CSK ಸೋಲಿಸಿದ್ದು ಆಯ್ತು.. ಆರ್​ಸಿಬಿ ಮುಂದಿನ ಟಾರ್ಗೆಟ್​ ಯಾರು..?

author-image
Ganesh
Updated On
CSK ವಿರುದ್ಧ ಭರ್ಜರಿ ಗೆಲುವು; ಕ್ಯಾಪ್ಟನ್ ಪಾಟೀದಾರ್​ ಕ್ರೆಡಿಟ್ ಕೊಟ್ಟಿದ್ದು ಯಾರಿಗೆ..?
Advertisment
  • ಆರ್​​ಸಿಬಿ ಮುಂದಿನ ಪಂದ್ಯ ಯಾವಾಗ ನಡೆಯುತ್ತೆ?
  • ಎಂ.ಚಿನ್ನಸ್ವಾಮಿ ಮೈದಾನದಲ್ಲಿ ಆರ್​ಸಿಬಿ ಮ್ಯಾಚ್
  • ಪಾಯಿಂಟ್ಸ್ ಟೇಬಲ್​ನಲ್ಲಿ ಅಗ್ರಸ್ಥಾನದಲ್ಲಿರುವ RCB

ಚೆನ್ನೈ ಸೂಪರ್ ಕಿಂಗ್ಸ್​ ಸೋಲಿಸುವ ಮೂಲಕ ಆರ್​ಸಿಬಿ, 18ನೇ ಆವೃತ್ತಿಯಲ್ಲಿ ಸತತ ಎರಡನೇ ಗೆಲುವು ಸಾಧಿಸಿದೆ. ಬೆನ್ನಲ್ಲೇ ಆರ್​ಸಿಬಿ ಮುಂದಿನ ಟಾರ್ಗೆಟ್​ ಗುಜರಾತ್ ಟೈಟನ್ಸ್​!

ಏಪ್ರಿಲ್ 2 ರಂದು ಗುರಾತ್ ಟೈಟನ್ಸ್ ವಿರುದ್ಧ ಆರ್​ಸಿಬಿ ಮುಂದಿನ ಮ್ಯಾಚ್ ಆಡಲಿದೆ. ವಿಶೇಷ ಅಂದ್ರೆ ಈ ಮ್ಯಾಚ್ ಬೆಂಗಳೂರಲ್ಲಿ ನಡೆಯಲಿದೆ. ಎಂದಿನಂತೆ ಸಂಜೆ 7.30ಕ್ಕೆ ಪಂದ್ಯ ನಡೆಯಲಿದೆ. ಗುಜರಾತ್ ಟೈಟನ್ಸ್​ ಈಗಾಗಲೇ ಐಪಿಎಲ್​ನಲ್ಲಿ ಒಂದು ಪಂದ್ಯಗಳನ್ನ ಆಡಿದೆ. ಮಾರ್ಚ್​ 25 ರಂದು ಪಂಜಾಬ್ ವಿರುದ್ಧ ನಡೆದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್​ ಸೋಲನ್ನು ಕಂಡಿದೆ. ಇಂದು ಮುಂಬೈ ಇಂಡಿಯನ್ಸ್ ವಿರುದ್ಧ ಸೆಣಸಾಟ ನಡೆಸಲಿದೆ.

ಇದನ್ನೂ ಓದಿ: 21 ರನ್​ ನೀಡಿ 3 ವಿಕೆಟ್ ಕಿತ್ತ ಹೇಜಲ್​ವುಡ್..​ ವಿನ್ನಿಂಗ್ ದೃಶ್ಯ ಹಂಚಿಕೊಂಡ ಆರ್​ಸಿಬಿ -VIDEO

ಇನ್ನು, ಆರ್​ಸಿಬಿ ಇಲ್ಲಿಯವರೆಗೆ ಎರಡು ಪಂದ್ಯಗಳನ್ನ ಆಡಿದೆ. ಮೊದಲ ಪಂದ್ಯ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಆಡಿತ್ತು. ಈ ಪಂದ್ಯವನ್ನು ಆರ್​ಸಿಬಿ ಗೆದ್ದುಕೊಂಡಿದೆ. ಇನ್ನು ನಿನ್ನೆಯ ಪಂದ್ಯದಲ್ಲಿ ಸಿಎಸ್​ಕೆ ವಿರುದ್ಧ ಭರ್ಜರಿ ಅಂದರೆ 50 ರನ್​ಗಳ ಅಂತರದಲ್ಲಿ ಗೆಲುವು ಸಾಧಿಸಿದೆ. ಟಾಸ್​ ಗೆದ್ದು ಬ್ಯಾಟ್ ಮಾಡಿದ್ದ ಆರ್​ಸಿಬಿ 7 ವಿಕೆಟ್ ಕಳೆದುಕೊಂಡು 196 ರನ್​ಗಳಿಸಿತ್ತು. ಈ ಗುರಿಯನ್ನು ಬೆನ್ನು ಹತ್ತಿದ್ದ ಸಿಎಸ್​ಕೆ 8 ವಿಕೆಟ್ ಕಳೆದುಕೊಂಡು 146 ರನ್​​ಗಳಿಸಿ ಸೋಲಿಗೆ ಶರಣಾಯ್ತು. ಆ ಮೂಲಕ ಎರಡು ಪಂದ್ಯಗಳನ್ನು ಗೆದ್ದಿರುವ ಆರ್​ಸಿಬಿ ಪಾಯಿಂಟ್ಸ್ ಟೇಬಲ್​ನಲ್ಲಿ ಮೊದಲ ಸ್ಥಾನದಲ್ಲಿದೆ.

ಇದನ್ನೂ ಓದಿ: ಬ್ಯಾಗ್ ಹಿಡಿದು, ಆ್ಯಪಲ್ ತಿನ್ನುತ್ತ ಜೈಲಿನಿಂದ ಹೊರಬಂದ ವಿನಯ್, ರಜತ್ ಕಿಶನ್..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment