/newsfirstlive-kannada/media/post_attachments/wp-content/uploads/2025/01/RCB-Logo.jpg)
ಸದ್ಯ ವಡೋದರಾ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ 2025ರ ಮಹಿಳಾ ಪ್ರೀಮಿಯರ್ ಲೀಗ್​ 4ನೇ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿ ಆಗಿವೆ.
ಕಳೆದ ಬಾರಿ ಫೈನಲ್ ಪಂದ್ಯದಲ್ಲಿ ಡೆಲ್ಲಿ ತಂಡವನ್ನು ಆರ್​​ಸಿಬಿ ಮಣಿಸಿ ಕಪ್​ ಗೆದ್ದಿತ್ತು. ಈ ಮೂಲಕ ಆರ್​​ಸಿಬಿ ಮೊದಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಈಗ ಅದೇ ತಂಡದ ವಿರುದ್ಧ ಲೀಗ್​ ಹಂತದ ಪಂದ್ಯದಲ್ಲಿ ಆರ್​​ಸಿಬಿ ಕಣಕ್ಕಿಳಿಯುತ್ತಿದೆ.
ಟಾಸ್ ಗೆದ್ದ ಆರ್​ಸಿಬಿ ನಾಯಕಿ ಸ್ಮೃತಿ ಮಂದಾನ ಮೊದಲು ಬೌಲಿಂಗ್ ಆಯ್ದುಕೊಂಡಿದ್ದಾರೆ. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಫಸ್ಟ್​ ಬ್ಯಾಟಿಂಗ್​ಗೆ ಇಳಿದಿದೆ.
ಆರ್‌ಸಿಬಿ ಪ್ಲೇಯಿಂಗ್ ಎಲೆವೆನ್​ನಲ್ಲಿ ಭಾರೀ ಬದಲಾವಣೆ ಆಗಿದೆ. ಏಕ್ತಾ ಆರ್​​ಸಿಬಿ ತಂಡಕ್ಕೆ ಕಮ್​ಬ್ಯಾಕ್​ ಮಾಡಿದ್ದಾರೆ. ಇದು ಆರ್​​ಸಿಬಿಗೆ ಆನೆಬಲ ತಂದುಕೊಟ್ಟಿದೆ. ಉದ್ಘಾಟನಾ ಪಂದ್ಯದಲ್ಲೇ ಗುಜರಾತ್​ ವಿರುದ್ಧ ಗೆದ್ದು ಬೀಗಿದ್ದ ಆರ್​​ಸಿಬಿ ಡೆಲ್ಲಿ ವಿರುದ್ಧ ಗೆಲ್ಲೋ ತವಕದಲ್ಲಿದೆ.
ಡೆಲ್ಲಿ ವಿರುದ್ಧ ಪಂದ್ಯಕ್ಕೆ ಆರ್​​ಸಿಬಿ ತಂಡ ಹೀಗಿದೆ!
ಸ್ಮೃತಿ ಮಂದಾನ (ನಾಯಕಿ), ಡೇನಿಯಲ್ ವೈಟ್, ಎಲ್ಲಿಸ್ ಪೆರ್ರಿ, ರಾಘವಿ ಬಿಶ್ಟ್, ರಿಚಾ ಘೋಷ್ (ವಿಕೆಟ್ ಕೀಪರ್), ಕನಿಕಾ ಅಹುಜಾ, ಜಾರ್ಜಿಯಾ ವೇರ್‌ಹ್ಯಾಮ್, ಕಿಮ್ ಗಾರ್ತ್, ಏಕ್ತಾ ಬಿಶ್ಟ್, ಜೋಶಿತಾ ವಿಜೆ, ರೇಣುಕಾ ಠಾಕೂರ್ ಸಿಂಗ್.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us