ಬ್ಯಾಟ್​ ಮುರಿದಿದ್ದಕ್ಕೆ ಕ್ಯಾಚ್ ಔಟ್ ಆದ್ರಾ RCB ಯಂಗ್ ಪ್ಲೇಯರ್ ಜಾಕೋಬ್ ಬೆಥೆಲ್..?

author-image
Bheemappa
ಬ್ಯಾಟ್​ ಮುರಿದಿದ್ದಕ್ಕೆ ಕ್ಯಾಚ್ ಔಟ್ ಆದ್ರಾ RCB ಯಂಗ್ ಪ್ಲೇಯರ್ ಜಾಕೋಬ್ ಬೆಥೆಲ್..?
Advertisment
  • ವಿರಾಟ್​ ಕೊಹ್ಲಿಗೆ ಉತ್ತಮ ಸಾಥ್ ಕೊಟ್ಟಿದ್ದ ಜಾಕೋಬ್ ಬೆಥೆಲ್
  • ಚೆನ್ನೈ ವಿರುದ್ಧ ಪಂದ್ಯದಲ್ಲಿ ಜಾಕೋಬ್ ಬೆಥೆಲ್ ಬ್ಯಾಟಿಂಗ್ ಹೇಗಿತ್ತು?
  • ಆರ್​ಸಿಬಿ ಪರ 2ನೇ ಪಂದ್ಯದಲ್ಲೇ ಅರ್ಧಶತಕ ಸಿಡಿಸಿರುವ ಜಾಕೋಬ್

ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧದ ಐಪಿಎಲ್​ ಪಂದ್ಯದಲ್ಲಿ ಆರ್​ಸಿಬಿಯ ಯಂಗ್ ಪ್ಲೇಯರ್​ ಜಾಕೋಬ್ ಬೆಥೆಲ್ ಅಬ್ಬರದ ಅರ್ಧಶತಕ ಸಿಡಿಸಿದ್ದಾರೆ. ಆದರೆ ಬ್ಯಾಟಿಂಗ್ ಮಾಡುವಾಗ ಅದೊಂದು ಕಾರಣದಿಂದ ಬೆಥೆಲ್ ಔಟ್​ ಆಗಿರುವುದು ಅಭಿಮಾನಿಗಳಿಗೆ ಬೇಸರ ತರಿಸಿದೆ.

ಸಿಲಿಕಾನ್ ಸಿಟಿಯ ಎಂ.ಚಿನ್ನಸ್ವಾಮಿಯಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ನಾಯಕ ಎಂ.ಎಸ್ ಧೋನಿ ಟಾಸ್ ಗೆದ್ದು ಮೊದಲ ಫೀಲ್ಡಿಂಗ್ ತೆಗೆದುಕೊಂಡರು. ಆರ್​ಸಿಬಿ ಪರ ಆರಂಭಿಕ ಬ್ಯಾಟ್ಸ್​ಮನ್​ಗಳಾಗಿ ಮೈದಾನಕ್ಕೆ ಆಗಮಿಸಿದ್ದ ವಿರಾಟ್​ ಕೊಹ್ಲಿ, ಜಾಕೋಬ್ ಬೆಥೆಲ್​ ಉತ್ತಮವಾದ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಮೊದಲ ಪಂದ್ಯದಲ್ಲಿ ವಿಫಲವಾದ್ರೆ, 2ನೇ ಪಂದ್ಯದಲ್ಲೇ ಚೆನ್ನೈ ಬೌಲರ್​ಗಳನ್ನು ಬೆಥೆಲ್ ಮನಬಂದಂತೆ ಚಚ್ಚಿದರು.

ಇದನ್ನೂ ಓದಿ: 6, 6, 6, 6, 6; ಚೆನ್ನೈ ಬೌಲರ್​ಗಳಿಗೆ ಚಳಿ ಬಿಡಿಸಿದ ಕಿಂಗ್​ ಕೊಹ್ಲಿ.. ಮತ್ತೊಂದು ಅರ್ಧಶತಕ ಸಿಡಿಸಿದ ವಿರಾಟ್

publive-image

ಚೆನ್ನೈ ಜೊತೆ ಜಾಕೋಬ್ ಬೆಥೆಲ್ 28 ಎಸೆತಗಳನ್ನು ಎದುರಿಸಿ 8 ಬೌಂಡರಿಗಳು, 2 ಸಿಕ್ಸರ್​ನಿಂದ 53 ರನ್​ಗಳನ್ನು ಬಾರಿಸಿದರು. ಐಪಿಎಲ್​ನಲ್ಲಿ ಇದು ಬೆಥೆಲ್ ಅವರ ಚೊಚ್ಚಲ ಅರ್ಧಶತಕವಾಗಿದೆ. ಇದೇ ಖುಷಿಯಲ್ಲಿ ಬ್ಯಾಟಿಂಗ್ ಮುಂದುವರೆಸಿದ್ದರು. ಪಂದ್ಯದಲ್ಲಿ ಒಟ್ಟು 33 ಎಸೆತದಲ್ಲಿ 55 ರನ್​ ಗಳಿಸಿ ಬ್ಯಾಟಿಂಗ್ ಮಾಡುವಾಗ ಕ್ಯಾಚ್ ಔಟ್ ಆದರು.

ಪಂದ್ಯದಲ್ಲಿ 10ನೇ ಓವರ್​ ಮಾಡುತ್ತಿದ್ದ ಚೆನ್ನೈ ಪರ ಬೌಲರ್​ ಮಥೀಷ ಪತಿರಾನ ಬೌಲಿಂಗ್​ನಲ್ಲಿ ಜಾಕೋಬ್​ ಬೆಥೆಲ್ ಬಿಗ್​ ಶಾಟ್ ಬಾರಿಸಿದರು. ಆದರೆ ಬಿಗ್ ಶಾಟ್ ಬಾರಿಸುವಾಗ ಬೆಥೆಲ್ ಅವರ ಬ್ಯಾಟ್ ಮುರಿದಿತ್ತು. ಇದನ್ನು ನೋಡಿಕೊಳ್ಳದೇ ಮುರಿದ ಬ್ಯಾಟ್​ನಿಂದಲೇ ದೊಡ್ಡ ಹೊಡೆತಕ್ಕೆ ಕೈಹಾಕಿ ಬೆಥೆಲ್​ ಕ್ಯಾಚ್ ಔಟ್ ಆದರು. ಇದು ಬೆಥೆಲ್ ಸೇರಿ ಅಭಿಮಾನಿಗಳಿಗೂ ಬೇಸರ ತರಿಸಿತು. ಬ್ಯಾಟ್​ ಮುರಿದಿದ್ದನ್ನು ಗಮನಿಸಿ ಒಂದು ವೇಳೆ ಹೊಸ ಬ್ಯಾಟ್ ತರಿಸಿಕೊಂಡು ಆಟ ಮುಂದುವರೆಸಿದ್ದರೇ ಬೆಥೆಲ್ ಇನ್ನಷ್ಟು ಹೊತ್ತು ಕ್ರೀಸ್​ನಲ್ಲಿ ಇರುತ್ತಿದ್ದರು. ಈ ವೇಳೆ ವಿರಾಟ್ ಕೊಹ್ಲಿ ಹಾಗೂ ಬೆಥೆಲ್ ಜೊತೆಯಾಟದಿಂದ 97 ರನ್​ಗಳು ಬಂದಿದ್ದವು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment