/newsfirstlive-kannada/media/post_attachments/wp-content/uploads/2025/04/SALT_UPPI.jpg)
ರಾಯಲ್ ಚಾಲೆಂಜರ್ಸ್ ತಂಡದ ಸ್ಫೋಟಕ ಬ್ಯಾಟರ್ ಫಿಲಿಪ್ ಸಾಲ್ಟ್. ಆರ್ಸಿಬಿ ಪಂದ್ಯದಲ್ಲಿ ಯಾವಾಗಲು ಆರಂಭಿಕರಾಗಿ ಕ್ರೀಸ್ಗೆ ಬರುತ್ತಾರೆ. ಬ್ಯಾಟ್ ಹಿಡಿದು ಮೈದಾನಕ್ಕೆ ಬಂದವರೇ ಎದುರಾಳಿ ಬೌಲರ್ಗಳ ಮೇಲೆ ದಾಳಿಗೆ ಅಣಿಯಾಗುತ್ತಾರೆ. ಕಿಂಗ್ ಕೊಹ್ಲಿ ಜತೆ ಓಪನಿಂಗ್ ಪಡೆಯುವ ಸಾಲ್ಟ್, ಸದ್ಯ ಸಂದರ್ಶನವೊಂದರಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರ ಸಿನಿಮಾದ ಫೇಮಸ್ ಹಾಡನ್ನು ಚುಟುಕಾಗಿ ಹಾಡಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಜೊತೆಗಿನ ಕಳೆದ ಪಂದ್ಯದಲ್ಲಿ ಸ್ಫೋಟಕ ಬ್ಯಾಟರ್ ಫಿಲ್ ಸಾಲ್ಟ್ ಮೈದಾನಲ್ಲಿ ಕಾಣಿಸಲಿಲ್ಲ. ಇದು ಆರ್ಸಿಬಿ ಅಭಿಮಾನಿಗಳಿಗೆ ಬೇಸರ ತರಿಸಿದರೂ ತಂಡ ಮಾತ್ರ ಗೆಲುವು ಸಾಧಿಸಿದ್ದು ಸಂತಸ ಸಂಗತಿ. ಸದ್ಯ ಜ್ವರದಿಂದ ಬಳಲುತ್ತಿರುವ ಸಾಲ್ಟ್ ಅವರು ಡ್ಯಾನಿಶ್ ಸೇಟ್ ಅಥವಾ ಮಿಸ್ಟರ್ ನಾಗ್ ಅವರು ನಡೆಸಿಕೊಡುವ ಆರ್ಸಿಬಿಯ ಸೋಶಿಯಲ್ ಮೀಡಿಯಾದ ಟೀ ಪಾರ್ಟಿ ಸಂದರ್ಶನದಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ:ತಿಮ್ಮಪ್ಪನ ದರ್ಶನ ಪಡೆದ RCB ಕ್ಯಾಪ್ಟನ್, ವಿಕೆಟ್ ಕೀಪರ್.. 18 ವರ್ಷಗಳ ಸತತ ಹೋರಾಟಕ್ಕೆ ಬ್ರೇಕ್ ಬೀಳುತ್ತಾ?
ಮಿಸ್ಟರ್ ನಾಗ್ ಸಂದರ್ಶನದಲ್ಲಿ ಕೇಳುವ ಎಲ್ಲ ಪ್ರಶ್ನೆಗಳಿಗೂ ಫಿಲ್ ಸಾಲ್ಟ್ ಉತ್ತರ ನೀಡಿದ್ದಾರೆ. ನೀವು ಬ್ಯಾಟಿಂಗ್ಗೆ ಹೋಗಬೇಕಾದರೆ ಒಂದು ಸಾಂಗ್ ಹಾಕುತ್ತಾರೆ. ಆ ಹಾಡು ಯಾವುದು ಅಂತ ಗೊತ್ತಾ ಅಂತ ಕೇಳಿದ್ದಾರೆ. ಇದಕ್ಕೆ ಫಿಲ್ ಸಾಲ್ಟ್ ಆ ಹಾಡು ನನಗೆ ಚೆನ್ನಾಗಿ ಗೊತ್ತಿದೆ ಎಂದು ಖುಷಿ ಪಟ್ಟಿದ್ದಾರೆ. ಇದೇ ವೇಳೆ ಉಪ್ಪಿಗಿಂತ ರುಚಿ ಬೇರೆ ಇಲ್ಲ ಎನ್ನುವ ಸಾಂಗ್ ಅನ್ನು ಪ್ಲೇ ಮಾಡಿದ್ದು ಇದಕ್ಕೆ ಫಿಲ್ ಸಾಲ್ಟ್ ಧ್ವನಿಗೂಡಿಸಿದ್ದಾರೆ.
ರಿಯಲ್ ಸ್ಟಾರ್ ಉಪೇಂದ್ರ ಅವರು ಅಭಿನಯದ ಉಪೇಂದ್ರ ಸಿನಿಮಾದ ಉಪ್ಪಿಗಿಂತ ರುಚಿ ಬೇರೆ ಇಲ್ಲ ಎನ್ನುವ ಹಾಡು ಈಗಲೂ ಕನ್ನಡಿಗರ ಮನದಲ್ಲಿ ಜನಪ್ರಿಯವಾಗಿದೆ. ಇಂತಹ ಹಾಡು ವಿದೇಶಿ ಆಟಗಾರರ ಮನ ಗೆದ್ದಿರುವುದು ಖುಷಿಯ ಸಂಗತಿಯೇ ಸರಿ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ಆಟಗಾರರು ಬ್ಯಾಟಿಂಗ್ ಮಾಡಲು ಕ್ರೀಸ್ಗೆ ಹೋಗುವಾಗ ಉಪ್ಪಿಗಿಂತ ರುಚಿ ಬೇರೆ ಇಲ್ಲ ಹಾಡನ್ನು ಪ್ಲೇ ಮಾಡುತ್ತಿರುತ್ತಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ