/newsfirstlive-kannada/media/post_attachments/wp-content/uploads/2025/06/RCB-35.jpg)
ಬರೋಬ್ಬರಿ 18 ವರ್ಷಗಳ ನಂತರ ಆರ್ಸಿಬಿ ಕಪ್ ಗೆದ್ದಿದೆ. ಆದರೆ ಈ ಸಂಭ್ರಮ ಹೆಚ್ಚುಗಂಟೆ ಉಳಿಯಲ್ಲಿಲ್ಲ. ಅದಕ್ಕೆ ಕಾರಣ ಚಿನ್ನಸ್ವಾಮಿ ಮೈದಾನದ ಬಳಿ ಸಂಭವಿಸಿದ ಘೋರ ಕಾಲ್ತುಳಿತ. ಲೇಟೆಸ್ಟ್ ವಿಚಾರ ಏನೆಂದರೆ ಸದ್ಯದಲ್ಲಿ ಆರ್ಸಿಬಿ ಮಾಲೀಕತ್ವ ಬದಲಾಗಲಿದೆಯಂತೆ!
ಪ್ರಸ್ತುತ ಆರ್ಸಿಬಿ ಡಿಯಾಜಿಯೊ ಅಂಗ ಸಂಸ್ಥೆಯಾದ ಯುನೈಟೆಡ್ ಸ್ಪಿರಿಟ್ ಲಿಮಿಟೆಡ್ನ (USL) ಮಾಲೀಕತ್ವದಲ್ಲಿದೆ. ಕೆಲವು ವರದಿಗಳ ಪ್ರಕಾರ, ಮಾಲೀಕರು ಆರ್ಸಿಬಿಯನ್ನು ಮಾರಾಟ ಮಾಡಲು ಎದುರು ನೋಡುತ್ತಿದ್ದಾರೆ ಎನ್ನಲಾಗಿದೆ. ಬರೋಬ್ಬರಿ 18 ವರ್ಷಗಳ ನಂತರ ಕಪ್ ಗೆದ್ದ ಬೆನ್ನಲ್ಲೇ ಆರ್ಸಿಬಿ ಮಾಲೀಕರು ಇಂಥ ನಿರ್ಧಾರಕ್ಕೆ ಬಂದಿದ್ದಾರೆ.
ಇದನ್ನೂ ಓದಿ: ಐಪಿಎಲ್ ಸೆನ್ಸೇಷನಲ್.. ಈ ಸ್ಟಾರ್ ಮೇಲೆ ಕ್ಯಾಪ್ಟನ್, ಕೋಚ್ ಕೃಪೆ ಬೇಕೇಬೇಕು..
ಕೆಲವು ಇನ್ವೆಸ್ಟರ್ ಜೊತೆ ಆರ್ಸಿಬಿ ಮಾಲೀಕರು ಮಾತುಕತೆ ನಡೆಸಿದ್ದಾರೆ. ಫ್ರಾಂಚೈಸಿಯ ಮೌಲ್ಯಮಾಪನದ ಬಗ್ಗೆ ಯಾವುದೇ ಅನಧಿಕೃತ ಮಾಹಿತಿಯಿಲ್ಲ. ಒಂದು ಅಂದಾಜಿನ ಪ್ರಕಾರ ಮಾಲೀಕರು ತನ್ನ ಫ್ರಾಂಚೈಸಿಯನ್ನು ಸಂಪೂರ್ಣ ಮಾರಲು ಬರೋಬ್ಬರಿ 2 ಬಿಲಿಯನ್ ಅಮೆರಿಕನ್ ಡಾಲರ್ (16,834 ಕೋಟಿ ರೂಪಾಯಿ)ಗೆ ಡಿಮ್ಯಾಂಡ್ ಇಡಬಹುದು ಅಂತಾ ಬ್ಲೂಮ್ಬರ್ಗ್ (Bloomberg) ಅಂದಾಜಿಸಿದೆ.
ಐಪಿಎಲ್ನ ಒಂದು ಫ್ರಾಂಚೈಸಿ ಆಗಿರುವ ಆರ್ಸಿಬಿ ಕರ್ನಾಟಕವನ್ನು ಪ್ರತಿನಿಧಿಸುತ್ತದೆ. 2008ರಲ್ಲಿ ಸ್ಥಾಪನೆಯಾದ ಈ ಫ್ರಾಂಚೈಸಿಯು ಐಪಿಎಲ್ ಉದ್ಘಾಟನಾ ವರ್ಷದಿಂದಲೇ ಇದೆ. ಕಿಂಗ್ ಫಿಶರ್ ಏರ್ಲೈನ್ಸ್ ಆಗಿನ ಅಧ್ಯಕ್ಷರಾಗಿದ್ದ ವಿಜಯ್ ಮಲ್ಯ ಅವರು 111.6 ಮಿಲಿಯನ್ ಡಾಲರ್ಗೆ ಆರ್ಸಿಬಿಯನ್ನು ಖರೀದಿ ಮಾಡಿದ್ದರು. ನಂತರದ ದಿನಗಳಲ್ಲಿ ಮಲ್ಯ ಸಾಲದ ಸುಳಿಗೆ ಸಿಲುಕುತ್ತಿದ್ದಂತೆಯೇ, ಅವಕಾಶ ಬಳಸಿಕೊಂಡು ಯುಎಸ್ಎಲ್ ಆರ್ಸಿಬಿಯನ್ನು ಖರೀದಿಸಿತು.
ಇದನ್ನೂ ಓದಿ: ಪೂರನ್ ಅಚ್ಚರಿಯ ನಿರ್ಧಾರ.. ಅಂತಾರಾಷ್ಟ್ರೀಯ ಕ್ರಿಕೆಟ್ಗೆ ದಿಢೀರ್ ನಿವೃತ್ತಿ..!
🚨 NEW RCB OWNERS EXPECTED. 🚨
- Current RCB owner Diageo Plc exploring possibilities for a potential sale of RCB, valued at up to $2 billion. (Bloomberg). pic.twitter.com/auOSki08UV— Mufaddal Vohra (@mufaddal_vohra) June 10, 2025
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ