ಆರ್​​​ಸಿಬಿ ರೀಟೈನ್​ ಲಿಸ್ಟ್​ ಅಧಿಕೃತ ಪ್ರಕಟ; ಕೊಹ್ಲಿ ಜತೆಗೆ ಇಬ್ಬರು ಆಟಗಾರರನ್ನು ಉಳಿಸಿಕೊಂಡ ಬೆಂಗಳೂರು

author-image
Ganesh Nachikethu
Updated On
ಆರ್​​​ಸಿಬಿ ರೀಟೈನ್​ ಲಿಸ್ಟ್​ ಅಧಿಕೃತ ಪ್ರಕಟ; ಕೊಹ್ಲಿ ಜತೆಗೆ ಇಬ್ಬರು ಆಟಗಾರರನ್ನು ಉಳಿಸಿಕೊಂಡ ಬೆಂಗಳೂರು
Advertisment
  • 2025ರ ಇಂಡಿಯನ್ ಪ್ರೀಮಿಯರ್ ಲೀಗ್​​ ಟೂರ್ನಿ
  • ಆರ್​​ಸಿಬಿ ತಂಡದಿಂದ ಹೊಸ ರೀಟೈನ್​​ ಲಿಸ್ಟ್​ ಔಟ್​!
  • ಬೆಂಗಳೂರು ತಂಡ ಉಳಿಸಿಕೊಂಡ ಆಟಗಾರರು ಇವರೇ

ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ತಂಡ 2025ರಲ್ಲಿ ನಡೆಯುವ ಸೀಸನ್‌ಗಾಗಿ ಈಗಿನಿಂದಲೇ ಪ್ಲಾನ್ ಮಾಡಿಕೊಂಡಿದೆ. ಈ ವರ್ಷ ಪ್ಲೇ-ಆಫ್​​ಗೆ ಪ್ರವೇಶ ಮಾಡಿದ್ದರೂ ಟ್ರೋಫಿ ಗೆಲ್ಲುವ ಕನಸು ಕನಸಾಗಿಯೇ ಉಳಿದಿದೆ. ಹೇಗಾದರೂ ಮಾಡಿ ಮುಂದಿನ ವರ್ಷ ಟ್ರೋಫಿ ಗೆಲ್ಲುವ ಇರಾದೆಯೊಂದಿಗೆ ಯೋಜನೆ ರೂಪಿಸುತ್ತಿದೆ.

ಐಪಿಎಲ್ ಸೋತಿರುವ ಫ್ರಾಂಚೈಸಿಗಳ ಚಿತ್ತ ಮೆಗಾ ಹರಾಜಿನತ್ತ ನೆಟ್ಟಿದೆ. ಐಪಿಎಲ್ 2025 ಸೀಸನ್​ಗೂ ಮೊದಲು ಫ್ರಾಂಚೈಸಿಗಳು ತಮ್ಮ ತಂಡವನ್ನು ಪುನರ್​​​ ರಚನೆ ಮಾಡಲಿವೆ. ಐಪಿಎಲ್ ನಿಯಮದ ಪ್ರಕಾರ ಒಂದು ಫ್ರಾಂಚೈಸಿ ಗರಿಷ್ಠ 6 ಆಟಗಾರರನ್ನು ಉಳಿಸಿಕೊಂಡು ಮಿಕ್ಕವರನ್ನು ಕೈಬಿಡಬೇಕು. ಅಂತೆಯೇ ಮೊದಲ IPL ಪ್ರಶಸ್ತಿ ಹುಡುಕಾಟದಲ್ಲಿರುವ ಆರ್​ಸಿಬಿ ತಂಡವನ್ನು ಬಲಪಡಿಸಲು ಮುಂದಾಗಿದೆ. ಹಾಗಾಗಿ ಆರ್​​​ಸಿಬಿ 3 ಆಟಗಾರರನ್ನು ರೀಟೈನ್​ ಮಾಡಿಕೊಂಡು ಉಳಿದವರನ್ನು ಹರಾಜಿಗೆ ಬಿಟ್ಟಿದೆ.

ಆರ್​​ಸಿಬಿ ಉಳಿಸಿಕೊಂಡ ಪ್ಲೇಯರ್ಸ್​ ಇವರೇ!

ಕಿಂಗ್​ ಕೊಹ್ಲಿ ಈಸ್​ ಬ್ಯಾಕ್​​

ಫ್ರಾಂಚೈಸಿ ಮೊದಲು ರೀಟೈನ್​ ಮಾಡಿಕೊಂಡಿದ್ದು ವಿರಾಟ್ ಕೊಹ್ಲಿ ಅವರನ್ನ. 2024ರ ಋತುವಿನಲ್ಲಿ 741 ರನ್ ಗಳಿಸಿರುವ ಕೊಹ್ಲಿ, ಆರ್​ಸಿಬಿಯ ಸಮರ್ಥ ಆಟಗಾರ. ಅವರನ್ನು ಯಾವುದೇ ಕಾರಣಕ್ಕೂ ಕೈ ಬಿಡಲ್ಲ ಅನ್ನೋದನ್ನ ಫ್ರಾಂಚೈಸಿ ಮತ್ತೊಮ್ಮೆ ಸಾಬೀತು ಮಾಡಿದೆ.

ರಜತ್​ ಪಾಟಿದಾರ್​​ 2ನೇ ಆಯ್ಕೆ

RCBಯ ಉದಯೋನ್ಮುಖ ತಾರೆಗಳಲ್ಲಿ ರಜತ್​​ ಪಾಟಿದಾರ್​​ ಕೂಡ ಒಬ್ಬರು. ಆರ್​​ಸಿಬಿ ತಂಡದ 2ನೇ ಆಯ್ಕೆ ರಜತ್​ ಪಾಟಿದಾರ್​​. ಆರ್​​​ಸಿಬಿ ತಂಡದ ಸ್ಟಾರ್​ ಬ್ಯಾಟರ್​​ ರಜತ್​ ಪಾಟಿದಾರ್​​. ಇವರು ಕಳೆದ ಮೂರು ಸೀಸನ್​ಗಳಿಂದ ಆರ್​​ಸಿಬಿ ತಂಡವನ್ನು ಪ್ರತಿನಿಧಿಸಿದ್ದಾರೆ. ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಪರ 27 ಪಂದ್ಯಗಳನ್ನು ಆಡಿರೋ ರಜತ್​ ಅವರು 799 ರನ್​​ ಚಚ್ಚಿದ್ದಾರೆ. ಬ್ಯಾಟಿಂಗ್​ ಆವರೇಜ್​​ 34.73 ಇದ್ದು, ಸ್ಟ್ರೈಕ್​ ರೇಟ್​​ 158.84 ಇದೆ. ಒಂದು ಶತಕ ಮತ್ತು 5 ಅರ್ಧಶತಕಗಳು ಸೇರಿವೆ. ಬರೋಬ್ಬರಿ 54 ಸಿಕ್ಸರ್​​ ಮತ್ತು 51 ಫೋರ್​ ಸಿಡಿಸಿದ್ದಾರೆ.

ಯಶ್​ ದಯಾಳ್​ 3ನೇ ಆಯ್ಕೆ

ಐಪಿಎಲ್ 2024 ರ ಹರಾಜಿನಲ್ಲಿ ಯಶ್ ದಯಾಳ್ ಅವರನ್ನು RCB ಆಯ್ಕೆ ಮಾಡಿತ್ತು. ಕಳೆದ ವರ್ಷ ಗುಜರಾತ್ ತಂಡ ಅವರನ್ನು ಕೈಬಿಟ್ಟಿತ್ತು. ಆರ್​ಸಿಬಿಗೆ ಬಂದ ಬಳಿಕ ದಯಾಳ್​​ ಮತ್ತೆ ಲಯಕ್ಕೆ ಮರಳಿದ್ದಾರೆ. ಅವರನ್ನು ಮುಂದಿನ ಸೀಸನ್​​ಗೆ ಉಳಿಸಿಕೊಂಡು ಆರ್​​ಸಿಬಿ ಮಹತ್ವದ ನಿರ್ಧಾರ ಕೈಗೊಂಡಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment