/newsfirstlive-kannada/media/post_attachments/wp-content/uploads/2025/04/RCB-16.jpg)
ಡೆಲ್ಲಿ ವಿರುದ್ಧ ಸೋಲನ್ನು ಕಂಡಿರುವ ಆರ್ಸಿಬಿ ಮತ್ತೊಂದು ಪಂದ್ಯಕ್ಕೆ ಸಿದ್ಧತೆ ನಡೆಸುತ್ತಿದೆ. ರಾಜಸ್ಥಾನ್ ರಾಯಲ್ಸ್ ವಿರುದ್ಧ ಜೈಪುರದ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಆರ್ಸಿಬಿ ತನ್ನ ಆರನೇ ಪಂದ್ಯವನ್ನು ಆಡಲಿದೆ.
ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೋಲಿಸಿ ಮತ್ತೆ ಗೆಲುವಿನ ಹಳಿಗೆ ಮರಳಲು ಆರ್ಸಿಬಿ ತಯಾರಿಯಲ್ಲಿ. ಅಂದ್ಹಾಗೆ ರಾಜಸ್ಥಾನ್ ರಾಯಲ್ಸ್ ಹಾಗೂ ಆರ್ಸಿಬಿ ಈ ಬಾರಿಯ ಸೀಸನ್ನಲ್ಲಿ ಮೊದಲ ಬಾರಿಗೆ ಸೆಣಸಾಟ ನಡೆಸುತ್ತಿವೆ.
ಇದನ್ನೂ ಓದಿ: ಆಲ್ರೌಂಡರ್ಗೆ ಬಿಗ್ ಶಾಕ್; IPLಗೆ ಬಂದಿದ್ದಕ್ಕೆ ಮುಂಬೈ ತಂಡದ ಪ್ಲೇಯರ್ ಬ್ಯಾನ್!
ಇಲ್ಲಿಯವರೆಗೆ ಐದು ಪಂದ್ಯವನ್ನು ಆಡಿರುವ ಆರ್ಸಿಬಿ ಮೂರು ಗೇಮ್ ಗೆದ್ದು, ಪಾಯಿಂಟ್ಸ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇನ್ನು ರಾಜಸ್ಥಾನ್ ರಾಯಲ್ಸ್, ಐದು ಪಂದ್ಯಗಳನ್ನು ಆಡಿ ಎರಡರಲ್ಲಿ ಗೆದ್ದು, ಪಾಯಿಂಟ್ಸ್ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಕಳೆದ ಸೀಸನ್ಗಳಿಗೆ ಹೋಲಿಸಿದರೆ ಆರ್ಆರ್ ಈ ಬಾರಿ ಅಷ್ಟೊಂದು ಸ್ಟ್ರಾಂಗ್ ಆಗಿ ಕಾಣುತ್ತಿಲ್ಲ.
ಪ್ಲೇ-ಆಫ್ ಹಾದಿ ದೃಷ್ಟಿಯಿಂದ ಆರ್ಸಿಬಿಗೆ ನಾಳಿನ ಪಂದ್ಯ ತುಂಬಾನೇ ನಿರ್ಣಾಯ ಆಗಿವೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ತಪ್ಪುಗಳನ್ನು ಸರಿಪಡಿಸಿಕೊಂಡು ಆರ್ಸಿಬಿ ಮತ್ತೊಮ್ಮೆ ಸ್ಟ್ರಾಂಗ್ ಕಂಬ್ಯಾಕ್ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ. ಇನ್ನು ನಾಳಿನ ಪಂದ್ಯವು ಮಧ್ಯಾಹ್ನ 3.30ಕ್ಕೆ ನಡೆಯಲಿದೆ. ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ ಮೂಲಕ ಪಂದ್ಯದ ನೇರಪ್ರಸಾರ ವೀಕ್ಷಣೆ ಮಾಡಬಹುದಾಗಿದೆ.
ಇದನ್ನೂ ಓದಿ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋತ ಬೆನ್ನಲ್ಲೇ ಆರ್ಸಿಬಿಗೆ ಮತ್ತೊಂದು ಶಾಕ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ