನಲಾಗುತ್ತಿದೆ.

2022ರಲ್ಲಿ ಉತ್ತಮ ಪರ್ಫಾಮೆನ್ಸ್​ ನೀಡಿದ್ದ ರಜತ್ ಅವರನ್ನು ಆರ್​ಸಿಬಿ 2023ರಲ್ಲಿ ರಿಟೈನ್ ಮಾಡಿಕೊಂಡಿತು. 2025ರ ಐಪಿಎಲ್​ ಸೀಸನ್​ಗೂ ಮೊದಲು ನಡೆದ ಆರ್​ಸಿಬಿಯ ರಿಟೈನ್​ ಲಿಸ್ಟ್​ನಲ್ಲಿ ಮೂವರು ಆಟಗಾರರ ಪೈಕಿ ರಜತ್ ಕೂಡ ಒಬ್ಬರಾಗಿದ್ದಾರೆ. ಅಲ್ಲದೇ ಈ ಬಾರಿಯ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮಧ್ಯಪ್ರದೇಶದ ಕ್ಯಾಪ್ಟನ್​ ಆಗಿ ಉತ್ತಮ ರೀತಿಯಲ್ಲೇ ತಂಡವನ್ನು ಮುನ್ನಡೆಸಿದ್ದರು. ಈ ಎಲ್ಲ ಕಾರಣಗಳಿಂದ ಆರ್​ಸಿಬಿ ಫ್ರಾಂಚೈಸಿಯು ನಾಯಕನ ಸ್ಥಾನವನ್ನು ನೀಡಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment