ಆರ್​ಸಿಬಿ ಟಾರ್ಗೆಟ್​ ಪ್ಲೇ-ಆಫ್.. ಮುಂದಿನ ಪಂದ್ಯ ಬೆಂಗಳೂರಲ್ಲಿ, ಯಾವಾಗ ನಡೆಯುತ್ತೆ..?

author-image
Ganesh
Updated On
RCB ಗೆಲುವಿನ ಹಿಂದಿನ ಹೀರೋಗಳು ಯಾರು..? ಕಿಂಗ್​ ಕೊಹ್ಲಿ, ಫಿಲ್ ಸಾಲ್ಟ್​ ಅಲ್ಲವೇ ಅಲ್ಲ!
Advertisment
  • ಪ್ಲೇ-ಆಫ್ ಕನಸು ಕಾಣ್ತಿರುವ ಆರ್​ಸಿಬಿಗೆ RR​ ಸವಾಲು
  • ಪ್ಲೇ-ಆಫ್​ಗೆ ಹೋಗಲು ಆರ್​​ಸಿಬಿ ಇನ್ನೂ ಎಷ್ಟು ಪಂದ್ಯ ಗೆಲ್ಬೇಕು?
  • ಆರ್​ಸಿಬಿ ಕೋಟಾದ 8 ಪಂದ್ಯಗಳು ಮುಗಿದಿವೆ, ಎಷ್ಟು ಬಾಕಿ..?

ಪ್ಲೇ-ಆಫ್ ಟಾರ್ಗೆಟ್ ಮಾಡಿರುವ ಆರ್​ಸಿಬಿ, ಭಾರೀ ವಿಶ್ವಾಸದಲ್ಲಿದೆ. ಅಂದ್ಹಾಗೆ ಆರ್​ಸಿಬಿಗೆ ಉಳಿದಿರೋದು ಕೇವಲ 6 ಪಂದ್ಯಗಳು ಮಾತ್ರ. ಈ ಆರು ಪಂದ್ಯಗಳಲ್ಲಿ ಕನಿಷ್ಠ ಮೂರು ಪಂದ್ಯಗಳನ್ನಾದರೂ ಗೆಲ್ಲಲೇಬೇಕಿದೆ.

ಆರ್​ಸಿಬಿ ಮ್ಯಾಚ್ ಯಾವಾಗ..?

ಆರ್​ಸಿಬಿ ಮುಂದಿನ ಎದುರಾಳಿ ರಾಜಸ್ಥಾನ್ ರಾಯಲ್ಸ್. ಏಪ್ರಿಲ್ 24 ರಂದು ಅಂದರೆ ಇದೇ ಗುರುವಾರ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ರಿಯಾನ್ ಪರಾಗ್ ನೇತೃತ್ವದ ತಂಡದ ಜೊತೆ ಸೆಣಸಾಟ ನಡೆಸಲಿದೆ.

ಇದನ್ನೂ ಓದಿ: ಆರೆಂಜ್ ಕ್ಯಾಪ್​​ ರೇಸ್​​ನಲ್ಲಿ ವಿರಾಟ್ ಕೊಹ್ಲಿ.. ಹೆಚ್ಚು ರನ್​ ಗಳಿಸಿದ ಆಟಗಾರ ಯಾರು?

ಈ ಬಾರಿಯ ಐಪಿಎಲ್​ನಲ್ಲಿ ಆರ್​ಸಿಬಿ ಒಟ್ಟು ಮೂರು ಪಂದ್ಯಗಳನ್ನು ಬೆಂಗಳೂರಲ್ಲಿ ಆಡಿದೆ. ದುರಾದೃಷ್ಟವಶಾತ್ ಮೂರೂ ಪಂದ್ಯವನ್ನೂ ಆರ್​ಸಿಬಿ ಕೈಚೆಲ್ಲಿದೆ. ಹೀಗಾಗಿ ನಾಡಿದ್ದು ನಡೆಯುವ ಪಂದ್ಯವನ್ನು ಗೆದ್ದು ಬೀಗಲು ರಜತ್ ಪಾಟೀದಾರ್ ಪಡೆ ಪ್ಲಾನ್ ಮಾಡಿಕೊಂಡಿದೆ. ಅಂದ್ಹಾಗೆ ಆರ್​ಸಿಬಿ ಒಟ್ಟು 8 ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಐದು ಮ್ಯಾಚ್​ ವಿನ್ ಆಗಿದೆ.

ಸೋತಿರುವ ಎಲ್ಲಾ ಪಂದ್ಯಗಳು ಬೆಂಗಳೂರಲ್ಲಿ ನಡೆದಿವೆ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಾದರೂ ಆರ್​​ಸಿಬಿ ಹೋಂಗ್ರೌಂಡ್ ಅಡ್ವಾಂಟೇಜ್ ಪಡೆದುಕೊಳ್ಳಬೇಕಿದೆ. ರಾಜಸ್ಥಾನ್ ರಾಯಲ್ಸ್​ ತಂಡದ ಪರ್ಫಾರ್ಮೆನ್ಸ್ ಈ ಬಾರಿ ಇಂಪ್ರೆಸೀವ್ ಆಗಿಲ್ಲ. 8 ಪಂದ್ಯವನ್ನಾಡಿರುವ ರಾಜಸ್ಥಾನ್, ಗೆದ್ದಿರೋದು ಕೇವಲ 2 ಪಂದ್ಯ ಮಾತ್ರ. ಹೀಗಾಗಿ ಚಿನ್ನಸ್ವಾಮಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮಣಿಸಬಹುದು ಎಂಬ ಲೆಕ್ಕಾಚಾರದಲ್ಲಿ ಆರ್​ಸಿಬಿ ಟೀಂ ಇದೆ.

ಇದನ್ನೂ ಓದಿ: ಆರೆಂಜ್ ಕ್ಯಾಪ್​​ ರೇಸ್​​ನಲ್ಲಿ ವಿರಾಟ್ ಕೊಹ್ಲಿ.. ಹೆಚ್ಚು ರನ್​ ಗಳಿಸಿದ ಆಟಗಾರ ಯಾರು?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment