6, 6, 4, 4, 4, 4, 4, 4; ಸಿಕ್ಸ್​ ಸಿಡಿಸಿ ಹಾಫ್​ಸೆಂಚುರಿ ಬಾರಿಸಿದ ಆರ್​ಸಿಬಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ

author-image
Bheemappa
Updated On
6, 6, 4, 4, 4, 4, 4, 4; ಸಿಕ್ಸ್​ ಸಿಡಿಸಿ ಹಾಫ್​ಸೆಂಚುರಿ ಬಾರಿಸಿದ ಆರ್​ಸಿಬಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ
Advertisment
  • ಮುಂಬೈ ಬೌಲರ್​ಗಳಿಗೆ ಮನಬಂದಂತೆ ಚಚ್ಚಿದ ವಿರಾಟ್ ಕೊಹ್ಲಿ
  • ಫಿಲ್ ಸಾಲ್ಟ್​ ಬೋಲ್ಡ್ ಆದರೂ ಕೊಹ್ಲಿ ಅದ್ಭುತವಾದ ಬ್ಯಾಟಿಂಗ್
  • ಕಿಂಗ್ ಕೊಹ್ಲಿಗೆ ಅತ್ಯುತ್ತಮ ಸಾಥ್ ಕೊಟ್ಟಿದ್ದ ದೇವದತ್ ಪಡಿಕ್ಕಲ್

ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಸಿಕ್ಸರ್​ ಸಿಡಿಸಿ, ಭರ್ಜರಿ ಅರ್ಧಶತಕ ಬಾರಿಸಿದ್ದಾರೆ.

ಮುಂಬೈ ಇಂಡಿಯನ್ಸ್​ ತಂಡದ ವಿರುದ್ಧ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕಿಂಗ್ ಕೊಹ್ಲಿಯ ಬ್ಯಾಟಿಂಗ್ ರಣಾರ್ಭಟ ಅಭಿಮಾನಿಗಳ ಕಣ್ಣಿಗೆ ರೋಚಕವಾಗಿ ಕಾಣಿಸಿದೆ. ಓಪನರ್ ಕ್ರೀಸ್​ಗೆ ಆಗಮಿಸಿದ್ದ ವಿರಾಟ್ ಕೊಹ್ಲಿ, ಜೊತೆಗಾರ ಸಾಲ್ಟ್ ಕ್ಲೀನ್ ಬೋಲ್ಡ್​ ಆದರೂ ತಮ್ಮ ಬ್ಯಾಟಿಂಗ್ ಅಬ್ಬರ ಮುಂದುವರೆಸಿದ್ದರು.

ಇದನ್ನೂ ಓದಿ:ಮೊದಲ ಓವರ್​​ನಲ್ಲೇ RCB ವಿಸ್ಫೋಟಕ ಬ್ಯಾಟರ್ ಕ್ಲೀನ್ ಬೋಲ್ಡ್​

publive-image

ಪಂದ್ಯದಲ್ಲಿ ಕೇವಲ 29 ಎಸೆತಗಳನ್ನು ಎದುರಿಸಿದ ಆರ್​ಸಿಬಿ ಓಪನರ್ ವಿರಾಟ್ ಕೊಹ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್​ಗಳಿಂದ 52 ರನ್​ಗಳನ್ನು ದಾಖಲಿಸಿದರು. ಇದು ಮುಂಬೈ ತಂಡದ ವಿರುದ್ಧ ಕೊಹ್ಲಿಯ 7ನೇ ಹಾಫ್​ಸೆಂಚುರಿ ಆಗಿದೆ. ಮುಂಬೈ ಬೌಲರ್ ವಿಘ್ನೇಶ್ ಪುತೂರಿಗೆ ಸಿಕ್ಸರ್ ಸಿಡಿಸುವ ಮೂಲಕ ಅರ್ಧಶತಕ ಬಾರಿಸಿದರು.

ವಿರಾಟ್​ ಕೊಹ್ಲಿಗೆ ಉತ್ತಮ ಸಾಥ್ ನೀಡಿದ ಕನ್ನಡಿಗ ದೇವದತ್ ಪಡಿಕ್ಕಲ್ ಕೇವಲ 22 ಎಸೆತಗಳಲ್ಲಿ 37 ರನ್​ಗಳನ್ನು ಸಿಡಿಸಿದರು. ಇದರಲ್ಲಿ 2 ಬೌಂಡರಿ ಇದ್ರೆ 3 ಆಕಾಶದೆತ್ತರವಾದ ಸಿಕ್ಸರ್​ಗಳು ಇದ್ದವು. ಈ ವೇಳೆ ವಿಘ್ನೇಶ್ ಪುತೂರು ಎಸೆತವನ್ನು ಜೋರಾಗಿ ಬಾರಿಸಿದ ಪಡಿಕ್ಕಲರ್ ವಿಲ್ ಜಾಕ್ಸ್​ಗೆ ಕ್ಯಾಚ್ ಕೊಟ್ಟು ಪೆವಿಲಿಯನ್​ಗೆ ನಡೆದರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment