/newsfirstlive-kannada/media/post_attachments/wp-content/uploads/2024/11/RCB.jpg)
2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜು ಮುಗಿದಿದೆ. ಐಪಿಎಲ್ ಮುಂದಿನ ಸೀಸನ್ ಆರಂಭಕ್ಕೆ ಇನ್ನೇನು ಕೇವಲ 10 ದಿನ ಬಾಕಿ ಇದೆ. ಕಳೆದ 17 ಸೀಸನ್ಗಳಿಂದಲೂ ಕಪ್ ಗೆಲ್ಲುವಲ್ಲಿ ಎಡವಿದ ಆರ್ಸಿಬಿ ಈ ಬಾರಿ ಮೆಗಾ ಹರಾಜಿನಲ್ಲಿ ಸ್ಟಾರ್ ಆಟಗಾರರನ್ನು ಖರೀದಿಸಿ ಬಲಿಷ್ಠ ತಂಡ ಕಟ್ಟಿದೆ. ಅದರಲ್ಲೂ ಯುವ ಆಟಗಾರರಿಗೆ ಮಣೆ ಹಾಕಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಟ್ರೋಫಿ ಗೆಲ್ಲಲು ಈಗಾಗಲೇ ತಯಾರಿ ಶುರು ಮಾಡಿದೆ.
ಎಂ. ಚಿನ್ನಸ್ವಾಮಿ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಆರ್ಸಿಬಿ ತಂಡದ ಸ್ಟಾರ್ ಆಟಗಾರರು ತಯಾರಿ ಆರಂಭಿಸಿದ್ದಾರೆ. ಈ ಬಾರಿ ಕಪ್ ಗೆಲ್ಲಲೇಬೇಕು ಎಂದು ಆರ್ಸಿಬಿ ಮ್ಯಾನೇಜ್ಮೆಂಟ್ ನಿರ್ಧಾರಕ್ಕೆ ಬಂದಿದೆ. ಹಾಗಾಗಿ ಆರ್ಸಿಬಿ ಹೆಡ್ ಕೋಚ್ ಆ್ಯಂಡಿ ಫ್ಲವರ್ ದೇಶೀಯ ಆಟಗಾರರೊಂದಿಗೆ ಅಭ್ಯಾಸ ಮಾಡಿಸುತ್ತಿದ್ದಾರೆ.
ಆರ್ಸಿಬಿ ತಂಡದಲ್ಲಿ ಮೇಜರ್ ಸರ್ಜರಿ
2024ರ ಐಪಿಎಲ್‌ನಲ್ಲಿ ಪ್ಲೇ ಆಫ್ ಬಹಳ ರೋಚಕತೆಯಿಂದ ಕೂಡಿತ್ತು. ಆರಂಭದಲ್ಲಿ ಸತತ ಸೋಲು ಕಂಡಿದ್ದ ಆರ್ಸಿಬಿ ಬಳಿಕ 7 ಪಂದ್ಯ ಗೆದ್ದು ಆರ್ಸಿಬಿ ಪ್ಲೇ ಆಫ್‌ಗೆ ಪ್ರವೇಶಿಸಿತ್ತು. ಬಳಿಕ ಸೆಮೀಸ್ನಲ್ಲಿ ರಾಜಸ್ಥಾನ್ ಮೇಲೆ ಸೋತು ನಿರಾಸೆ ಮೂಡಿಸಿದ್ರು. ಹಾಗಾಗಿ ಮುಂದಿನ ಸೀಸನ್ಗೆ ಆರ್ಸಿಬಿ ತಂಡದಲ್ಲಿ ಮೇಜರ್ ಸರ್ಜರಿ ಆಗಲಿದೆ ಎಂದು ಫ್ಯಾನ್ಸ್ ನಿರೀಕ್ಷೆ ಮಾಡಿದ್ದರು.
ನಿರೀಕ್ಷೆಯಂತೆ ಹರಾಜಿಗೆ ಮುನ್ನ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿತ್ತು. ಅದಕ್ಕೆ ತಕ್ಕಂತೆ ವಿರಾಟ್ ಕೊಹ್ಲಿ, ರಜತ್ ಪಟಿದಾರ್ ಮತ್ತು ಯಶ್ ದಯಾಳ್ ಅವರನ್ನು ಮಾತ್ರ ರೀಟೈನ್ ಮಾಡಿಕೊಂಡು ಎಲ್ಲರನ್ನು ರಿಲೀಸ್ ಮಾಡಲಾಗಿತ್ತು.
ಆರ್ಟಿಎಂ ಕಾರ್ಡ್ ಬಳಸಲು ನೋ ಎಂದ ಆರ್ಸಿಬಿ
ಮೆಗಾ ಹರಾಜಿನಲ್ಲಿ ಆರ್ಸಿಬಿ ಪ್ರಮುಖ ಆಟಗಾರರನ್ನು ಆರ್ಟಿಎಂ ಕಾರ್ಡ್ ಬಳಸಿ ಖರೀದಿ ಮಾಡಬಹುದು ಎಂದು ನಿರೀಕ್ಷಿಸಲಾಗಿತ್ತು. ಸ್ವಪ್ನಿಲ್ ಸಿಂಗ್ ಹೊರತುಪಡಿಸಿ ಮತ್ಯಾರಿಗೂ ಆರ್ಟಿಎಂ ಕಾರ್ಡ್ ಬಳಸಲಿಲ್ಲ. ಹಾಗಾಗಿ ವಿಲ್ ಜ್ಯಾಕ್ಸ್, ಮೊಹಮ್ಮದ್ ಸಿರಾಜ್, ಮ್ಯಾಕ್ಸ್‌ವೆಲ್, ಫಾಫ್ ಡುಪ್ಲೆಸಿಸ್ ಸೇರಿದಂತೆ ಎಲ್ಲಾ ಆಟಗಾರರು ವಿವಿಧ ತಂಡಗಳ ಪಾಲಾದರು.
ಐಪಿಎಲ್ ಮೆಗಾ ಹರಾಜಿನಲ್ಲಿ ಫಿಲ್ ಸಾಲ್ಟ್, ಜೋಶ್ ಹೇಜಲ್ವುಡ್, ಜೇಕಬ್ ಬೆಥೆಲ್, ಭುವನೇಶ್ವರ್ ಕುಮಾರ್, ಲಿಯಾಮ್ ಲಿವಿಂಗ್‌ಸ್ಟೋನ್ ಅವರನ್ನು ಖರೀದಿ ಮಾಡಿದೆ. ಈ ಬಾರಿ ತಂಡ ಬಲಿಷ್ಠವಾಗಿದ್ದು, ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ. ಸದ್ಯ ನಡೆಯುತ್ತಿರೋ ಆರ್ಸಿಬಿ ಕ್ಯಾಂಪ್ನಲ್ಲಿ ಕೃನಾಲ್ ಪಾಂಡ್ಯ, ಭುವಿ, ರಜತ್ ಪಾಟಿದಾರ್, ಜಿತೇಶ್ ಶರ್ಮಾ, ಯಶ್ ದಯಾಳ್ ಮತ್ತು ರಸಿಖ್ ದಾರ್ ಸೇರಿ ಹಲವರು ಭಾಗಿಯಾಗಿದ್ದರು. ಆರ್ಸಿಬಿ ದೇಶಿಯ ಆಟಗಾರರ ಕೋರ್ ಟೀಮ್ ಕಟ್ಟಲು ಕ್ಯಾಂಪ್ ನಡೆಸುತ್ತಿದ್ದು, ಇವರ ಅಸಲಿ ಪ್ಲಾನ್ ಲೀಕ್ ಆಗಿದೆ.
ಇದನ್ನೂ ಓದಿ:ಒಂದು ಲೋಟ ಬಿಸಿ ನೀರು ಕುಡಿಯೋದರಿಂದ ಈ ಕಾಯಿಲೆಗಳು ಮಾಯ; ನೀವು ಓದಲೇಬೇಕಾದ ಸ್ಟೋರಿ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್