ಹೊಸ ಜೆರ್ಸಿ ಬಿಡುಗಡೆ ಮಾಡಿದ RCB; ಅಭಿಮಾನಿಗಳು ಎಲ್ಲಿ ಖರೀದಿ ಮಾಡಬಹುದು..?

author-image
Ganesh
Updated On
ಹೊಸ ಜೆರ್ಸಿ ಬಿಡುಗಡೆ ಮಾಡಿದ RCB; ಅಭಿಮಾನಿಗಳು ಎಲ್ಲಿ ಖರೀದಿ ಮಾಡಬಹುದು..?
Advertisment
  • ಮಾರ್ಚ್​​ 22 ರಿಂದ ಐಪಿಎಲ್-2025 ಆರಂಭ
  • KKR vs RCB ನಡುವೆ ಮೊದಲ ಪಂದ್ಯ ನಡೆಯಲಿದೆ
  • ಆರ್​ಸಿಬಿ ಜರ್ಸಿ ಖರೀದಿಗೆ ಏನು ಮಾಡಬೇಕು?

ಇಂಡಿಯನ್ ಪ್ರೀಮಿಯರ್ ಲೀಗ್ (IPL 2025)ನ 18ನೇ ಆವೃತ್ತಿಯು ಮಾರ್ಚ್ 22 ರಿಂದ ಪ್ರಾರಂಭವಾಗಲಿದೆ. ಅದಕ್ಕಾಗಿ ಎಲ್ಲಾ ತಂಡಗಳು ಸಿದ್ಧತೆ ಪ್ರಾರಂಭಿಸಿವೆ. ವಿರಾಟ್ ಕೊಹ್ಲಿ ಕೂಡ ಕೆಲವೇ ದಿನಗಳಲ್ಲಿ ಆರ್‌ಸಿಬಿ ಕ್ಯಾಂಪ್ ಸೇರಲಿದ್ದಾರೆ. ನಾಯಕ ರಜತ್ ಪಾಟಿದಾರ್ ಸೇರಿದಂತೆ ಹೆಚ್ಚಿನ ಆಟಗಾರರು ಆರ್‌ಸಿಬಿ ಕ್ಯಾಂಪ್ ಸೇರಿಕೊಂಡಿದ್ದಾರೆ.

ಇದರ ಮಧ್ಯೆ ಫ್ರಾಂಚೈಸಿ ತನ್ನ ಹೊಸ ಜೆರ್ಸಿಯನ್ನು ಅನಾವರಣ ಮಾಡಿದೆ. ಅಭಿಮಾನಿಗಳು ಜೆರ್ಸಿಯನ್ನು ಖರೀದಿಸಬಹುದಾಗಿದೆ. ಮಾರ್ಚ್ 17 ರಂದು ಆರ್​ಸಿಬಿ ಅನ್​ಬಾಕ್ಸ್ ಈವೆಂಟ್ ಇದೆ. ಈ ಕಾರ್ಯಕ್ರಮಕ್ಕೂ ಮೊದಲೇ ಜರ್ಸಿಯನ್ನು ಬಿಡುಗಡೆ ಮಾಡಿದೆ.

ಅಭಿಮಾನಿಗಳಿಗೆ ಯಾವಾಗ ಸಿಗುತ್ತೆ..?

ಪೂಮಾದಲ್ಲಿ ಮಾರ್ಚ್​ 12 ಅಂದರೆ ಇಂದಿನಿಂದ ಆರ್​ಸಿಬಿ ಜರ್ಸಿ ಲಭ್ಯ ಇರಲಿದೆ ಎಂದು ತಿಳಿಸಿದೆ. ಅಭಿಮಾನಿಗಳು ಜರ್ಸಿಯನ್ನು ಆರ್‌ಸಿಬಿ ವೆಬ್‌ಸೈಟ್ ಮತ್ತು ಪೂಮಾ ಇಂಡಿಯಾದ ವೆಬ್‌ಸೈಟ್​ನಿಂದ ಖರೀದಿಸಬಹುದಾಗಿದೆ.

ಇದನ್ನೂ ಓದಿ: ದರ್ಶನ್ ಅನ್​​ಫಾಲೋ ಬೆನ್ನಲ್ಲೇ ಸುಮಲತಾ ಪೋಸ್ಟ್; ದಾಸನಿಗೆ ಅಮ್ಮ ಪರೋಕ್ಷ ಟಾಂಗ್..!?

ಮಾರ್ಚ್​​ 22 ಮೊದಲ ಪಂದ್ಯ

ರಜತ್ ಪಟಿದಾರ್ ನಾಯಕತ್ವದಲ್ಲಿ, ಆರ್​ಸಿಬಿ ಮಾರ್ಚ್ 22 ರಂದು ಮೊದಲ ಪಂದ್ಯವನ್ನು ಆಡಲಿದೆ. ಕಳೆದ ವರ್ಷ ಚಾಂಪಿಯನ್ ಆಗಿರುವ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯವು ಕೋಲ್ಕತ್ತಾದ ಈಡನ್ ಗಾರ್ಡನ್​ನಲ್ಲಿ ನಡೆಯಲಿದೆ.

ಆರ್‌ಸಿಬಿ ತಂಡ

ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ದೇವದತ್ ಪಡಿಕ್ಕಲ್, ಸ್ವಸ್ತಿಕ್ ಚಿಕಾರ, ಲಿಯಾಮ್ ಲಿವಿಂಗ್‌ಸ್ಟೋನ್, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಮನೋಜ್ ಭಂಡ್ಗೆ, ಜಾಕೋಬ್ ಬೆಥೆಲ್, ಜೋಶ್ ಹ್ಯಾಜಲ್‌ವುಡ್, ರಸಿಕ್ ದಾರ್, ಸುಯಾಶ್ ಶರ್ಮಾ, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ಲುಂಗಿ ಎನ್‌ಗಿಡಿ, ಅಭಿನಂದನ್ ಸಿಂಗ್, ಮೋಹಿತ್ ರಾಥಿ, ಯಶ್ ದಯಾಳ್.

ಇದನ್ನೂ ಓದಿ: ಗೆಲುವಿನೊಂದಿಗೆ WPLಗೆ ವಿದಾಯ ಹೇಳಿದ RCB; ‘ಮುಂದಿನ ಸಲ ಕಪ್ ನಮ್ದೆ’ ಎಂದ ಮಂದಾನ ಪಡೆ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment