ಚಿನ್ನಸ್ವಾಮಿಯಲ್ಲಿ ಗೆಲ್ಲಲು ಆರ್​ಸಿಬಿಗೆ ಇದೆ ಈ ಅಸ್ತ್ರ.. ತಪ್ಪು ತಿದ್ದಿಕೊಳ್ಳಲು ಸುವರ್ಣಾವಕಾಶ..!

author-image
Ganesh
Updated On
GT ವಿರುದ್ಧ ಆರ್​ಸಿಬಿಗೆ ಬಿಗ್​ ಚಾಲೆಂಜ್.. ಈ 6 ಪ್ರಶ್ನೆಗೆ ಉತ್ತರ ಕಂಡುಕೊಂಡರೆ ಗೆಲುವು ನಮ್ಮದೇ..!
Advertisment
  • ತವರು ಬೆಂಗಳೂರಲ್ಲಿ ಪುಟಿದೇಳುತ್ತಾ ಆರ್​ಸಿಬಿ..?
  • ತಪ್ಪು ತಿದ್ದಿಕೊಳ್ಳಬೇಕಿದೆ ರಾಯಲ್​ ಚಾಲೆಂಜರ್ಸ್​
  • ತವರಿನಲ್ಲೇ ವಿರಾಟ್​ ಕೊಹ್ಲಿ, ಸಾಲ್ಟ್​ಗೆ ಸಮಸ್ಯೆ..!

ಸೀಸನ್​-18ರಲ್ಲಿ ಆರ್​ಸಿಬಿಗೆ ಸಾಲಿಡ್ ಸ್ಟಾರ್ಟ್​ ಸಿಕ್ಕಿದೆ. ತವರಿನ ಅಂಗಳದಾಚೆ ಸೋಲಿಲ್ಲದ ಸರದಾರ ಆರ್​​ಸಿಬಿ ಚಿನ್ನಸ್ವಾಮಿಯ ಕಿಂಗ್​ಡಮ್​ನಲ್ಲಿ ಗೆಲುವು ಮರೀಚಿಕೆಯಾಗಿದೆ. ಎರಡು ಸೋಲಿನ ಬಳಿಕ ತವರಿನಲ್ಲಿ ಮೂರನೇ ಪಂದ್ಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಜ್ಜಾಗ್ತಿದೆ. ಚಿನ್ನಸ್ವಾಮಿಯಲ್ಲಿ ಪಂಜಾಬ್ ಕಿಂಗ್ಸ್​ಗೆ ಪಂಚ್ ನೀಡಿ ಗೆಲುವು ದಾಖಲಿಸುವ ರಣ ಉತ್ಸಾಹದಲ್ಲಿದೆ. ಚಿನ್ನಸ್ವಾಮಿ ಪಿಚ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಿಂದಾಸ್ ಆಗಿ ಗೆಲ್ಲಬೇಕಾದ್ರೆ ಕೆಲ ತಪ್ಪುಗಳನ್ನ ತಿದ್ದಿಕೊಳ್ಳಬೇಕಿದೆ.

ಬೆಂಗಳೂರಲ್ಲಿ ಓಪನರ್ಸ್​ ನೀಡಬೇಕು ಗುಡ್​ ಸ್ಟಾರ್ಟ್​!

ಅವೇ ಮ್ಯಾಚ್​ಗಳಲ್ಲಿ ಆರ್​ಸಿಬಿ ಸುಲಭಕ್ಕೆ ಗೆಲ್ಲಲು ಕಾರಣ. ಆರಂಭಿಕರು ಅನ್ನೋದ್ರಲ್ಲಿ ಡೌಟೇ ಇಲ್ಲ. ಯಾಕಂದ್ರೆ ಚಿನ್ನಸ್ವಾಮಿಯಲ್ಲಿ ಉತ್ತಮ ಸ್ಟಾರ್ಟ್ ನೀಡದ ಫಿಲ್ ಸಾಲ್ಟ್​, ವಿರಾಟ್​ ಕೊಹ್ಲಿ, ತವರಿನ ಹೊರಗೆ ಬೌಲರ್​ಗಳನ್ನ ಚೆಂಡಾಡಿದ್ದಾರೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್​.. ಕೊಲ್ಕತ್ತಾ, ರಾಜಸ್ಥಾನ್​ದಲ್ಲಿ ಫಿಲ್ ಸಾಲ್ಟ್ ಹಾಗೂ ವಿರಾಟ್ ಬ್ಯಾಟ್​ನಿಂದ ಸಿಡಿದ ಅರ್ಧಶತಕಗಳು.
ಚೆನ್ನೈನಲ್ಲೂ ಡೆಡ್ಲಿ ಓಪನರ್ಸ್ ಮಿಂಚಿದ್ರು. ವಾಂಖೆಡೆಯಲ್ಲಿ ಸಾಲಿಡ್ ಸ್ಟಾರ್ಟ್ ನೀಡದಿದ್ರೂ ಕೊಹ್ಲಿಯ ಅರ್ಧಶತಕದ ಸಿಡಿಸಿದ್ದು ತಂಡಕ್ಕೆ ನೆರವಾಗಿತ್ತು. ಜೊತೆಗೆ ಪಡಿಕ್ಕಲ್, ರಜತ್ ಪಟಿದಾರ್ ಬೊಂಬಾಟ್ ಆಟ, ಫಿಲ್ ಸಾಲ್ಟ್​ ವೈಫಲ್ಯ ಕಾಣದಂತೆ ಮಾಡಿತ್ತು. ಬೆಂಗಳೂರಲ್ಲಿ ಸಾಲಿಡ್ ಸ್ಟಾರ್ಟ್ ನೀಡುವಲ್ಲಿ ಕೊಹ್ಲಿ-ಸಾಲ್ಟ್​ ಎಡವುತ್ತಿದ್ದಾರೆ. ಡೆಲ್ಲಿ ವಿರುದ್ಧ ಅತ್ಯದ್ಭುತ ಸ್ಟಾರ್ಟ್​ ಸಿಕ್ಕಿದ್ದೂ ನಿಜ. ಫಿಲ್​ ಸಾಲ್ಟ್​ ಅಬ್ಬರಿಸಿದ್ದೂ ನಿಜ. ಇಲ್ಲಿ ಅದೃಷ್ಟ ಕೈ ಹಿಡಿದಿತ್ತು. ಎಡ್ಜ್​ ಬಾಲ್​ಗಳು ಫಿಲ್ಡರ್​​ ಕೈಗೆ ಸಿಕ್ಕಿರಲಿಲ್ಲ. ಮುಂದಿನ ಪಂದ್ಯಗಳಲ್ಲಿ ಕಾನ್ಫಿಡೆಂಟ್​ ಆಟ ಆಡಬೇಕಿದೆ.

ಇದನ್ನೂ ಓದಿ: ಇನ್ಮೇಲೆ ಆರ್​ಸಿಬಿ ಲೆಕ್ಕಾನೇ ಬೇರೆ.. ಪ್ಲೇ ಆಫ್​ ಎಂಟ್ರಿ ಭವಿಷ್ಯ ಅಷ್ಟು ಸುಲಭ ಇಲ್ಲ..!

publive-image

ಒತ್ತಡವನ್ನ ಮೆಟ್ಟಿ ನಿಲ್ಲಬೇಕು ಪಡಿಕ್ಕಲ್, ಪಟಿದಾರ್!

ಓಪನರ್ಸ್​ನಿಂದ ಗುಡ್​ ಸ್ಟಾರ್ಟ್ ಸಿಕ್ಕಾಗ ಆಡುವ ಕನ್ನಡಿಗ ದೇವದತ್ ಪಡಿಕ್ಕಲ್, ರಜತ್​ ಪಾಟಿದಾರ್, ಅದೇ ಮೂಮೆಂಟಮ್​ನ ಮುಂದುವರಿಸ್ತಾರೆ. ಓಪನರ್ಸ್​​ ಬೇಗ ವಿಕೆಟ್ ಕೈ ಚೆಲ್ಲಿದ್ರೆ, ಇವರಿಬ್ಬರು ಪರದಾಡ್ತಾರೆ. ಈ ಸೀಸನ್​ನಲ್ಲಿ ಚಿನ್ನಸ್ವಾಮಿಯಲ್ಲಿ ಇವರಿಬ್ಬರು ತಂಡಕ್ಕೆ ಆಧಾರವಾಗಲೇ ಇಲ್ಲ. ಕನಿಷ್ಠ ಚೇತರಿಕೆಯ ಜೊತೆಯಾಟವನ್ನೂ ಆಡಲಿಲ್ಲ. ಒತ್ತಡದ ಸಂದರ್ಭದಲ್ಲಿ ಇಬ್ಬರೂ ಒಳ್ಳೆ ಇನ್ನಿಂಗ್ಸ್​ ಕಟ್ಟಬೇಕಿದೆ.

ಇಂಪ್ಯಾಕ್ಟ್ ಪ್ಲೇಯರ್​​ ಆಗಿ ಬಾಂಡಗೆಗೆ ಚಾನ್ಸ್?

ಪಡಿಕ್ಕಲ್ ಉತ್ತಮ ಬ್ಯಾಟರ್ ಅನ್ನೋದ್ರಲ್ಲಿ ನೋ ಡೌಟ್. ಟಾಪ್​-3ನಲ್ಲಿ ಆಡೋ ಕೆಪಾಸಿಟಿ ಕ್ಯಾಪ್ಟನ್ ರಜತ್ ಪಟಿದಾರ್​ಗೆ ಇದೆ. ಹೀಗಾಗಿ 3ನೇ ರಜತ್​ಗೆ 3ನೇ ಕ್ರಮಾಂಕಕ್ಕೆ ಬಡ್ತಿ ನೀಡಿ, ಮಿಡಲ್ ಆರ್ಡರ್​ನಲ್ಲಿ ಕನ್ನಡಿಗ ಮನೋಜ್ ಬಾಂಡಗೆಗೆ ಅವಕಾಶ ನೀಡೋದು ಒಂದು ರೀತಿ ಬೆಸ್ಟ್ ಚಾಯ್ಸ್. ಬಿಗ್ ಹಿಟ್ಟರ್ ಆಗಿರುವ ಮನೋಜ್​ಗೆ ಸಿಕ್ಸರ್​​ಗಳನ್ನು ಸಿಡಿಸೋ ತಾಕತ್ತಿದೆ. ಬ್ಯಾಟಿಂಗ್​ನಲ್ಲಿ ಗೇಮ್ ಚೇಂಜರ್ ಆಗಬಲ್ಲರು. ಜೊತೆಗೆ ಬೌಲಿಂಗ್​ನಲ್ಲೂ ನೆರವಾಗಬಲ್ಲರು. ಚಿನ್ನಸ್ವಾಮಿ ಮೈದಾನದ ಆಳ-ಅಗಲ ಗೊತ್ತಿರೋ ಮನೋಜ್​ ಪರ್ಫಾಪ್ಟ್​ ಇಂಪ್ಯಾಂಕ್ಟ್​ ಮೂಡಿಸಬಲ್ಲರು.

ಬ್ಯಾಟಿಂಗ್​ನಲ್ಲಿ ಟಿಮ್ ಡೇವಿಡ್​ಗೆ ನೀಡಬೇಕಿದ್ಯಾ ಬಡ್ತಿ?

ಬೆಂಗಳೂರಿನಲ್ಲಿ ಆರ್​ಸಿಬಿ ಸೋಲಿಗೆ ಪರೋಕ್ಷವಾಗಿ ಕೃನಾಲ್​​​​​​​​ ಮತ್ತು ಮ್ಯಾನೇಜ್​ಮೆಂಟ್​ ಕಾರಣ. ಯಾಕಂದ್ರೆ ಗುಜರಾತ್​ ಎದುರು ಕೃನಾಲ್​ ಬಳಿಕ ಕ್ರಿಸ್​ಗೆ ಬಂದ ಟಿಮ್ ಡೇವಿಡ್, ಸಿಕ್ಕ 18 ಎಸೆತಗಳಲ್ಲಿ 32 ರನ್ ಸಿಡಿಸಿದ್ರು. ಡೆಲ್ಲಿ ಕ್ಯಾಪಿಟಲ್ಸ್ ಎದುರು 20 ಎಸೆತಗಳಲ್ಲಿ 37 ರನ್ ಕೊಳ್ಳೆ ಹೊಡೆದಿದ್ದರು. ​ಸ್ಲೋ ಇನ್ನಿಂಗ್ಸ್​ ಆಡಿದ ಕೃನಾಲ್​ ಬದಲಿಗೆ ಟಿಮ್​ ಡೇವಿಡ್​ಗೆ ಬಡ್ತಿ ನೀಡಿದ್ರೆ ಪಂದ್ಯದ ಗತಿಯೇ ಬದಲಾಗ್ತಿತ್ತು. ಈ ಬಗ್ಗೆ ಮ್ಯಾನೇಜ್​ಮೆಂಟ್​ ಚಿಂತಿಸಬೇಕಿದೆ.

ಇದನ್ನೂ ಓದಿ: ಐಪಿಎಲ್​​ನಲ್ಲಿ ವೀರ ಕನ್ನಡಿಗನ ಘರ್ಜನೆ.. ಟ್ಯಾಲೆಂಟೆಡ್​ ಕ್ರಿಕೆಟಿಗನಿಗೆ ಆದ ಅನ್ಯಾಯದ ಬಗ್ಗೆ ಗೊತ್ತೇನು..?

publive-image

ಹೇಜ್​​ಲ್​ವುಡ್ ಬದಲಿಗೆ ನುವಾನ್​ ತುಷಾರಾಗೆ ಚಾನ್ಸ್​?

ಚಿನ್ನಸ್ವಾಮಿಯಲ್ಲಿ ಸ್ಪಿನ್ನರ್ಸ್ ಒಕೆ. ಜೋಶ್ ಹೇಜಲ್​ವುಡ್​​ನದ್ದೇ ಚಿಂತೆಯಾಗಿದೆ. ಚಿನ್ನಸ್ವಾಮಿಯ ಹೊರಗೆ ಅದ್ಭುತ ದಾಳಿ ಸಂಘಟಿಸ್ತಿರೋ ಆಸಿಸ್​ ಗನ್, ಬೆಂಗಳೂರಿನಲ್ಲಿ ಬೆಂಕಿ ದಾಳಿ ನಡೆಸೋದ್ರಲ್ಲಿ ಫೇಲ್ ಆಗಿದ್ದಾರೆ. ಹಾಕಿದ 6.5 ಓವರ್​ಗಳಿಂದ ಬರೋಬ್ಬರಿ 83 ರನ್ ಬಿಟ್ಟುಟ್ಟಿರುವ ಜೋಶ್, ಒಂದೇ ಒಂದು ವಿಕೆಟ್ ಪಡೆದಿದ್ದಾರೆ.

ಲೈನ್​ ಅಂಡ್ ಲೆಂಥ್​ ಕಂಡುಕೊಳ್ಳುವಲ್ಲಿ ಫೇಲ್​ ಆಗಿರೋ ಜೋಶ್​ ಹೇಜಲ್​ವುಡ್​ ಬದಲಿಗೆ ಚಿನ್ನಸ್ವಾಮಿಗಿ ಲಂಕಾದ ವೇಗಿ ನುವಾನ್ ತುಷಾರಗೆ ಚಾನ್ಸ್​ ನೀಡಿ ಪ್ರಯೋಗ ನಡೆಸಬಹುದು. ಥೇಟ್​ ಲಸಿತ್​ ಮಲಿಂಗರಂತೆ ಬೌಲಿಂಗ್​ ಮಾಡೋ ತುಷಾರಾ ಪವರ್ ಪ್ಲೇ ಹಾಗೂ ಡೆತ್ ಓವರ್​ಗಳಲ್ಲಿ ಎಫೆಕ್ಟಿವ್​. ವಿಕೆಟ್​ ಬೇಟೆಯಾಡುವುದರ ಜೊತೆಗೆ ಎದುರಾಳಿ ರನ್​ಗಳಿಕೆಗೂ ಬ್ರೇಕ್ ಹಾಕಬಲ್ಲರು. ಈ ನಿಟ್ಟಿನಲ್ಲಿ ಮ್ಯಾನೇಜ್​ಮೆಂಟ್​​ ಯೋಚಿಸಬೇಕಿದೆ.

ಇದನ್ನೂ ಓದಿ: ಚಹಾಲ್​​ ಮ್ಯಾಜಿಕ್, 95 ರನ್​​​ಗೆ KKR ಆಲೌಟ್.. ಐಪಿಎಲ್​​ನಲ್ಲಿ ಐತಿಹಾಸಿಕ ದಾಖಲೆ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment