/newsfirstlive-kannada/media/post_attachments/wp-content/uploads/2025/04/KOHLI_SALT.jpg)
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಹೈವೋಲ್ಟೇಜ್ ಪಂದ್ಯ ಇಂದು ನಡೆಯಲಿದೆ. ಈ ಸೀಸನ್ನಲ್ಲಿ ಯಶಸ್ವಿ ಓಟ ಆರಂಭಿಸಿರುವ ಆರ್ಸಿಬಿ ಈಗಾಗಲೇ ಆಡಿರುವ ಪಂದ್ಯಗಳಲ್ಲಿ 3 ಸೋತು, 7 ರಲ್ಲಿ ಗೆಲವು ಸಾಧಿಸಿದೆ. ಇದೇ ಗೆಲುವನ್ನು ಮುಂದುವರೆಸಲು ರ್ಸಿಬಿಗೆ ದೊಡ್ಡ ಸಂಕಷ್ಟ ಈಗ ಎದುರಾಗಿದೆ.
ಆರ್ಸಿಬಿಯ ವಿಸ್ಫೋಟಕ ಬ್ಯಾಟ್ಸ್ಮನ್ ಓಪನರ್ ಫಿಲ್ ಸಾಲ್ಟ್ ಅವರು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕಣಕ್ಕೆ ಇಳಿಯುವುದು ಅನುಮಾನ ಇದೆ. ಡೆಲ್ಲಿ ಪಂದ್ಯದ ವೇಳೆಯೇ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದರು. ಜ್ವರದಿಂದ ಬಳಲುತ್ತಿರುವ ಸಾಲ್ಟ್ ಇನ್ನು ಆರ್ಸಿಬಿಯ ವೈದ್ಯಕೀಯ ತಂಡದೊಂದಿಗೆ ಇದ್ದಾರೆ. ಶೀಘ್ರದಲ್ಲೇ ಹಿಂದಿರುಗುವ ವಿಶ್ವಾಸವಿದೆ ಎಂದು ಸ್ವತಹ ಕನ್ನಡಿಗ ದೇವದತ್ ಪಡಿಕ್ಕಲ್ ಅವರು ಹೇಳಿದ್ದಾರೆ.
ಇದನ್ನೂ ಓದಿ: ಹೈದ್ರಾಬಾದ್ ಪ್ಲೇ ಆಫ್ ಕನಸು ಭಗ್ನ..? ಬೃಹತ್ ಟಾರ್ಗೆಟ್ ನೀಡಿದ್ದ ಗಿಲ್ ಪಡೆಗೆ ಗೆಲುವು
ಫಿಲ್ ಸಾಲ್ಟ್ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಆಡುತ್ತಾರೋ, ಇಲ್ವೋ ಎಂದು ಸರಿಯಾಗಿ ಮಾಹಿತಿ ಇಲ್ಲ. ಆದ್ರೆ ಸಾಲ್ಟ್ ಇನ್ನು ವೈದ್ಯಕೀಯ ತಂಡದ ಜೊತೆಗಿದ್ದಾರೆ ಎಂದು ಕನ್ನಡಿಗ ದೇವದತ್ ಪಡಿಕ್ಕಲ್ ಹೇಳಿದ್ದಾರೆ. ಒಂದು ವೇಳೆ ಸಾಲ್ಟ್ ಕ್ರೀಸ್ಗೆ ಆಗಮಿಸದಿದ್ದರೇ, ವಿರಾಟ್ ಕೊಹ್ಲಿ ಜೊತೆ ವಿದೇಶಿಯ ಯುವ ಪ್ಲೇಯರ್ ಜಾಕೋಬ್ ಬೆಥೆಲ್ ಓಪನರ್ ಆಗಿ ಮೈದಾನಕ್ಕೆ ಎಂಟ್ರಿ ಕೊಡಲಿದ್ದಾರೆ.
ಚೆನ್ನೈ ಈ ಸೀಸನ್ ಅಲ್ಲಿ ತೀರ ಹೀನಾಯವಾದ ಆಟ ಪ್ರದರ್ಶನ ಮಾಡಿ ಪಾಯಿಂಟ್ ಪಟ್ಟಿಯಲ್ಲಿ ಕೊನೆಯಲ್ಲಿದೆ. ಆರ್ಸಿಬಿ ಇದಕ್ಕೆ ತದ್ವಿರುದ್ಧವಾಗಿದ್ದು ಈಗಾಗಲೇ ಅಗ್ರಸ್ಥಾನಕ್ಕೂ ಎಂಟ್ರಿ ಕೊಟ್ಟು ಈಗ 3ನೇ ಸ್ಥಾನದಲ್ಲಿದೆ. ಆದ್ರೆ ಚಿನ್ನಸ್ವಾಮಿಯಲ್ಲಿ ನಡೆಯುವ ಇವತ್ತಿನ ಪಂದ್ಯದಲ್ಲಿ ಚೆನ್ನೈಯನ್ನು ಸೋಲಿಸಿದರೆ ಆರ್ಸಿಬಿಯ ಇಮೇಜ್ ಇನ್ನಷ್ಟು ಹೆಚ್ಚುವುದರಲ್ಲಿ ಸಂದೇಹವೇ ಬೇಡ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ