/newsfirstlive-kannada/media/post_attachments/wp-content/uploads/2025/05/PHIL_SALT_NEW.jpg)
ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಚೆನ್ನೈ ವಿರುದ್ಧ ಆರ್ಸಿಬಿ ಅಖಾಡಕ್ಕೆ ಇಳಿಯುತ್ತಿದೆ. ಈ ಸೀಸನ್ ಆರಂಭದಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಓಪನರ್ ಫಿಲ್ ಸಾಲ್ಟ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಆರಂಭದ ಬ್ಯಾಟಿಂಗ್ನಲ್ಲಿ ಕೊಹ್ಲಿಗೆ ಒಳ್ಳೆಯ ಸಾಥ್ ಕೊಡುತ್ತಿದ್ದ ಫಿಲ್ ಸಾಲ್ಟ್ ಇಂದಿನ ಪಂದ್ಯದಿಂದ ಹೊರಗುಳಿಯಲಿದ್ದಾರೆ ಎಂದು ಹೇಳಲಾಗಿದೆ.
ಸಿಎಸ್ಕೆ ಹಾಗೂ ಆರ್ಸಿಬಿ ನಡುವೆ ಹೈವೋಲ್ಟೇಜ್ ಪಂದ್ಯ ಇಂದು ಸಂಜೆ ನಡೆಯಲಿದೆ. ಈಗಾಗಲೇ ಒಂದು ಬಾರಿ ಧೋನಿ ಪಡೆಯನ್ನು ಮಣ್ಣು ಮುಕ್ಕಿಸಿರುವ ಆರ್ಸಿಬಿ ಗೆಲುವಿನ ಅಲೆಯನ್ನು ಮುಂದುವರೆಸಿಕೊಂಡು ಹೋಗುತ್ತಿದೆ. ಇದರ ನಡುವೆ ಓಪನರ್ ಫಿಲ್ ಸಾಲ್ಟ್ ಮೈದಾನಕ್ಕೆ ಇಳಿಯುವುದಿಲ್ಲ ಎನ್ನಲಾಗಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಆರ್ಸಿಬಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿದೆ.
ಇದನ್ನೂ ಓದಿ:RCB ಅಭಿಮಾನಿಗಳು ಯಾವಾಗಲೂ ಲಾಯಲ್ ಎನ್ನುವುದಕ್ಕೆ ಈ ಸ್ಟೋರಿನೇ ಸಾಕ್ಷಿ.. ಹೇಗೆ?
ಪಂದ್ಯ ಆರಂಭಕ್ಕೂ ಮೊದಲೇ ಆರ್ಸಿಬಿ ಫ್ರಾಂಚೈಸಿಯು ತನ್ನ ಅಧಿಕೃತ ಸೋಶಿಯಲ್ ಮೀಡಿಯಾದಲ್ಲಿ ಯುವ ಆಟಗಾರ ಜಾಕೋಬ್ ಬೆಥೆಲ್ ಫೋಟೋವನ್ನು ಶೇರ್ ಮಾಡಿದೆ. ಬೆಥೆಲ್ ಲಾಕ್ ಆದಾಗ ಎಲ್ಲವೂ ಬ್ರೇಕ್ ಆಗುತ್ತವೆ ಎಂದು ಟ್ಯಾಗ್ ಲೈನ್ ಅಲ್ಲಿ ಹೇಳಿದೆ. ಅಂದರೆ ಸಿಎಸ್ಕೆ ಜೊತೆಗಿನ ಪಂದ್ಯದಲ್ಲಿ ಆರ್ಸಿಬಿ ಓಪನರ್ ಫಿಲ್ ಸಾಲ್ಟ್ ಅಖಾಡಕ್ಕೆ ಧುಮುಕುತ್ತಿಲ್ಲ ಎಂದು ಇದರಿಂದ ಗೊತ್ತಾಗುತ್ತದೆ.
ಇದನ್ನೂ ಓದಿ: ಇವತ್ತಿನ ಪಂದ್ಯಕ್ಕೂ ಮುನ್ನವೇ RCBಗೆ ಬಿಗ್ ಶಾಕ್.. ವಿಸ್ಫೋಟಕ ಬ್ಯಾಟರ್ ಆಡೋದಿಲ್ಲ
ಇದರ ಜೊತೆಗೆ ಕನ್ನಡಿಗ ದೇವದತ್ ಪಡಿಕ್ಕಲ್ ಮಾತನಾಡುವಾಗ, ಫಿಲ್ ಸಾಲ್ಟ್ ಇವತ್ತಿನ ಪಂದ್ಯದಲ್ಲಿ ಆಡುತ್ತಾರೋ, ಇಲ್ವೋ ಎಂದು ಸಂಪೂರ್ಣ ಮಾಹಿತಿ ಇಲ್ಲ. ಆದರೆ ವೈದ್ಯಕೀಯ ತಂಡದ ಜೊತೆ ಸಾಲ್ಟ್ ಇನ್ನು ಇದ್ದಾರೆ ಎಂದಿದ್ದಾರೆ. ಡೆಲ್ಲಿ ವಿರುದ್ಧದ ಪಂದ್ಯದ ವೇಳೆಯೇ ಸಾಲ್ಟ್ ಜ್ವರದಿಂದ ಬಳಲುತ್ತಿದ್ದರು. ಅಂದಿನಿಂದ ಇದವರೆಗೂ ಸರಿಯಾಗಿ ಚೇತರಿಕೆ ಕಂಡಿಲ್ಲ. ಹೀಗಾಗಿಯೇ ಇವತ್ತಿನ ಚೆನ್ನೈ ವಿರುದ್ಧದ ಮ್ಯಾಚ್ನಲ್ಲಿ ಸಾಲ್ಟ್ ಮೈದಾನದಲ್ಲಿ ಕಾಣುವುದಿಲ್ಲ ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ