/newsfirstlive-kannada/media/post_attachments/wp-content/uploads/2025/06/RCB-vs-PBKS.jpg)
ಕೊನೆಗೂ ಆರ್ಸಿಬಿ ಹಾಗೂ ಅಭಿಮಾನಿಗಳಿಗೆ ಗುಡ್ನ್ಯೂಸ್ ಸಿಕ್ಕಿದೆ. ದಿಢೀರ್ ಅಂತಾ ತವರಿಗೆ ಹೋಗಿದ್ದ ಇಂಗ್ಲೆಂಡ್ ಕ್ರಿಕೆಟರ್ ಫಿಲ್ ಸಾಲ್ಟ್ ಅಹ್ಮದಾಬಾದ್ಗೆ ವಾಪಸ್ ಆಗಿದ್ದಾರೆ. ವರದಿಗಳ ಪ್ರಕಾರ ಇಂದು ಬೆಳಗ್ಗೆ ಸಾಲ್ಟ್, ಗುಜರಾತ್ನ ಅಹ್ಮದಾಬಾದ್ಗೆ ಆಗಮಿಸಿದ್ದಾರೆ.
ಬೆನ್ನಲ್ಲೇ, ಆರ್ಸಿಬಿಗೆ ಆನೆಬಲ ಬಂದಿದ್ದು ಇಂದು ನಡೆಯಲಿರುವ ಐಪಿಎಲ್ ಫೈನಲ್ನಲ್ಲಿ ಆಡೋದು ಖಚಿತವಾಗಿದೆ. ಫಿಲ್ ಸಾಲ್ಟ್ ಗೆಳತಿ ಅಬಿ ಮೆಕ್ಲಾವೆನ್ ಅವರು ತುಂಬು ಗರ್ಭಿಣಿಯಾಗಿದ್ದು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದರು. ಅಂತೆಯೇ ಸಾಲ್ಟ್ ಗೆಳತಿ ಮಗುವಿಗೆ ಜನ್ಮ ನೀಡಿದ್ದು, ಅಪ್ಪನಾದ ಖುಷಿಯಲ್ಲಿ ಇಂಗ್ಲೆಂಡ್ನಿಂದ ಅಹ್ಮದಾಬಾದ್ಗೆ ವಾಪಸ್ ಆಗಿದ್ದಾರೆ.
ಇದನ್ನೂ ಓದಿ: RCB ಫೈನಲ್ನಲ್ಲಿ ಗೆದ್ದರೇ ಎಷ್ಟು ಕೋಟಿ ದುಡ್ಡು ಸಿಗುತ್ತೆ..? ರನ್ನರ್ ಅಪ್ಗೂ ಭಾರೀ ಹಣ!
ಫಿಲ್ ಸಾಲ್ಟ್ ಹಾಗೂ ಅಬಿ ಮೆಕ್ಲಾವೆನ್ ಅವರು 2020 ರಿಂದಲೂ ಕೂಡಿ ಬಾಳುತ್ತಿದ್ದಾರೆ. ಅಬಿ ಮೆಕ್ಲಾವೆನ್ ಅವರು ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್ನಲ್ಲಿ ಫ್ರಿಲ್ಯಾನ್ಸರ್ ಆಗಿ ಕೆಲಸ ಮಾಡುತ್ತಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದು ಪಂಜಾಬ್ ಕಿಂಗ್ಸ್ ವಿರುದ್ಧ ಫೈನಲ್ ಪಂದ್ಯಕ್ಕಾಗಿ ಅಖಾಡಕ್ಕೆ ಧುಮುಕುತ್ತಿದೆ. 9 ವರ್ಷಗಳ ಬಳಿಕ ಮತ್ತೆ ಫೈನಲ್ಗೆ ಬಂದಿರುವ ಆರ್ಸಿಬಿ ಟ್ರೋಫಿ ಗೆಲ್ಲುವ ನೆಚ್ಚಿನ ಟೀಮ್ ಎನಿಸಿದೆ.
ಇದನ್ನೂ ಓದಿ: ಈ ಸಲ ಆರ್ಸಿಬಿಯದ್ದೇ ಟ್ರೋಫಿ ಪಕ್ಕಾ.. ಆ ಮಹತ್ವವನ್ನ ಐಪಿಎಲ್ ಇತಿಹಾಸವೇ ಹೇಳುತ್ತೆ!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ