/newsfirstlive-kannada/media/post_attachments/wp-content/uploads/2025/04/KOHLI-RCB-1.jpg)
ಭಾರತ ಮತ್ತು ಪಾಕಿಸ್ತಾನ ನಡುವೆ ಸಂಘರ್ಷ ಹಿನ್ನೆಲೆಯಲ್ಲಿ ಎಲ್ಲಾ ಐಪಿಎಲ್ ಪಂದ್ಯಗಳನ್ನು ತಾತ್ಕಾಲಿಕವಾಗಿ ಮುಂದೂಡುವುದಾಗಿ ಬಿಸಿಸಿಐ ತಿಳಿಸಿದೆ. ಇಂದು ನಡೆದ ಮಹತ್ವದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.
ಬೆನ್ನಲ್ಲೇ ಬಿಸಿಸಿಐ ನಿರ್ಧಾರವನ್ನು ಗೌರವಿಸಿರುವ ಆರ್ಸಿಬಿ.. ಸೇನೆಗೆ ಸಂಬಂಧಿಸಿ ಟ್ವೀಟ್ ಮಾಡಿದೆ. ರಾಷ್ಟ್ರೀಯ ಬಿಕ್ಕಟ್ಟಿನ ಸಮಯದಲ್ಲಿ ನಮ್ಮ ಸೇನಾಪಡೆಗಳ ಅಚಲ ಧೈರ್ಯ ಮತ್ತು ಶೌರ್ಯಕ್ಕೆ ಸೆಲ್ಯೂಟ್ ಹೊಡೆಯುತ್ತೇವೆ. ಭಾರತದ ಪ್ರತಿಯೊಬ್ಬರ ಸುರಕ್ಷತೆಗಾಗಿ ನಾವು ಪ್ರಾರ್ಥಿಸುತ್ತೇವೆ. ಜೈ ಹಿಂದ್ ಎಂದು ಬರೆದುಕೊಂಡಿದೆ.
ಇದನ್ನೂ ಓದಿ: ಐಪಿಎಲ್ ಟೂರ್ನಿ ಸ್ಥಗಿತ ಸಾಧ್ಯತೆ.. ಸುಳಿವು ಕೊಟ್ಟ IPL ಮುಖ್ಯಸ್ಥ ಅರುಣ್ ಧಮಾಲ್..!
2025ರ ಐಪಿಎಲ್ ಪಂದ್ಯಾವಳಿಗಳು ಅಂತಿಮ ಹಂತಕ್ಕೆ ಬಂದು ತಲುಪಿತ್ತು. ಲೀಗ್ ಹಂತದ 57 ಪಂದ್ಯಗಳು ಮುಕ್ತಾಯಗೊಂಡಿದ್ದವು. ನಿನ್ನೆಯ ಪಂದ್ಯವನ್ನ ಅರ್ಧಕ್ಕೆ ಕೈಬಿಡಲಾಗಿತ್ತು. ಆಟಗಾರರ ಮತ್ತು ವೀಕ್ಷಕರ ಸುರಕ್ಷತೆ ದೃಷ್ಟಿಯಿಂದ ಇಂದು ಮಹತ್ವದ ಸಭೆ ನಡೆದಿತ್ತು. ಈ ಸಭೆಯಲ್ಲಿ ತಾತ್ಕಾಲಿಕವಾಗಿ ಎಲ್ಲಾ ಪಂದ್ಯಗಳನ್ನು ಅಮಾನತಿನಲ್ಲಿಡಲಾಗಿದೆ.
ನಿಗದಿಯಂತೆ ಎಲ್ಲಾ ಲೀಗ್ ಮ್ಯಾಚ್ಗಳು ಮುಕ್ತಾದ ಬಳಿಕ ಮೇ 20 ರಿಂದ 23 ವರೆಗೆ ಪ್ಲೇ-ಆಫ್ ಪಂದ್ಯಗಳು ನಡೆಯಲಿದ್ದವು. ಮೇ 25 ರಂದು ಫೈನಲ್ ಪಂದ್ಯ ನಡೆಯಬೇಕಿತ್ತು. ಇನ್ನು ಲೀಗ್ ಹಂತದಲ್ಲಿ ಇಂದು ಆರ್ಸಿಬಿ ಮತ್ತು ಎಲ್ಎಸ್ಜಿ ತಂಡಗಳು ಸೆಣಸಾಡಲಿದ್ದವು.
ಇದನ್ನೂ ಓದಿ: RCB ಅಭಿಮಾನಿಗಳಿಗೆ ಬಿಗ್ ಶಾಕ್; IPL ಸೀಸನ್ 18 ಅಮಾನತು
In this hour of national crisis, we salute the unwavering courage and bravery of our Indian Armed Forces, and pray for the safety of everyone in India.
Jai Hind. 🇮🇳🙏 pic.twitter.com/TrNOmhRMHx— Royal Challengers Bengaluru (@RCBTweets) May 9, 2025
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್