ಆರ್​ಸಿಬಿ ಮುಂದಿನ ಪಂದ್ಯ ಯಾವಾಗ..? ಅಭಿಮಾನಿಗಳು ಓದಲೇಬೇಕಾದ ಸ್ಟೋರಿ..!

author-image
Ganesh
Updated On
ಆರ್​ಸಿಬಿ ಮುಂದಿನ ಪಂದ್ಯ ಯಾವಾಗ..? ಅಭಿಮಾನಿಗಳು ಓದಲೇಬೇಕಾದ ಸ್ಟೋರಿ..!
Advertisment
  • ಮತ್ತೊಂದು ಹೈ-ವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿ ಆಗ್ತಿದೆ ಚಿನ್ನಸ್ವಾಮಿ
  • ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದುಕೊಂಡಿರುವ ಆರ್​ಸಿಬಿ
  • ತವರಲ್ಲಿ ನಡೆದ ನಡೆದ ಪಂದ್ಯದಲ್ಲಿ ಸೋತಿರುವ ಆರ್​ಸಿಬಿ

ನಾಲ್ಕು ಪಂದ್ಯಗಳಲ್ಲಿ ಮೂರು ಮ್ಯಾಚ್​ ಗೆದ್ದಿರುವ ಆರ್​ಸಿಬಿ ಅಭಿಮಾನಿಗಳಿಗೆ ನಾಳೆ ಮತ್ತೊಂದು ರೋಚಕ ಕ್ಷಣ ಕಾದಿದೆ. ಈ ಬಾರಿಯ ಐಪಿಎಲ್​ನಲ್ಲಿ ಸೋಲನ್ನೇ ಕಾಣದೇ ಮುನ್ನುಗ್ಗುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಆರ್​ಸಿಬಿ ಸೆಣಸಾಟ ನಡೆಸಲಿದೆ.

ಎಲ್ಲಿ ನಡೆಯುತ್ತೆ ಮ್ಯಾಚ್..?

ವಿಶೇಷ ಅಂದರೆ ನಾಳೆ ಮ್ಯಾಚ್​ ನಡೆಯೋದು ಬೆಂಗಳೂರಲ್ಲಿ. ತವರಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ಆರ್​ಸಿಬಿ ತಂಡ ಇನ್ನೊಂದು ಗೆಲುವಿಗಾಗಿ ಪೈಪೋಟಿ ನಡೆಸಲಿದೆ. ಸಂಜೆ 7 ಗಂಟೆಗೆ ಟಾಸ್​ ಪ್ರಕ್ರಿಯೆ ನಡೆದು 7.30ಕ್ಕೆ ಪಂದ್ಯ ಆರಂಭಗೊಳ್ಳಲಿದೆ. ಸ್ಟಾರ್​ ಸ್ಪೋರ್ಟ್ಸ್​ ವಾಹಿನಿಗಳಲ್ಲಿ ಪಂದ್ಯದ ನೇರಪ್ರಸಾರ ಇರಲಿದೆ. ಇನ್ನು ಮೊಬೈಲ್​​ನಲ್ಲಿ ಜಿಯೋ ಆ್ಯಪ್​ ಮೂಲಕ ಪಂದ್ಯ ನೋಡಬಹುದು. ಬೆಂಗಳೂರಿನಲ್ಲಿ ಇರೋದು ಟಿಕೆಟ್ ಖರೀದಿಸಿ ಮೈದಾನದಲ್ಲೇ ವೀಕ್ಷಣೆ ಮಾಡಬಹುದಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್​ ಇಲ್ಲಿಯವರೆಗೆ ಮೂರು ಪಂದ್ಯಗಳನ್ನು ಆಡಿದೆ. ಮೂರರಲ್ಲಿ ಮೂರೂ ಪಂದ್ಯವನ್ನೂ ಗೆದ್ದು ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇನ್ನು ನಮ್ಮ ಆರ್​ಸಿಬಿ ಕೂಡ ಗೆಲುವಿನಲ್ಲಿ ಹಿಂದೆ ಬಿದ್ದಿಲ್ಲ. ಮೂರು ಪಂದ್ಯಗಳನ್ನು ಗೆದ್ದುಕೊಂಡು ನೆಟ್​ ರನ್​ರೇಟ್ ಆಧಾರದ ಮೇಲೆ ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ಇದನ್ನೂ ಓದಿ: ಬಿಜೆಪಿ ಸೇರಿದ ಮಾಜಿ ಸ್ಟಾರ್​ ಕ್ರಿಕೆಟರ್.. ಇವರು ಆರ್​ಸಿಬಿಯಲ್ಲೂ ಆಡಿದ್ದರು..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment