/newsfirstlive-kannada/media/post_attachments/wp-content/uploads/2025/05/YASH_DAYAL-1.jpg)
18 ವರ್ಷಗಳಿಂದ ಐಪಿಎಲ್ ಟ್ರೋಫಿ ಗೆಲ್ಲಬೇಕು ಎನ್ನವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಹತ್ವಾಕಾಂಕ್ಷೆ ಆಗಿದೆ. ಈ ಮೊದಲಿನ ಸೀಸನ್ಗಳಲ್ಲಿ ಫೈನಲ್ವರೆಗೆ ಪ್ರವೇಶ ಪಡೆದಿದ್ದರೂ ಕಪ್ ಮಾತ್ರ ಕೈಜಾರಿ ಹೋಗಿತ್ತು. ಆದರೆ ಈ ಬಾರಿ ಆರ್ಸಿಬಿ ಟ್ರೋಫಿ ಗೆಲ್ಲುವ ಟೀಮ್ಗಳಲ್ಲಿ ಪ್ರಮುಖ ತಂಡವಾಗಿ ಕಾಣುತ್ತಿದೆ. ಇದರ ಬೆನ್ನಲ್ಲೇ ಆರ್ಸಿಬಿಯ ಡೆತ್ ಓವರ್ ಸ್ಪೆಷಲಿಸ್ಟ್, ಹನುಮಾನ್ನ ಆಶೀರ್ವಾದ ಪಡೆದುಕೊಂಡಿದ್ದಾರೆ.
ಇತ್ತೀಚೆಗಷ್ಟೇ ಆರ್ಸಿಬಿ ನಾಯಕ ರಜತ್ ಪಾಟಿದಾರ್, ವಿಕೆಟ್ ಕೀಪರ್ ಜಿತೇಶ್ ಶರ್ಮಾ ಹಾಗೂ ಮಹಿಳಾ ತಂಡದ ಆಟಗಾರ್ತಿ ಶ್ರೇಯಾಂಕ ಪಾಟೀಲ್ ಅವರು ತಿರುಪತಿಯ ತಿಮ್ಮಪ್ಪನ ದರ್ಶನ ಪಡೆದಿದ್ದರು. ಇದರ ಬೆನ್ನಲ್ಲೇ ಆರ್ಸಿಬಿ ತಂಡದ ಡೆತ್ ಓವರ್ ಸ್ಪೆಷಲಿಸ್ಟ್ ಯಶ್ ದಯಾಳ್ ಅವರು ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿರುವ ಶ್ರೀ ಬಡೆ ಹನುಮಾನ್ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.
ಯಶ್ ದಯಾಳ್ ಅವರು ಪ್ರಯಾಗ್ರಾಜ್ನ ಬಡೆ ಹನುಮಾನ್ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡಿದ್ದಾರೆ. ಆರ್ಸಿಬಿ ಆಟಗಾರ ದೇವಾಲಯಕ್ಕೆ ಬಂದ ಹಿನ್ನೆಲೆಯಲ್ಲಿ ಅಲ್ಲಿನ ಸ್ವಾಮೀಜಿ, ಯಶ್ ಹಣೆಗೆ ಕುಂಕುಮವಿಟ್ಟು, ಹೂವಿನ ಹಾರ ಹಾಕಿ ಶುಭವಾಗಲಿ ಎಂದು ಹಾರೈಸಿದ್ದಾರೆ. ಇನ್ನು ಚೆನ್ನೈ ವಿರುದ್ಧದ ಪಂದ್ಯದಲ್ಲಿ ಕೊನೆಯ ಓವರ್ ಬೌಲಿಂಗ್ ಮಾಡಿ, ಆರ್ಸಿಬಿ ಗೆಲುವಿಗೆ ಯಶ್ ದಯಾಳ್ ಪ್ರಮುಖ ಪಾತ್ರ ವಹಿಸಿದ್ದರು.
ಇದನ್ನೂ ಓದಿ:RCBಗೆ ಗುಡ್ನ್ಯೂಸ್.. ರಜತ್ ತಂಡಕ್ಕೆ ಬಂತು ಆನೆಬಲ; ಎದುರಾಳಿ ಟೀಮ್ಗೆ ನಡುಕ ಶುರು!
ಇನ್ನು ಬಡೆ ಹನುಮಾನ್ ದೇವಾಲಯ ಅತ್ಯಂತ ಪ್ರಖ್ಯಾತಿ ಪಡೆದಂತ ಗುಡಿ ಆಗಿದ್ದು ಪ್ರಯಾಗ್ರಾಜ್ನ ತ್ರಿವೇಣಿ ಸಂಗಮದಲ್ಲಿದೆ. ಈ ದೇವಾಲಯ ಮಳೆಗಾಲದಲ್ಲಿ ನೀರಿನಿಂದ ಮುಳುಗಿ ಹೋಗುತ್ತದೆ. ಆದರೆ ಉಳಿದ ದಿನಗಳಲ್ಲಿ ಭಕ್ತರಿಗೆ ತೆರೆದಿರುತ್ತದೆ. ಹೀಗಾಗಿ ಹೆಚ್ಚು ಹೆಚ್ಚು ಜನರು ಈ ದೇವಸ್ಥಾನಕ್ಕೆ ಭೇಟಿ ಕೊಡುತ್ತಿರುತ್ತಾರೆ. ಸದ್ಯ ಇದೀಗ ಆರ್ಸಿಬಿ ಸ್ಟಾರ್ ಬೌಲರ್ ಆಗಿರುವ ಯಶ್ ದಯಾಳ್ ಅವರು ಭೇಟಿ ನೀಡಿ ದರ್ಶನ ಪಡೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ