/newsfirstlive-kannada/media/post_attachments/wp-content/uploads/2025/04/SALT_RAJATH.jpg)
ರಾಯಲ್ ಚಾಲೆಂಜರ್ಸ್ ತಂಡದ ವಿಸ್ಫೋಟಕ ಬ್ಯಾಟರ್ ಎಂದರೆ ಅದು ಫಿಲಿಪ್ ಸಾಲ್ಟ್. ಪಂದ್ಯದಲ್ಲಿ ಆರಂಭಿಕರಾಗಿ ಕ್ರೀಸ್ಗೆ ಬರುವ ಸಾಲ್ಟ್ ಬೌಲರ್ಗಳ ಮೇಲೆ ದಾಳಿಗೆ ಮುಂದಾಗುತ್ತಾರೆ. ವಿರಾಟ್ ಕೊಹ್ಲಿ ಜೊತೆ ಅತ್ಯುತ್ತಮ ಓಪನಿಂಗ್ ಪಡೆಯುತ್ತಿದ್ದ ಸಾಲ್ಟ್, ಡೆಲ್ಲಿ ಕ್ಯಾಪಿಟಲ್ಸ್ ಜೊತೆಗಿನ ಕಳೆದ ಪಂದ್ಯದಲ್ಲಿ ಮೈದಾನಲ್ಲಿ ಕಾಣಿಸಲೇ ಇಲ್ಲ. ಇದು ಆರ್ಸಿಬಿ ಅಭಿಮಾನಿಗಳಿಗೆ ಬೇಸರ ತರಿಸಿದೆ.
ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿಯ ಸ್ಫೋಟಕ ಬ್ಯಾಟ್ಸಮನ್ ಫಿಲಿಪ್ ಸಾಲ್ಟ್ ಬದಲಿಗೆ ವಿದೇಶಿ ಯುವ ಆಟಗಾರ ಜಾಕೋಬ್ ಬೆಥೆಲ್, ಕೊಹ್ಲಿ ಜೊತೆ ಇನ್ನಿಂಗ್ಸ್ ಆರಂಭಿಸಿದ್ದರು. ಆರಂಭದಲ್ಲಿ ಚೆನ್ನಾಗಿ ಬ್ಯಾಟ್ ಬೀಸಿದ ಬೆಥೆಲ್ ಕೇವಲ 12 ರನ್ಗೆ ಔಟ್ ಆದ್ರು. ಇದು ಫಿಲ್ ಸಾಲ್ಟ್ ಅವರ ಸ್ಥಾನಕ್ಕೆ ಸೂಕ್ತ ಎನಿಸಲಿಲ್ಲ. ಇಷ್ಟಕ್ಕೂ ಸ್ಫೋಟಕ ಬ್ಯಾಟರ್ಗೆ ಏನಾಗಿದೆ ಎಂದರೆ..?
ಇದನ್ನೂ ಓದಿ:ವಿರಾಟ್ ಕೊಹ್ಲಿ ಹಿಂದೆ ಹನುಮನ ಬಲ.. ಸ್ಟಾರ್ ಬ್ಯಾಟರ್ ಆದ್ರೂ ಆಂಜನೇಯನ ಪರಮಭಕ್ತ!
ಆರ್ಸಿಬಿ ಕ್ಯಾಂಪ್ನಲ್ಲಿರುವ ಫಿಲ್ ಸಾಲ್ಟ್ ಎಲ್ಲಿಗೂ ಹೋಗಿಲ್ಲ. ಸದ್ಯ ಅವರು ತೀವ್ರ ಜ್ವರದಿಂದ ಬಳಲುತ್ತಿದ್ದಾರೆ. ಕೆಟ್ಟ ವಾತಾವರಣದಿಂದ ಅವರಲ್ಲಿ ಜ್ವರ ಕಾಣಿಸಿಕೊಂಡಿದೆ ಎನ್ನಲಾಗಿದೆ. ಹೀಗಾಗಿ ಡೆಲ್ಲಿ ತಂಡದ ವಿರುದ್ಧ ಅವರು ಬ್ಯಾಟಿಂಗ್ಗೆ ಬರಲಿಲ್ಲ. ಈ ಬಗ್ಗೆ ಮೊದಲೇ ಆರ್ಸಿಬಿ ಕ್ಯಾಪ್ಟನ್ ರಜತ್ ಪಾಟಿದಾರ್ ಮಾಹಿತಿ ನೀಡಿದ್ದರು. ಸಾಲ್ಟ್ ಪಂದ್ಯದಲ್ಲಿ ಕಾಣಿಸಿಕೊಳ್ಳದೆ ಇರುವುದು ಆರ್ಸಿಬಿಗೆ ದೊಡ್ಡ ಹೊಡೆತ ಎನ್ನಬಹುದು. ಇನ್ನು ಮುಂದಿನ ಪಂದ್ಯ ಸಾಲ್ಟ್ ಆಡ್ತಾರಾ?.
ಆರ್ಸಿಬಿ ಮುಂದಿನ ಪಂದ್ಯವನ್ನು ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಜೆ 7:30ಕ್ಕೆ ಬದ್ಧಶತ್ರುವಾದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಫಿಲ್ ಸಾಲ್ಟ್ ಕ್ರೀಸ್ಗೆ ಆಗಮಿಸ್ತಾರೋ, ಇಲ್ಲವೋ ಎಂಬುದು ಇನ್ನು ಕನ್ಫರ್ಮ್ ಆಗಿ ಯಾರು ಕೂಡ ಮಾಹಿತಿ ನೀಡಿಲ್ಲ. ಸದ್ಯಕ್ಕಂತೂ ಫಿಲ್ ಸಾಲ್ಟ್ ಜ್ವರದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಬೇಗ ಆರಾಮಾಗಿ ಮತ್ತೆ ಅವರು ಆರ್ಸಿಬಿ ತಂಡದಲ್ಲಿ ಸ್ಫೋಟಕ ಬ್ಯಾಟಿಂಗ್ ಆರಂಭಿಸಲಿ ಎನ್ನುವುದು ಅಭಿಮಾನಿಗಳ ದೊಡ್ಡ ಆಶಯವಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ