ತನ್ನ ಹಳೇ ಆಟಗಾರರ ಮೇಲೆ ಕಣ್ಣಿಟ್ಟ ಆರ್ಸಿಬಿ ಫ್ರಾಂಚೈಸಿ
ಡಿಸೆಂಬರ್ನಲ್ಲಿ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ
ಆರ್ಸಿಬಿ ಪ್ಲಾನ್ ಮಾಡಿರುವ ಮೂವರು ಆಟಗಾರರು ಯಾರು?
ಐಪಿಎಲ್ 2025ರ ಬಗ್ಗೆ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಹೆಚ್ಚಾಗುತ್ತಿದೆ. ಮೆಗಾ ಹರಾಜು ಬಳಿಕ ಯಾರೆಲ್ಲ ಯಾವ ತಂಡ ಸೇರ್ತಾರೆ? ಅದಕ್ಕೂ ಮೊದಲು ಫ್ರಾಂಚೈಸಿ ಯಾವೆಲ್ಲ ಆಟಗಾರರನ್ನು ಕೈಬಿಡುತ್ತೆ? ಯಾರನ್ನೆಲ್ಲ ಉಳಿಸಿಕೊಳ್ಳುತ್ತೆ ಅನ್ನೋದ್ರ ಕುರಿತ ಚರ್ಚೆ ಜೋರಾಗಿದೆ. ಈ ಎಲ್ಲಾ ಲೆಕ್ಕಾಚಾರಗಳ ಜೊತೆ ಆರ್ಸಿಬಿ ತನ್ನ ಮೂವರು ಹಳೆಯ ಆಟಗಾರರಿಗೆ ಮತ್ತೆ ಮಣೆ ಹಾಕಬಹುದು ಎಂಬ ಚರ್ಚೆ ಇದೆ.
ಕೆಎಲ್ ರಾಹುಲ್
ಕೆಎಲ್ ರಾಹುಲ್, ಆರ್ಸಿಬಿ ಸೇರುತ್ತಾರೆ ಅನ್ನೋದ್ರ ಬಗ್ಗೆ ತುಂಬಾ ದಿನಗಳಿಂದ ಚರ್ಚೆಯಲ್ಲಿದೆ. ಸದ್ಯ ಎಲ್ಎಸ್ಜಿ ತಂಡದ ಕ್ಯಾಪ್ಟನ್ ಆಗಿರುವ ರಾಹುಲ್, 2013ರಲ್ಲಿ ಆರ್ಸಿಬಿ ತಂಡ ಸೇರಿಕೊಂಡರು. ನಂತರ ಅವರು ಸನ್ ರೈಸರ್ಸ್ ಹೈದರಾಬಾದ್ ಹಾಗೂ ಪಂಜಾಬ್ ಕಿಂಗ್ಸ್ ತಂಡದ ಭಾಗವಾಗಿದ್ದರು. ಕಳೆದ ಮೂರು ಸೀಸನ್ಗಳಲ್ಲಿ ಎಲ್ಎಸ್ಜಿ ತಂಡದ ನಾಯಕರಾಗಿ ತಂಡವನ್ನು ಮುನ್ನಡೆಸಿದ್ದಾರೆ. ದಿನೇಶ್ ಕಾರ್ತಿಕ್ಗೆ ನಿವೃತ್ತಿ ಹಿನ್ನೆಲೆಯಲ್ಲಿ ಆರ್ಸಿಬಿಗೆ ಸಮರ್ಥ ವಿಕೆಟ್ ಕೀಪರ್ನ ಅನಿವಾರ್ಯತೆ ಇದೆ. ಒಂದು ವೇಳೆ ಆರ್ಸಿಬಿಗೆ ಬಂದರೆ ನಾಯಕತ್ವ ಕೂಡ ರಾಹುಲ್ಗೆ ಒಲಿಯುವ ಸಾಧ್ಯತೆ ಇದೆ. 132 ಐಪಿಎಲ್ ಪಂದ್ಯಗಳನ್ನು ಆಡಿರುವ ರಾಹುಲ್, 134.61 ಸ್ಟ್ರೈಕ್ ರೇಟ್ನಲ್ಲಿ 45.47 ಸರಾಸರಿ ರನ್ ಹೊಂದಿ ಒಟ್ಟು 4683 ರನ್ಗಳಿಸಿದ್ದಾರೆ.
ಇದನ್ನೂ ಓದಿ:ಶ್ರೇಯಾಂಕ ಪಾಟೀಲ್ಗೆ ಸ್ಮೃತಿ ಮಂದಾನ ಹಿಗ್ಗಾಮುಗ್ಗಾ ಕ್ಲಾಸ್; ಆರ್ಸಿಬಿಯಲ್ಲಿ ಅಂದು ಆಗಿದ್ದೇನು..?
ಭುವನೇಶ್ವರ್ ಕುಮಾರ್
ಸನ್ ರೈಸರ್ಸ್ ಹೈದರಾಬಾದ್ ತಂಡದ ಯಶಸ್ವಿ ಬೌಲರ್ ಆಗಿರುವ ಭುವಿ, ಐಪಿಎಲ್ ಜರ್ನಿ ಆರಂಭಿಸಿದ್ದು ಆರ್ಸಿಬಿ ಮೂಲಕವೇ. ಆರಂಭದಲ್ಲಿ ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ಮೆಗಾ ಹರಾಜಿಗೂ ಮೊದಲು ಎಸ್ಆರ್ಹೆಚ್ ಬಿಡುಗಡೆ ಮಾಡಿದರೆ ಆರ್ಸಿಬಿ ಭುವಿ ಮೇಲೆ ಬಿಡ್ ಮಾಡುವ ಸಾಧ್ಯತೆ ಇದೆ. 176 ಪಂದ್ಯಗಳನ್ನು ಆಡಿರುವ ಭುವಿ 181 ರನ್ಗಳಿಸಿದ್ದಾರೆ.
ಸರ್ಫರಾಜ್ ಖಾನ್
ಇವರನ್ನು ಆರ್ಸಿಬಿ 2015ರಲ್ಲಿ ಖರೀದಿಸಿತ್ತು. ಈ ಮೂಲಕ ಐಪಿಎಲ್ನಲ್ಲಿ ಹರಾಜಾದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಗೆ ಸರ್ಫರಾಜ್ ಖಾನ್ ಸಾಕ್ಷಿಯಾಗಿದ್ದರು. ಆರ್ಸಿಬಿಯಲ್ಲಿ 4 ಋತುಗಳನ್ನು ಆಡಿದ್ದ ಸರ್ಫರಾಜ್, 2019ರಲ್ಲಿ ಪಂಜಾಬ್ ತಂಡವನ್ನು ಸೇರಿಕೊಂಡರು. 2022-2023ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ನ ಭಾಗವಾಗಿದ್ದರು. 50 ಐಪಿಎ್ ಪಂದ್ಯಗಳಲ್ಲಿ 585 ರನ್ಗಳಿಸಿದ್ದಾರೆ. ಬ್ಯಾಟಿಂಗ್ನಲ್ಲಿ ಸರ್ಫರಾಜ್ ಮತ್ತಷ್ಟು ಫಳಗಿದ್ದು, ಆರ್ಸಿಬಿಗೆ ಬಂದರೆ, ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಬಲ ನೀಡೋದ್ರಲ್ಲಿ ಅಚ್ಚರಿ ಇಲ್ಲ.
ಇದನ್ನೂ ಓದಿ:ಕ್ರಿಕೆಟ್ ಜಗತ್ತಿಗೆ ಜಯ್ ಶಾ ಬಾಸ್.. ತೆರವಾದ BCCI ಕಾರ್ಯಾಧ್ಯಕ್ಷ ಸ್ಥಾನದ ರೇಸ್ನಲ್ಲಿ ಮೂವರು..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ