/newsfirstlive-kannada/media/post_attachments/wp-content/uploads/2024/11/PANT.jpg)
ಸೌದಿ ಅರೇಬಿಯಾದ ಜೆಡ್ಡಾದಲ್ಲಿ 2025ರ ಮೆಗಾ ಆಕ್ಷನ್ನಲ್ಲಿ ಆಟಗಾರರ ಹರಾಜು ಭರ್ಜರಿಯಾಗಿ ನಡೆಯುತ್ತಿದೆ. ಪ್ರತಿ ಆಟಗಾರನ ಮೇಲೂ ಕೋಟಿ ಕೋಟಿ ಹಣ ಬಿಡ್ ಮಾಡಲಾಗುತ್ತಿದೆ. ಎಲ್ಲ ಫ್ರಾಂಚೈಸಿಗಳು ಭಾರೀ ಹಣವನ್ನು ಹೂಡಿಕೆ ಮಾಡುತ್ತಿವೆ. ಇದರ ಮಧ್ಯೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಸ್ಟಾರ್ ಆಟಗಾರರ ಖರೀದಿ ಮಾಡಲು ಹೋಗಲೇ ಇಲ್ಲ ಎನ್ನುವುದು ಅಚ್ಚರಿ ಮೂಡಿಸಿದೆ.
ಕೆ.ಎಲ್ ರಾಹುಲ್ರನ್ನ ಆರ್ಸಿಬಿ ಖರೀದಿ ಮಾಡುತ್ತದೆ ಎಂದು ಕನ್ನಡಿಗರು ಭಾವಿಸಿದ್ದರು. ಆದರೆ ಆಕ್ಷನ್ನಲ್ಲಿ ಒಂದು ಬಾರಿನೋ, ಎರಡು ಬಾರಿನೋ ಹರಾಜು ಕೂಗಿದ ಆರ್ಸಿಬಿ ರಾಹುಲ್ ಹೆಸರನ್ನ ಮತ್ತೆ ಕರೆಯಲಿಲ್ಲ. ಹೀಗಾಗಿ ಕೆ.ಎಲ್ ರಾಹುಲ್ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾದರು. ಹರಾಜಿನಲ್ಲಿ ಕೆ.ಎಲ್ ರಾಹುಲ್ ಖರೀದಿಗೆ ಬೆಂಗಳೂರು, ಚೆನ್ನೈ, ಕೆಕೆಆರ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮಧ್ಯೆ ಪೈಪೋಟಿ ಏರ್ಪಟ್ಟಿತ್ತು. ಕೊನೆಗೂ ಡೆಲ್ಲಿ ಕ್ಯಾಪಿಟಲ್ಸ್ ರಾಹುಲ್ ಅವರನ್ನು 14 ಕೋಟಿ ರೂಪಾಯಿಗೆ ನೀಡಿ ಖರೀದಿ ಮಾಡಿದೆ.
ಇದನ್ನೂ ಓದಿ:IPL Auction; RCB ಖರೀದಿ ಮಾಡಿದ ಮೊದಲ ಸ್ಟಾರ್ ಪ್ಲೇಯರ್ ಯಾರು? ಪವರ್ ಹಿಟ್ಟರ್ ಎಂಟ್ರಿ!
ಉಳಿದಂತೆ ಶ್ರೇಯಸ್ ಅಯ್ಯರ್ರನ್ನ ಆರ್ಸಿಬಿ ಖರೀದಿ ಮಾಡಲಿಲ್ಲ. ಹೀಗಾಗಿ ಚಾಂಪಿಯನ್ ಟೀಮ್ನ ನಾಯಕ ಪಂಜಾಬ್ ಕಿಂಗ್ಸ್ ಪಾಲಾಗಿದ್ದಾರೆ. ಪಂಜಾಬ್ ಫ್ರಾಂಚೈಸಿ ಒಟ್ಟು 26.75 ಕೋಟಿ ರೂಪಾಯಿಗಳನ್ನು ನೀಡಿ ಶ್ರೇಯಸ್ ಅಯ್ಯರ್ರನ್ನ ಖರೀದಿ ಮಾಡಿದೆ. ಇನ್ನು ರಿಷಬ್ ಪಂತ್ಗೆ ಆರ್ಸಿಬಿ ಮಣೆ ಹಾಕುತ್ತದೆ ಎಂದು ಹೇಳಲಾಗಿತ್ತು ಆದ್ರೂ ಆಕ್ಷನ್ನಲ್ಲಿ ಅದು ಸಾಧ್ಯವಾಗಲಿಲ್ಲ. ಏಕೆಂದರೆ ರಿಷಬ್ ಪಂತ್ ಐಪಿಎಲ್ನಲ್ಲಿ ಭಾರೀ ಹಣಕ್ಕೆ ಮಾರಾಟ ಆಗಿದ್ದಾರೆ.
ಇದನ್ನೂ ಓದಿ: IPL 2025 Auction; ಸ್ಪಿನ್ನರ್ ಚಹಾಲ್ಗೂ ಒಲಿದ ಬಂದ ಲಕ್ಷ್ಮಿ.. ಬಾರೀ ಮೊತ್ತಕ್ಕೆ ಸೇಲ್ ಆದ RCB ಮಾಜಿ ಪ್ಲೇಯರ್
ರಿಷಬ್ ಪಂತ್ ಒಟ್ಟು 27 ಕೋಟಿ ರೂಪಾಯಿಗೆ ಲಕ್ನೋ ಟೀಮ್ ಖರೀದಿ ಮಾಡಿದೆ. ಕನ್ನಡಿಗ ಕೆ.ಎಲ್ ರಾಹುಲ್ರನ್ನ ಬಿಟ್ಟುಕೊಟ್ಟಿದ್ದ ಲಕ್ನೋ ಫ್ರಾಂಚೈಸಿ ಮೊದಲ ಪ್ಲಾನ್ ಮಾಡಿತ್ತೋ ಏನೋ ಗೊತ್ತಿಲ್ಲ. 27 ಕೋಟಿ ರೂಪಾಯಿಗಳನ್ನು ಕೊಟ್ಟು ರಿಷಬ್ ಪಂತ್ರನ್ನ ಲಕ್ನೋ ಖರೀದಿ ಮಾಡಿದೆ. ಈ ಐಪಿಎಲ್ ಸೀಸನ್ ಹರಾಜಿನಲ್ಲೇ ಪಂತ್ ಅತ್ಯಂತ ದುಬಾರಿ ಆಟಗಾರ ಎಂದು ಅನಿಸಿಕೊಂಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ