/newsfirstlive-kannada/media/post_attachments/wp-content/uploads/2025/04/RCB_SALT.jpg)
ತವರಿನಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭಾರೀ ಅವಮಾನಕ್ಕೆ ಒಳಗಾಗಿದೆ. ವಿರಾಟ್ ಕೊಹ್ಲಿ, ಪಡಿಕ್ಕಲ್ ಅಂತಹ ವಿಕೆಟ್ ಕಳೆದುಕೊಂಡ ಬೆನ್ನಲ್ಲೇ ಆರ್ಸಿಬಿ ಸ್ಫೋಟಕ ಬ್ಯಾಟ್ಸ್ಮನ್ ಫಿಲ್ ಸಾಲ್ಟ್ ಕೂಡ ಕ್ಲೀನ್ ಬೋಲ್ಡ್ ಆಗಿದ್ದಾರೆ.
ಗುಜರಾತ್ ಟೈಟನ್ಸ್ ವಿರುದ್ಧ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೇವಲ 7 ರನ್ಗೆ ಔಟ್ ಆಗಿ ಆರ್ಸಿಬಿಗೆ ಭಾರೀ ನಿರಾಸೆ ಮೂಡಿಸಿದ್ದಾರೆ. ಇವರ ಬೆನ್ನಲ್ಲೆ ದೇವದತ್ ಪಡಿಕ್ಕಲ್ ಕೂಡ ಕ್ಲೀನ್ ಬೋಲ್ಡ್ ಆಗಿ ಪೆವಿಲಿಯನ್ ಕಡೆ ನಡೆದರು. ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡದ ಕ್ಯಾಪ್ಟನ್ ಶುಭ್ಮನ್ ಗಿಲ್ ಟಾಸ್ ಗೆದ್ದು ಆರ್ಸಿಬಿಯನ್ನು ಬ್ಯಾಟಿಂಗ್ಗೆ ಆಹ್ವಾನ ಮಾಡಿದ್ದರು. ಆದರೆ ವಿಕೆಟ್ ಹಿಂದೆ ವಿಕೆಟ್ ಬಿದ್ದು ತವರಲ್ಲಿ ಆರ್ಸಿಬಿಗೆ ಸಂಕಷ್ಟ ಎದುರಾಗಿದೆ.
ಇದನ್ನೂ ಓದಿ: RCBಗೆ ಕೈಕೊಟ್ಟ ವಿರಾಟ್ ಕೊಹ್ಲಿ.. ಸ್ಟಾರ್ ಬ್ಯಾಟರ್ನಿಂದ ಅಭಿಮಾನಿಗಳಿಗೆ ಬಿಗ್ ಶಾಕ್
ಓಪನರ್ ಆಗಿ ಕ್ರೀಸ್ಗೆ ಆಗಮಿಸಿದ ಫಿಲ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಉತ್ತಮ ಆರಂಭ ಏನೂ ಪಡೆಯಲಿಲ್ಲ. ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್ ಔಟ್ ಆದರೂ ಕ್ರೀಸ್ನಲ್ಲಿ ಸಾಲ್ಟ್ ಅಬ್ಬರ ಮುಂದುವರೆದಿತ್ತು. ಆದರೆ 14 ರನ್ ಗಳಿಸಿ ಫಿಲ್ ಸಾಲ್ಟ್ ಆಡುವಾಗ ಮೊಹಮ್ಮದ್ ಸಿರಾಜ್ ಬೌಲಿಂಗ್ನಲ್ಲಿ ಕ್ಲೀನ್ ಬೋಲ್ಡ್ ಆಗಿ ಬೇಸರ ವ್ಯಕ್ತಪಡಿಸಿದರು. ಭರವಸೆ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದ ಸಾಲ್ಟ್ ಆರ್ಸಿಬಿಗೆ ಕೈಕೊಟ್ಟಿದ್ದಾರೆ.
ಈ ಟೂರ್ನಿಯಲ್ಲಿ ಈಗಾಗಲೇ 2 ಪಂದ್ಯಗಳನ್ನು ಗೆದ್ದಿರುವ ಆರ್ಸಿಬಿ ತಂಡ ಹ್ಯಾಟ್ರಿಕ್ ಗೆಲುವಿನ ಕನಸು ಕಾಣುತ್ತಿತ್ತು. ಆದರೆ ಈ ವಿಕೆಟ್ಗಳು ಹೋಗಿದ್ರಿಂದ ಆರ್ಸಿಬಿಯ ಫಲಿತಾಂಶ ಏನಾಗುತ್ತದೆ ಎಂದು ತಿಳಿದಿಲ್ಲ. ಗುಜರಾತ್ ಪರ ಮೊಹಮ್ಮದ್ ಸಿರಾಜ್ ಮುಖ್ಯವಾದ ವಿಕೆಟ್ ಪಡೆದು ಕುಣಿದು ಕುಪ್ಪಳಿಸಿದರು. ಸಾಲ್ಟ್ ಔಟ್ ಆಗಿದ್ದಾಗ ಆರ್ಸಿಬಿ 35 ರನ್ಗೆ 3 ವಿಕೆಟ್ ಕಳೆದುಕೊಂಡಿತ್ತು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ