RCB ಓಪನರ್​ ವಿಸ್ಫೋಟಕ ಬ್ಯಾಟಿಂಗ್.. ರಾಯಲ್ಸ್​ ವಿರುದ್ಧ ಫಿಲಿಪ್ ಸಾಲ್ಟ್​ ಘರ್ಜನೆ

author-image
Bheemappa
Updated On
RCB ನೆಕ್ಸ್ಟ್​ ಮ್ಯಾಚ್ ಯಾವಾಗ, ಎಲ್ಲಿ..? ಬಲಿಷ್ಠ ಟೀಮ್ ಜೊತೆ ಹೋರಾಡಲಿರೋ ರಜತ್ ಸೇನೆ
Advertisment
  • ರಾಜಸ್ಥಾನ್ ಬೌಲರ್​ಗಳಿಗೆ ಮನಬಂದಂತೆ ಚಚ್ಚಿದ ಸಾಲ್ಟ್
  • ತವರಿನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆರ್​ಆರ್​ಗೆ ಹಿನ್ನಡೆ
  • 6, 6, 6, 6, 6, 6 ಭರ್ಜರಿ ಸಿಕ್ಸರ್​ಗಳನ್ನ ಬಾರಿಸಿದ ಓಪನರ್​

ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್​ ತಂಡದ ವಿರುದ್ಧ ಆರ್​ಸಿಬಿಯ ವಿಸ್ಫೋಟಕ ಬ್ಯಾಟ್ಸ್​ಮನ್​ ಫಿಲ್ ಸಾಲ್ಟ್​ ವೇಗದ ಹಾಫ್​ಸೆಂಚುರಿ ಸಿಡಿಸಿದ್ದಾರೆ.

ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಓಪನರ್ ಆಗಿರುವ ಫಿಲಿಪ್ ಸಾಲ್ಟ್​ ಬೌಂಡರಿ, ಸಿಕ್ಸರ್​ ಬಾರಿಸುವುದರಲ್ಲಿ ಮೊದಲಿಗರು. ಆರ್​ಸಿಬಿ ಪರ ಆರಂಭಿಕರಾಗಿ ಕ್ರೀಸ್​ಗೆ ಆಗಮಿಸುವ ಸಾಲ್ಟ್, ತಮ್ಮ ಬ್ಯಾಟಿಂಗ್​​ನಿಂದ ಎದುರಾಳಿ ಬೌಲರ್​ಗಳ ಎದೆಯಲ್ಲಿ ಭಯ ಹುಟ್ಟಿಸಿ ಬಿಡುತ್ತಾರೆ. ಕೊಹ್ಲಿ ಜೊತೆ ಇನ್ನಿಂಗ್ಸ್​ ಆರಂಭಿಸುವ ಸಾಲ್ಟ್​ ಹೊಡಿಬಡಿ ಬ್ಯಾಟಿಂಗ್​ಗೆ ಪ್ರಸಿದ್ಧಿಯಾಗಿದ್ದಾರೆ.

ಇದನ್ನೂ ಓದಿ:RCB ಮುಂದೆ ಸಾಧಾರಣ ಮೊತ್ತದ ಟಾರ್ಗೆಟ್​.. ಚೇಸ್​ ಮಾಡಿ ಗೆಲುವು ಪಡೆಯುತ್ತಾ ರಜತ್ ಟೀಮ್?

publive-image

ಸದ್ಯ ರಾಜಸ್ಥಾನ್ ರಾಯಲ್ಸ್​ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಫಿಲಿಪ್ ಸಾಲ್ಟ್​ ಭರ್ಜರಿ ಅರ್ಧಶತಕ ಬಾರಿಸಿದ್ದಾರೆ. ​ಕೇವಲ 28 ಎಸೆತಗಳಲ್ಲೇ 50 ರನ್​ ಸಿಡಿಸಿ ವೇಗದ ಹಾಫ್​ಸೆಂಚುರಿ ಗಳಿಸಿದ್ದಾರೆ. ಕ್ರೀಸ್​ನಲ್ಲಿ ಇರುವವರೆಗೆ ರಾಯಲ್ಸ್​ ಬೌಲರ್​ಗಳ ಮೇಲೆ ಸವಾರಿ ಮಾಡಿದರು. ಸಾಲ್ಟ್ ಯಾವಾಗ ಔಟ್ ಆಗುತ್ತಾರೆಂದು ಬೌಲರ್ಸ್​ ಕಾಯುತ್ತಿದ್ದರು.

5 ಬೌಂಡರಿ ಹಾಗೂ 6 ಅದ್ಭುತವಾದ ಸಿಕ್ಸರ್​ಗಳಿಂದ ಕೇವಲ 33 ಎಸೆತದಲ್ಲಿ 65 ರನ್​ಗಳಿಂದ ಬ್ಯಾಟಿಂಗ್ ಮುಂದುವರೆಸಿದ್ದರು. ಈ ವೇಳೆ ಬೌಲಿಂಗ್​ಗೆ ಆಗಮಿಸಿದ ಕುಮಾರ್ ಕಾರ್ತಿಕೇಯ ಅವರ ಎಸೆತವನ್ನು ಜೋರಾಗಿ ಹೊಡೆದರು. ಆದರೆ ಆ ಬಾಲ್ ನೇರ ಯಶಸ್ವಿ ಜೈಸ್ವಾಲ್ ಅವರ ಕೈ ಸೇರಿತು. ಹೀಗಾಗಿ ಸಾಲ್ಟ್​ 65 ರನ್​ಗಳಿಗೆ ತಮ್ಮ ಬ್ಯಾಟಿಂಗ್ ಮುಗಿಸಿದರು. ಸದ್ಯ ಸಾಲ್ಟ್ ಆಗಿದ್ದಾಗ ಆರ್​ಸಿಬಿ ರನ್​ಗಳು 92 ಆಗಿದ್ದವು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment