/newsfirstlive-kannada/media/post_attachments/wp-content/uploads/2025/06/Rajath_patidar-1.jpg)
ಒಂದಲ್ಲ, ಎರಡಲ್ಲ, ಮೂರಲ್ಲ.. ಬರೋಬ್ಬರಿ 18 ವರ್ಷದಿಂದ ಆರ್​ಸಿಬಿ ಕಪ್ ಗೆದ್ದಿಲ್ಲ. ಆದ್ರೀಗ 18 ವರ್ಷದ ಆ ಕೊರಗು, ನಸೀಬು ಈ ವರ್ಷ ಬದಲಾಗಲಿದೆ. ಇಷ್ಟು ಕಾನ್ಫಿಡೆನ್ಸ್​ ಆಗಿ ಯಾಕೆ ಹೇಳ್ತಿದ್ದೀವಿ ಅಂತೀರಾ. ಇಲ್ಲಿರೋದನ್ನ ಓದಿದ್ರೆ ನಿಮಗೂ ಆ ನಂಬಿಕೆ ಬಂದೇ ಬರುತ್ತೆ.
ಇಂಡಿಯನ್​ ಪ್ರೀಮಿಯರ್​ ಲೀಗ್​ ವಿಶ್ವ ಕ್ರಿಕೆಟ್​ ಜಗತ್ತನ್ನೇ ಬದಲಾಯಿಸಿದ ಟೂರ್ನಿ. ಐಪಿಎಲ್ ಅಂದ್ರೆ​ ಒಂದು ಟೂರ್ನಿಯಲ್ಲ, ಇದೊಂದು ಬ್ರ್ಯಾಂಡ್​. ಇಂಥಹ ಬ್ರಾಂಡೆಡ್ ಲೀಗ್​ನಲ್ಲಿ ಇದುವರೆಗೆ ಐಪಿಎಲ್ ಟ್ರೋಫಿಗೆ ಮುತ್ತಿಟ್ಟ ಟೀಮ್ಸ್​, ಜಸ್ಟ್​ ಆರೇ ಆರು ಟೀಮ್ಸ್ ಮಾತ್ರ. ಈ ಪೈಕಿ ಮುಂಬೈ, ಚೆನ್ನೈ ತಲಾ 5 ಬಾರಿಯಾದ್ರೆ, ಕೊಲ್ಕತ್ತಾ ಮೂರು, ಇನ್ನುಳಿದ ಸನ್ ರೈಸರ್ಸ್​ ಹೈದ್ರಾಬಾದ್​ 2, ಗುಜರಾತ್ ಟೈಟನ್ಸ್​ ಹಾಗೂ ರಾಜಸ್ಥಾನ್ ರಾಯಲ್ಸ್ ತಲಾ ಒಮ್ಮೆ ಮಾತ್ರ.
/newsfirstlive-kannada/media/post_attachments/wp-content/uploads/2025/05/RCB-14.jpg)
ಇಂಟ್ರೆಸ್ಟಿಂಗ್ ಅಂದ್ರೆ, 18 ವರ್ಷಗಳಿಂದ ಐಪಿಎಲ್​ನಲ್ಲಿ ಆಡ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್​, ಪಂಜಾಬ್ ಕಿಂಗ್ಸ್​, ಲಕ್ನೋ ತಂಡಗಳು ಒಮ್ಮೆಯೂ ಟ್ರೋಫಿಗೆ ಮುತ್ತಿಟ್ಟಿಲ್ಲ. ಆದ್ರೆ, ಸೀಸನ್​​-18ರಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಟೀಮ್​, ಟ್ರೋಫಿ ಗೆಲ್ಲೋದು ಶತಸಿದ್ಧ.
17 ವರ್ಷಗಳ ಕನಸು ನನಸಾಗೋದು ಫಿಕ್ಸ್..?
ಆರ್​ಸಿಬಿ ಜಸ್ಟ್​ ತಂಡವಲ್ಲ, ಅದೊಂದು ಎಮೋಷನ್​, ಅಭಿಮಾನಿಗಳ ಪಾಲಿನ ಉಸಿರು. ಹೆಮ್ಮೆ. ಇದೇ ಕಾರಣಕ್ಕೆ 17 ವರ್ಷಗಳು ಕಪ್ ಗೆಲ್ಲದಿದ್ದರೂ, ಒಮ್ಮೆಯೂ ಚಾಂಪಿಯನ್ ಮೆರೆದಾಡದಿದ್ದರು. ಅದೇ ಕ್ರೇಜ್​ ಉಳಿಕೊಂಡಿದೆ. ಆದ್ರೆ, ಈ ವರ್ಷ ಐಪಿಎಲ್​ನಲ್ಲಿ 4ನೇ ಬಾರಿಗೆ ಫೈನಲ್​​ಗೆ ಎಂಟ್ರಿ ನೀಡಿರುವ ಆರ್​ಸಿಬಿಯ ಹಣೆ ಬರಹ ಬದಲಾಗಲಿದೆ. 17 ವರ್ಷಗಳಿಂದ ಟ್ರೋಫಿ ಗೆಲ್ಲದ ಕನಸು ನನಸಾಗಲಿದೆ. ಕೋಟ್ಯಾಂತರ ಅಭಿಮಾನಿಗಳ ಹೆಬ್ಬೆಯಕೆ ಈಡೇರಲಿದೆ. ಇದಕ್ಕೆ ಕಾರಣ ಆ ಒಂದು ಸಂಪ್ರದಾಯ.
ಈ ಹಿಂದಿನ 17 ವರ್ಷಗಳಲ್ಲಿ ಆರ್​ಸಿಬಿ 3 ಬಾರಿ ಫೈನಲ್​ಗೆ ಎಂಟ್ರಿ ನೀಡಿದೆ. ಆದ್ರೆ, ಮೂರಕ್ಕೆ ಮೂರು ಬಾರಿಯೂ ಫೈನಲ್​​ನಲ್ಲಿ ಸೋತು, ಕಪ್ ಎತ್ತಿಹಿಡಿಯುವ ಸುವರ್ಣಾವಕಾಶ ಕೈಚೆಲ್ಲಿದೆ. ಆದ್ರೆ, ಈ ವರ್ಷ ಅದ್ಬುತ ಆಟವಾಡಿ 4ನೇ ಬಾರಿಗೆ ಫೈನಲ್​​ಗೆ ಎಂಟ್ರಿ ನೀಡಿರುವ ಆರ್​ಸಿಬಿ, ಸೀಸನ್​​-18ರಲ್ಲಿ ಕಪ್​ ಮಿಸ್​ ಮಾಡೋ ಚಾನ್ಸೇ ಇಲ್ಲ. ಇದು ಜಸ್ಟ್ ನಾವ್​ ಹೇಳ್ತಿರೋ ಮಾತಲ್ಲ. ಕಳೆದ 7 ವರ್ಷಗಳ ಐಪಿಎಲ್ ಇತಿಹಾಸವೇ ನುಡಿಯುತ್ತಿರುವ ಭವಿಷ್ಯ.
ಕ್ವಾಲಿಪೈಯರ್-1 ಗೆದ್ದವರೇ ಚಾಂಪಿಯನ್ಸ್..!
- 2018ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್
- 2019ರಲ್ಲಿ ಮುಂಬೈ ಇಂಡಿಯನ್ಸ್ ಚಾಂಪಿಯನ್
- 2020ರಲ್ಲಿ ಮುಂಬೈ ಇಂಡಿಯನ್ಸ್ ಚಾಂಪಿಯನ್
- 2021ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್
- 2022ರಲ್ಲಿ ಗುಜರಾತ್ ಟೈಟನ್ಸ್ ಚಾಂಪಿಯನ್
- 2023ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್
- 2024ರಲ್ಲಿ ಕೊಲ್ಕತ್ತಾ ನೈಟ್​ ರೈಡರ್ಸ್​ ಚಾಂಪಿಯನ್​
/newsfirstlive-kannada/media/post_attachments/wp-content/uploads/2025/05/RCB_IPL_WIN.jpg)
2025ರಲ್ಲೂ ಇದೇ ಮುಂದುವರಿಯುತ್ತಾ..? ಕಪ್​ ನಮ್ದಾಗುತ್ತಾ..?
2018 ರಿಂದ 2024ರ ತನಕ ಕ್ವಾಲಿಫೈಯರ್​ ಗೆದ್ದವ್ರೇ, ಐಪಿಎಲ್ ಟ್ರೋಫಿಗೆ ಮುತ್ತಿಟ್ಟಿದ್ದಾರೆ. ಅದರಂತೆ ಈ ವರ್ಷ ಕ್ವಾಲಿಫೈಯರ್​​-1ನಲ್ಲಿ ಪಂಜಾಬ್ ಕಿಂಗ್ಸ್​ ಎದುರು ಗೆದ್ದು ಬೀಗಿರುವ ಬೆಂಗಳೂರು, 4ನೇ ಬಾರಿಗೆ ಫೈನಲ್​ಗೆ ಎಂಟ್ರಿ ನೀಡಿದೆ. ಹೀಗಾಗಿ ಕಳೆದ 7 ವರ್ಷಗಳ ಸಂಪ್ರದಾಯ, ಇತಿಹಾಸವೇ ಈ ವರ್ಷ ಮುಂದುವರಿಯುತ್ತೆ. ಕಪ್ ಗೆಲ್ಲುವ ಕನಸು ನನಸಾಗುತ್ತೆ ಎಂಬ ಆಶಾಭಾವನೆ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಇದಕ್ಕೆ ಕ್ವಾಲಿಫೈಯರ್ ಗೆಲುವೊಂದೇ ಅಲ್ಲ. ಸದ್ಯ ಆರ್​ಸಿಬಿ ತಂಡದ ಪ್ರದರ್ಶನವೂ ಆಗಿದೆ.
ಈವರೆಗೂ ಮೊದಲ ತಂಡವಾಗಿ ಫೈನಲ್ಸ್​ಗೆ ಎಂಟ್ರಿ ನೀಡಿದ ತಂಡವೇ, ಟ್ರೋಫಿ ಜಯಿಸಿದೆ. 2025ರಲ್ಲೂ ಅದೇ ಸಂಪ್ರದಾಯ ಮುಂದುವರೆದ್ರೆ, ಆರ್​ಸಿಬಿಯ ಟ್ರೋಫಿ ಗೆಲುವಿನ ಕನಸು ನನಸಾಗುವುದರಲ್ಲಿ ಅನುಮಾನವೇ ಇಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us