/newsfirstlive-kannada/media/post_attachments/wp-content/uploads/2025/04/Philip_Salt.jpg)
ಮುಂಬೈ ಇಂಡಿಯನ್ಸ್​ ಜೊತೆ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ವಿಸ್ಫೋಟಕ ಬ್ಯಾಟರ್ ಫಿಲಿಪ್ ಸಾಲ್ಟ್ ಕೈಕೊಟ್ಟಿದ್ದಾರೆ. ಕೇವಲ 4 ರನ್​ಗೆ ಸಾಲ್ಟ್​ ಕ್ಲೀನ್ ಬೋಲ್ಡ್ ಆಗಿರುವುದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.
ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಕ್ಯಾಪ್ಟನ್ ಪಾಂಡ್ಯ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ಆರ್​​ಸಿಬಿಯನ್ನ ಬ್ಯಾಟಿಂಗ್​​ಗೆ ಆಹ್ವಾನ ಮಾಡಿದರು. ಫಿಲಿಪ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಓಪನರ್ ಆಗಿ ಆರ್​ಸಿಬಿ ಪರ ಎಂದಿನಂತೆ ಕ್ರೀಸ್​ಗೆ ​ಆಗಮಿಸಿದ್ದರು. ಇಬ್ಬರು ಉತ್ತಮ ಆರಂಭ ತೆಗೆದುಕೊಳ್ಳಬೇಕು ಎನ್ನುವಷ್ಟರಲ್ಲಿ ಸಾಲ್ಟ್​ ಕ್ಲೀನ್ ಬೋಲ್ಡ್ ಆಗಿದ್ದಾರೆ.
ಮುಂಬೈ ಇಂಡಿಯನ್ಸ್​ ತಂಡದ ಪೇಸ್ ಬೌಲರ್ ಟ್ರೆಂಟ್​ ಬೋಲ್ಟ್​​ ಅವರ ಮೊದಲ ಓವರ್​ನಲ್ಲಿ ಕೇವಲ 1 ಬಾಲ್​ಗೆ ಒಂದು ಫೋರ್ ಬಾರಿಸಿ ಫಿಲಿಪ್ ಸಾಲ್ಟ್ ಬಿರುಸಿನ ಬ್ಯಾಟಿಂಗ್​ಗೆ ಅಣಿಯಾಗುತ್ತಿದ್ದರು. ಆದರೆ 2ನೇ ಎಸೆತವನ್ನು ಬಿಗ್ ಶಾಟ್​ಗೆ ಟ್ರೈ ಮಾಡಲು ಹೋದಾಗ ಕ್ಲೀನ್ ಬೋಲ್ಡ್ ಆದರು. ಇದರಿಂದ ಮುಂಬೈ ಪರ ಆಟಗಾರರು ಸಂಭ್ರಮಿಸಿದರು. ಸದ್ಯ ಕ್ರೀಸ್​ನಲ್ಲಿ ವಿರಾಟ್ ಕೊಹ್ಲಿ (36) ಹಾಗೂ ಕನ್ನಡಿಗ ದೇವದತ್ ಪಡಿಕ್ಕಲ್ (33) ಬ್ಯಾಟ್ ಬೀಸುತ್ತಿದ್ದಾರೆ. ತಂಡದ ಮೊತ್ತ 6.2 ಓವರ್​ಗಳಲ್ಲಿ 74 ರನ್ ಆಗಿವೆ.
ಆರ್​ಸಿಬಿ ಕೊನೆಯದಾಗಿ ವಾಂಖೆಡೆಯಲ್ಲಿ 2015ರಲ್ಲಿ ಜಯ ಸಾಧಿಸಿತ್ತು. ಅಂದಿನಿಂದ ಇಂದಿನವರೆಗೂ ಮುಂಬೈ ವಿರುದ್ಧ ವಾಂಖೆಡೆಯಲ್ಲಿ ಗೆಲುವು ಅನ್ನೋದೇ ಆರ್​ಸಿಬಿ ನೋಡಿಲ್ಲ. 2015ರಲ್ಲಿ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 82 ಹಾಗೂ ಎಬಿ ಡಿವಿಲಿಯರ್ಸ್​ 133 ರನ್​ಗಳಿಂದ ಆರ್​ಸಿಬಿ 235 ರನ್​ಗಳ ಟಾರ್ಗೆಟ್ ಸೆಟ್ ಮಾಡಿತ್ತು. ಆದ್ರೆ ಈ ಟಾರ್ಗೆಟ್​ನಿಂದ ಭಯ ಬಿದ್ದಿದ್ದ ಮುಂಬೈ 39 ರನ್​ಗಳಿಂದ ಸೋತಿತ್ತು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ