Advertisment

ತುಂಬಾ ವರ್ಷಗಳ ನಂತರ.. ಮತ್ತೆ ತಂಡ ಕೂಡಿಕೊಳ್ಳಲಿದ್ದಾರೆ RCB ಮೂವರು ಹಳೇ ಆಟಗಾರರು..!

author-image
Ganesh
Updated On
ಐಪಿಎಲ್​​ ಆಕ್ಷನ್​​ಗೆ ಮುನ್ನವೇ ಬಿಗ್​ ಟ್ರೇಡ್​​.. ಆರ್​​ಸಿಬಿಗೆ ಸ್ಟಾರ್​​ ಪ್ಲೇಯರ್​ ರೀ ಎಂಟ್ರಿ!
Advertisment
  • ತನ್ನ ಹಳೇ ಆಟಗಾರರ ಮೇಲೆ ಕಣ್ಣಿಟ್ಟ ಆರ್​ಸಿಬಿ ಫ್ರಾಂಚೈಸಿ
  • ಡಿಸೆಂಬರ್​ನಲ್ಲಿ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ
  • ಆರ್​ಸಿಬಿ ಪ್ಲಾನ್ ಮಾಡಿರುವ ಮೂವರು ಆಟಗಾರರು ಯಾರು?

ಐಪಿಎಲ್ 2025ರ ಬಗ್ಗೆ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಹೆಚ್ಚಾಗುತ್ತಿದೆ. ಮೆಗಾ ಹರಾಜು ಬಳಿಕ ಯಾರೆಲ್ಲ ಯಾವ ತಂಡ ಸೇರ್ತಾರೆ? ಅದಕ್ಕೂ ಮೊದಲು ಫ್ರಾಂಚೈಸಿ ಯಾವೆಲ್ಲ ಆಟಗಾರರನ್ನು ಕೈಬಿಡುತ್ತೆ? ಯಾರನ್ನೆಲ್ಲ ಉಳಿಸಿಕೊಳ್ಳುತ್ತೆ ಅನ್ನೋದ್ರ ಕುರಿತ ಚರ್ಚೆ ಜೋರಾಗಿದೆ. ಈ ಎಲ್ಲಾ ಲೆಕ್ಕಾಚಾರಗಳ ಜೊತೆ ಆರ್​ಸಿಬಿ ತನ್ನ ಮೂವರು ಹಳೆಯ ಆಟಗಾರರಿಗೆ ಮತ್ತೆ ಮಣೆ ಹಾಕಬಹುದು ಎಂಬ ಚರ್ಚೆ ಇದೆ.

Advertisment

ಕೆಎಲ್ ರಾಹುಲ್
ಕೆಎಲ್ ರಾಹುಲ್, ಆರ್​ಸಿಬಿ ಸೇರುತ್ತಾರೆ ಅನ್ನೋದ್ರ ಬಗ್ಗೆ ತುಂಬಾ ದಿನಗಳಿಂದ ಚರ್ಚೆಯಲ್ಲಿದೆ. ಸದ್ಯ ಎಲ್​ಎಸ್​​ಜಿ ತಂಡದ ಕ್ಯಾಪ್ಟನ್ ಆಗಿರುವ ರಾಹುಲ್, 2013ರಲ್ಲಿ ಆರ್​​ಸಿಬಿ ತಂಡ ಸೇರಿಕೊಂಡರು. ನಂತರ ಅವರು ಸನ್ ರೈಸರ್ಸ್​ ಹೈದರಾಬಾದ್ ಹಾಗೂ ಪಂಜಾಬ್ ಕಿಂಗ್ಸ್ ತಂಡದ ಭಾಗವಾಗಿದ್ದರು. ಕಳೆದ ಮೂರು ಸೀಸನ್​ಗಳಲ್ಲಿ ಎಲ್​​ಎಸ್​ಜಿ ತಂಡದ ನಾಯಕರಾಗಿ ತಂಡವನ್ನು ಮುನ್ನಡೆಸಿದ್ದಾರೆ. ದಿನೇಶ್ ಕಾರ್ತಿಕ್​ಗೆ ನಿವೃತ್ತಿ ಹಿನ್ನೆಲೆಯಲ್ಲಿ ಆರ್​ಸಿಬಿಗೆ ಸಮರ್ಥ ವಿಕೆಟ್ ಕೀಪರ್​ನ ಅನಿವಾರ್ಯತೆ ಇದೆ. ಒಂದು ವೇಳೆ ಆರ್​ಸಿಬಿಗೆ ಬಂದರೆ ನಾಯಕತ್ವ ಕೂಡ ರಾಹುಲ್​ಗೆ ಒಲಿಯುವ ಸಾಧ್ಯತೆ ಇದೆ. 132 ಐಪಿಎಲ್ ಪಂದ್ಯಗಳನ್ನು ಆಡಿರುವ ರಾಹುಲ್, 134.61 ಸ್ಟ್ರೈಕ್​​ ರೇಟ್​ನಲ್ಲಿ 45.47 ಸರಾಸರಿ ರನ್​ ಹೊಂದಿ ಒಟ್ಟು 4683 ರನ್​ಗಳಿಸಿದ್ದಾರೆ.

ಇದನ್ನೂ ಓದಿ:ಶ್ರೇಯಾಂಕ ಪಾಟೀಲ್​ಗೆ ಸ್ಮೃತಿ ಮಂದಾನ ಹಿಗ್ಗಾಮುಗ್ಗಾ ಕ್ಲಾಸ್; ಆರ್​ಸಿಬಿಯಲ್ಲಿ ಅಂದು ಆಗಿದ್ದೇನು..?

ಭುವನೇಶ್ವರ್​ ಕುಮಾರ್
ಸನ್​ ರೈಸರ್ಸ್​ ಹೈದರಾಬಾದ್ ತಂಡದ ಯಶಸ್ವಿ ಬೌಲರ್ ಆಗಿರುವ ಭುವಿ, ಐಪಿಎಲ್ ಜರ್ನಿ ಆರಂಭಿಸಿದ್ದು ಆರ್​ಸಿಬಿ ಮೂಲಕವೇ. ಆರಂಭದಲ್ಲಿ ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ಮೆಗಾ ಹರಾಜಿಗೂ ಮೊದಲು ಎಸ್​ಆರ್​ಹೆಚ್​ ಬಿಡುಗಡೆ ಮಾಡಿದರೆ ಆರ್​​ಸಿಬಿ ಭುವಿ ಮೇಲೆ ಬಿಡ್ ಮಾಡುವ ಸಾಧ್ಯತೆ ಇದೆ. 176 ಪಂದ್ಯಗಳನ್ನು ಆಡಿರುವ ಭುವಿ 181 ರನ್​ಗಳಿಸಿದ್ದಾರೆ.

Advertisment

ಸರ್ಫರಾಜ್ ಖಾನ್
ಇವರನ್ನು ಆರ್​ಸಿಬಿ 2015ರಲ್ಲಿ ಖರೀದಿಸಿತ್ತು. ಈ ಮೂಲಕ ಐಪಿಎಲ್​ನಲ್ಲಿ ಹರಾಜಾದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಗೆ ಸರ್ಫರಾಜ್ ಖಾನ್ ಸಾಕ್ಷಿಯಾಗಿದ್ದರು. ಆರ್​ಸಿಬಿಯಲ್ಲಿ 4 ಋತುಗಳನ್ನು ಆಡಿದ್ದ ಸರ್ಫರಾಜ್, 2019ರಲ್ಲಿ ಪಂಜಾಬ್ ತಂಡವನ್ನು ಸೇರಿಕೊಂಡರು. 2022-2023ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ನ ಭಾಗವಾಗಿದ್ದರು. 50 ಐಪಿಎ್ ಪಂದ್ಯಗಳಲ್ಲಿ 585 ರನ್​ಗಳಿಸಿದ್ದಾರೆ. ಬ್ಯಾಟಿಂಗ್​ನಲ್ಲಿ ಸರ್ಫರಾಜ್ ಮತ್ತಷ್ಟು ಫಳಗಿದ್ದು, ಆರ್​​ಸಿಬಿಗೆ ಬಂದರೆ, ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಬಲ ನೀಡೋದ್ರಲ್ಲಿ ಅಚ್ಚರಿ ಇಲ್ಲ.

ಇದನ್ನೂ ಓದಿ:ಕ್ರಿಕೆಟ್ ಜಗತ್ತಿಗೆ ಜಯ್ ಶಾ ಬಾಸ್.. ತೆರವಾದ BCCI ಕಾರ್ಯಾಧ್ಯಕ್ಷ ಸ್ಥಾನದ ರೇಸ್​​ನಲ್ಲಿ ಮೂವರು..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment