ಚಿನ್ನಸ್ವಾಮಿಯಲ್ಲಿ RCB ಮ್ಯಾಚ್; ಪಂಜಾಬ್ ಮಣಿಸಲು ಓರ್ವ ಬ್ಯಾಟರ್​ ಮೇಲೆ ಭಾರೀ ನಂಬಿಕೆಯಿಟ್ಟ ರಜತ್..!

author-image
Ganesh
Updated On
ಆರ್​ಸಿಬಿಗೆ ಇಂದಿನಿಂದ ಸೆಕೆಂಡ್ ಇನ್ನಿಂಗ್ಸ್.. ಇನ್ನೂ ಎಷ್ಟು ಪಂದ್ಯ ಬಾಕಿ ಇದೆ..?
Advertisment
  • ಪಂಜಾಬ್​-ಆರ್​​ಸಿಬಿ ಕದನಕ್ಕೆ ಕೌಂಟ್​ಡೌನ್​
  • ಮನೆ ಹೊರಗೆ ಅಬ್ಬರ.. ತವರಿನಲ್ಲಿ ಬೇಸರ..!
  • ಚಿನ್ನಸ್ವಾಮಿಯಲ್ಲಿ 2 ಪಂದ್ಯ ಸೋತಿರುವ ಆರ್​ಸಿಬಿ

ರಾಜಸ್ಥಾನ್​ ವಿರುದ್ಧದದ ರಾಯಲ್​ ಜಯ ಸಾಧಿಸಿದ ಆರ್​​ಸಿಬಿ ಇದೀಗ ಪಂಜಾಬ್​ಗೆ ಪಂಚ್​ ಕೊಡೋಕೆ ರೆಡಿಯಾಗಿದೆ. ಹೋಮ್​​ಗ್ರೌಂಡ್​ನಲ್ಲಿ ಮೊದಲ ಗೆಲುವಿನ ಹುಡುಕಾಟದಲ್ಲಿರೋ ಆರ್​​ಸಿಬಿ, ಪಂಜಾಬ್​ ಕಿಂಗ್​ ಮಣಿಸೋಕೆ ಕಿಂಗ್​ ಕೊಹ್ಲಿಯನ್ನ ನೆಚ್ಚಿಕೊಂಡಿದೆ.

ಪಂಜಾಬ್​​ ಕಿಂಗ್ಸ್​ vs ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಗಳು ಚಿನ್ನಸ್ವಾಮಿ ಬ್ಯಾಟಲ್​ಫೀಲ್ಡ್​ನಲ್ಲಿ ಶುಕ್ರವಾರ ಮುಖಾಮುಖಿಯಾಗಲಿವೆ. ಈ ಹಿಂದಿನ ಸೀಸನ್​​ಗಳಿಗೆ ಹೋಲಿಸಿದ್ರೆ ಎರಡೂ ತಂಡಗಳು ಈ ಬಾರಿ ಡಿಫರೆಂಟ್​ ಗೇಮ್​ ಆಡ್ತಿವೆ. ಬ್ಯಾಟಿಂಗ್​​, ಬೌಲಿಂಗ್​ ಎರಡರಲ್ಲೂ ಎರಡೂ ತಂಡಗಳು ಸಖತ್​ ಸ್ಟ್ರಾಂಗ್​ ಅನ್ನಿಸಿವೆ. ಹೀಗಾಗಿ ಬಲಿಷ್ಟ ತಂಡಗಳ ಹಣಾಹಣಿಯ ಫೀವರ್​ ಈಗಲೇ ಬೆಂಗಳೂರನ್ನ ಆವರಿಸಿದೆ.

ತವರಿನಲ್ಲಿ ಬೇಸರ

ಚಿನ್ನಸ್ವಾಮಿಯಲ್ಲಿ ಯಾವುದೇ ಪಂದ್ಯ ನಡೀಲಿ ಇದರ ಸೆಂಟರ್​ ಅಫ್ ಅಟ್ರಾಕ್ಷನ್​ ವಿರಾಟ್​ ಕೊಹ್ಲಿ. ವಿರಾಟನ ವೀರಾವೇಷ ನೋಡೋಕೆ ಅಂತಾನೇ ಬಹುತೇಕ ಫ್ಯಾನ್ಸ್​ ಸ್ಟೇಡಿಯಂಗೆ ಬರೋದು. ಫ್ಯಾನ್ಸ್​ಗೆ ಈ ಸೀಸನ್​ನಲ್ಲಿ ಕೊಹ್ಲಿ ಬೇಸರ ಮೂಡಿಸಿದ್ದಾರೆ. ಆಡಿದ ಎರಡೂ ಪಂದ್ಯಗಳಲ್ಲಿ ಫ್ಲಾಪ್​ ಶೋ ನೀಡಿದ್ದಾರೆ. ಗುಜರಾತ್​ ಟೈಟನ್ಸ್​ ವಿರುದ್ಧದ ಪಂದ್ಯದಲ್ಲಿ ಕೇವಲ 7 ರನ್​ಗಳಿಸಿ ಔಟಾದ ಕೊಹ್ಲಿ, ಡೆಲ್ಲಿ ಕ್ಯಾಪಿಟಲ್ಸ್​ ಎದುರೂ ಮಿಂಚಲಿಲ್ಲ. 2 ಸಾಲಿಡ್​ ಸಿಕ್ಸರ್​, 1 ಆಕರ್ಷಕ ಬೌಂಡರಿ ಬಾರಿಸಿದ್ರು ನಿಜ! ಬಿಗ್​ ಸ್ಕೋರ್​​ಗಳಿಸದೇ ನಿರಾಸೆ ಮೂಡಿಸಿದ್ರು. ಅವೇ ಮ್ಯಾಚ್​​ಗಳಲ್ಲಿ ಆರ್ಭಟಿಸ್ತಿರೋ ಕಿಂಗ್​ ಕೊಹ್ಲಿ ತವರಿನಲ್ಲಿ ಅಲ್ಪ ಮೊತ್ತಕ್ಕೆ ಔಟಾಗ್ತಿರೋದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.

‘ಪಂಚ್’​ ಕೊಡ್ತಾರಾ ಕೊಹ್ಲಿ?

ಚಿನ್ನಸ್ವಾಮಿಯಲ್ಲಿ ಸೀಸನ್​​ನ 3ನೇ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಒನ್ಸ್​​ ಅಗೇನ್​ ಕಿಂಗ್​ ಕೊಹ್ಲಿಯ ಮೇಲೆ ನಿರೀಕ್ಷೆಗಳು ಗರಿಗೆದರಿವೆ. ಪಂಜಾಬ್​ ಕಿಂಗ್ಸ್​ಗೆ ಕೊಹ್ಲಿ ಪಂಚ್​ ಕೊಡ್ತಾರಾ ಅನ್ನೋ ಕುತೂಹಲದ ಪ್ರಶ್ನೆ ಅಭಿಮಾನಿಗಳಲ್ಲಿದೆ. ಈ ಸೀಸನ್​ ಐಪಿಎಲ್​ನಲ್ಲಿ ಬೆಂಗಳೂರಿನಲ್ಲಿ ಫೇಲ್​ ಆಗಿರಬಹುದು. ಅವೇ ಪಂದ್ಯಗಳಲ್ಲಿ ಕೊಹ್ಲಿ ಫಸ್ಟ್​​ ಕ್ಲಾಸ್​​ ಆಟವಾಡಿದ್ದಾರೆ. ಅದ್ರಲ್ಲೂ ಮೊನ್ನೆ ರಾಜಸ್ಥಾನ ವಿರುದ್ಧ ಆಡಿದ ಇನ್ನಿಂಗ್ಸ್​​ ಅಂತೂ ಕ್ಲಾಸಿಕ್​.

ಸಾಲಿಡ್​​ ರಿದಮ್​ ಕಂಡುಕೊಂಡಿರೋ ಕೊಹ್ಲಿಗೆ ಪಂಜಾಬ್​ ವಿರುದ್ಧ ಘರ್ಜಿಸೋದು ದೊಡ್ಡ ಟಾಸ್ಕೇ ಅಲ್ಲ. ಪಂಜಾಬ್​ ಒಂಥರಾ ಕೊಹ್ಲಿಯ ಫೇವರಿಟ್​ ಎದುರಾಳಿ. ಕಳೆದ ಸೀಸನ್​ನ ಮುಖಾಮುಖಿ ಇದಕ್ಕೆ ಬೆಸ್ಟ್​ ಎಕ್ಸಾಂಪಲ್​. ಈಗ ಚಿನ್ನಸ್ವಾಮಿಯಲ್ಲಿ ಆಡ್ತಿಲ್ಲ ಟೀಕೆ ಬರ್ತಿವೆ. ಹಾಗೇ, ಕಳೆದ ಸೀಸನ್​ನಲ್ಲಿ ಕೊಹ್ಲಿಯ ಸ್ಟ್ರೈಕ್​ರೇಟ್​ ತೀವ್ರ ಚರ್ಚೆಗೆ ಕಾರಣವಾಗಿತ್ತು. ಇದೇ ಪಂಜಾಬ್​ ವಿರುದ್ಧ ಘರ್ಜಿಸಿದ್ದ ಕೊಹ್ಲಿ ಆ ಟೀಕೆಗಳಿಗೆ ಆನ್ಸರ್​ ಕೊಟ್ಟಿದ್ರು.

ಇದನ್ನೂ ಓದಿ:  ಚಹಾಲ್​​ ಮ್ಯಾಜಿಕ್, 95 ರನ್​​​ಗೆ KKR ಆಲೌಟ್.. ಐಪಿಎಲ್​​ನಲ್ಲಿ ಐತಿಹಾಸಿಕ ದಾಖಲೆ..!

publive-image

ಧರ್ಮಶಾಲಾದಲ್ಲಿ ನಡೆದ ಪಂದ್ಯದಲ್ಲಿ 44 ರನ್​ಗೆ 2 ಪ್ರಮುಖ ವಿಕೆಟ್​ ಕಳೆದುಕೊಂಡು ಆರ್​​​ಸಿಬಿ ಸಂಕಷ್ಟಕ್ಕೆ ಸಿಲುಕಿತ್ತು. ಆಗ ಒತ್ತಡದ ನಡುವೆಯೂ ಪಂಜಾಬ್​ ಬೌಲರ್​​ಗಳನ್ನ ಕೊಹ್ಲಿ ಚೆಂಡಾಡಿದ್ರು. 195.74ರ ಸ್ಟ್ರೈಕ್​ರೇಟ್​​ನಲ್ಲಿ ಘರ್ಜಿಸಿದ್ದ ಕೊಹ್ಲಿ, 6 ಭರ್ಜರಿ ಸಿಕ್ಸರ್​, 7 ಬೌಂಡರಿ ಸಹಿತ 47 ಎಸೆತಗಳಲ್ಲೇ 92 ರನ್​ ಚಚ್ಚಿದ್ರು. ಕಳೆದ ಸೀಸನ್​ನ ಒಂದು ಇನ್ನಿಂಗ್ಸ್​​ ಮಾತ್ರವಲ್ಲ. ಪಂಜಾಬ್​ ವಿರುದ್ಧದ ಪಂದ್ಯ ಅಂದ್ರೆ ಕೊಹ್ಲಿಗಿಂತ ಕೊಹ್ಲಿ ಬ್ಯಾಟೇ ಹೆಚ್ಚು ಘರ್ಜಿಸುತ್ತೆ. 2008ರಿಂದಲೂ ಕನ್ಸಿಸ್ಟೆಂಟ್​ ಆಗಿ ವಿರಾಟ್​ ವೀರಾವೇಶ ತೋರಿದ್ದಾರೆ.

ಪಂಜಾಬ್​ ವಿರುದ್ಧ ಕೊಹ್ಲಿ

ಪಂಜಾಬ್​ ಕಿಂಗ್ಸ್​ ವಿರುದ್ಧ ಈವರೆಗೆ 32 ಇನ್ನಿಂಗ್ಸ್​ಗಳಲ್ಲಿ ಬ್ಯಾಟ್​ ಬೀಸಿರುವ ವಿರಾಟ್​ ಕೊಹ್ಲಿ 1030 ರನ್​ಗಳಿಸಿದ್ದಾರೆ. 133.76ರ ಸ್ಟ್ರೈಕ್​ನಲ್ಲಿ ಅಬ್ಬರಿಸಿರೋ ಕೊಹ್ಲಿ 108 ಬೌಂಡರಿ, 32 ಸಿಕ್ಸರ್​ ಸಿಡಿಸಿದ್ದಾರೆ. 1 ಶತಕ ಹಾಗೂ 5 ಅರ್ಧಶತಕ ಬಾರಿಸಿದ್ದಾರೆ. ಪಂಜಾಬ್​ ವಿರುದ್ಧ ಈ ಹಿಂದೆ ಅಬ್ಬರದ ಆಟವಾಡಿರೋ ವಿರಾಟ್​​ ಕೊಹ್ಲಿ ಸದ್ಯ ಸಾಲಿಡ್​ ಫಾರ್ಮ್​ನಲ್ಲಿದ್ದಾರೆ. ಪಂದ್ಯ ನಡೆಯೋ ಚಿನ್ನಸ್ವಾಮಿ ಸ್ಟೇಡಿಯಂನ ಆಳ-ಅಗಲ ಕೂಡ ಕೊಹ್ಲಿಗೆ ಚೆನ್ನಾಗೆ ಗೊತ್ತು. ಪ್ಲೇಯಿಂಗ್​ ಕಂಡಿಷನ್ಸ್​, ಪಿಚ್​ ಬಗ್ಗೆ ತಿಳಿದಿದ್ದಾರೆ. ಹೀಗಾಗಿ ಪಂಜಾಬ್​ ಮೇಲೆ ಕಿಂಗ್​ ಕೊಹ್ಲಿ ಪ್ರಹಾರ ನಡೆಸ್ತಾರೆ ಅನ್ನೋ ನಿರೀಕ್ಷೆ ಎಲ್ಲರಲ್ಲಿದೆ.

ಇದನ್ನೂ ಓದಿ: ಚಿನ್ನಸ್ವಾಮಿಯಲ್ಲಿ ಗೆಲ್ಲಲು ಆರ್​ಸಿಬಿಗೆ ಇದೆ ಈ ಅಸ್ತ್ರ.. ತಪ್ಪು ತಿದ್ದಿಕೊಳ್ಳಲು ಸುವರ್ಣಾವಕಾಶ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment