newsfirstkannada.com

Breaking News: ಬಿಗ್​​ ಶಾಕಿಂಗ್ ನ್ಯೂಸ್ ಕೊಟ್ಟ ದಿನೇಶ್ ಕಾರ್ತಿಕ್; ಆರ್​ಸಿಬಿ ಅಭಿಮಾನಿಗಳು ಭಾವುಕ

Share :

Published March 7, 2024 at 12:20pm

Update March 7, 2024 at 12:32pm

  240 IPL ಪಂದ್ಯಗಳಲ್ಲಿ 4516 ರನ್​ಗಳಿಸಿರುವ ಕಾರ್ತಿಕ್

  ಕಾರ್ತಿಕ್​ಗೆ ಭಾವುಕ ವಿದಾಯ ಹೇಳಲಿದೆ ನಮ್ಮ ಆರ್​ಸಿಬಿ

  2015 ಮತ್ತು 2022 ರಿಂದ RCB ಪರ ಆಡ್ತಿರುವ ದಿನೇಶ್​ ಕಾರ್ತಿಕ್

ಐಪಿಎಲ್​ ಆರಂಭಕ್ಕೆ ಕೇವಲ 15 ದಿನಗಳು ಬಾಕಿ ಇದೆ. ಹೀಗಿರುವಾಗ ಆರ್​ಸಿಬಿ ತಂಡದ ಆಟಗಾರನೊಬ್ಬನ ಕುರಿತಾದ ಅಚ್ಚರಿಯ ಸುದ್ದಿಯೊಂದು ಹೊರಬಿದ್ದಿದೆ. ಅದೇನೆಂದರೆ ವಿಕೇಟ್​ ಕೀಪರ್​ ಮತ್ತು ದಾಂಡಿಗ ದಿನೇಶ್​ ಕಾರ್ತಿಕ್​ಗೆ ಇದು ಕೊನೆಯ ಪಂದ್ಯವಾಗಲಿದೆಯಂತೆ. ಸದ್ಯ ಪಂದ್ಯಕ್ಕೂ ಮುನ್ನ ಹರಿದಾಡುತ್ತಿರುವ ಶಾಕಿಂಗ್​ ಸುದ್ದಿಯಿಂದ ಆರ್​ಸಿಬಿ ಅಭಿಮಾನಿಗಳು ಭಾವುಕರಾಗಿದ್ದಾರೆ.

ಮಾರ್ಚ್​ 22ಕ್ಕೆ ಐಪಿಎಲ್​ ಪಂದ್ಯ ಪ್ರಾರಂಭವಾಗಲಿದೆ. ಮೊದಲ ಪಂದ್ಯದ ಮೂಲಕ ಆರ್​ಸಿಬಿ ಈ ವರ್ಷದ ಐಪಿಎಲ್​ ಅನ್ನು ಉದ್ಘಾಟನೆ ಮಾಡಲಿದೆ. ಆದರೆ ಈ ವರ್ಷದ ಐಪಿಎಲ್​ ಪಂದ್ಯವೇ ಕೊನೆಯ ಪಂದ್ಯವೆಂದು ದಿನೇಶ್​ ಕಾರ್ತಿಕ್​ ನಿರ್ಧರಿಸಲು ಸಿದ್ಧರಾಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಟಿ20 ಲೀಗ್​ ಬಳಿಕ ಅಂತರಾಷ್ಟ್ರೀಯ ಪಂದ್ಯಕ್ಕೂ ನಿವೃತ್ತಿ ಘೋಷಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಅಂತರಾಷ್ಟ್ರೀಯ ನಿವೃತ್ತಿ

ಸದ್ಯ ರಾಯಲ್​ ಚಾಲೆಂಜರ್ಸ್​ ತಂಡದ ಜೊತೆಗೆ ಒಪ್ಪಂದ ಮಾಡಿಕೊಂಡಿರುವ 38 ವರ್ಷದ ದಿನೆಶ್​ ಕಾರ್ತಿಕ್​ 2008ರಿಂದ ಐಪಿಎಲ್​​ ಎದುರಿಸುತ್ತಾ ಬಂದಿದ್ದಾರೆ. ಅಂದಹಾಗೆಯೇ ಐಪಿಎಲ್​ನ 16 ಆವೃತ್ತಿಗಳನ್ನ ದಿನೇಶ್​ ಕಾರ್ತಿಕ್​ ಆಡುತ್ತಾ ಬಂದಿದ್ದಾರೆ. ಸದ್ಯ ದಿನೇರ್ಶ್ ಕಾರ್ತಿಕ್​ 2024ರ ಆವೃತ್ತಿಯು ಕೊನೆಯ ಐಪಿಎಲ್​ ಆಗಲಿದೆ ಬಳಿಕ ಅಂತರಾಷ್ಟ್ರೀಯ ನಿವೃತ್ತಿಯನ್ನು ಘೋಷಿಸಲಿದ್ದಾರೆ ಎಂಬ ಶಾಕ್​ ಮೇಲೆ ಶಾಕಿಂಗ್ ಸುದ್ದಿಗಳು ಹೊರಬಿದ್ದಿವೆ

ದಿನೇಶ್​ ಕಾರ್ತಿಕ್​ ಐಪಿಎಲ್​ ಜರ್ನಿ

ದಿನೇಶ್​ ಕಾರ್ತಿಕ್​ ಅತ್ಯಂತ ಅನುಭವಿ ಆಟಗಾರ ಮತ್ತು ವಿಕೇಟ್​ ಕೀಪರ್​ಗಳಲ್ಲಿ ಒಬ್ಬರು. 2008ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಸೇರುವ ಮೂಲಕ ಆಟ ಪ್ರಾರಂಭಿಸಿದರು. ಬಳಿಕ 2011ರಲ್ಲಿ ಪಂಜಾಬ್​ ತಂಡ ಸೇರಿದರು. ಬಳಿಕ ಮುಂಬೈ ಇಂಡಿಯನ್ಸ್​ ತಂಡದಲ್ಲೂ ಗುರುತಿಸಿಕೊಂಡು. 2014ರಲ್ಲಿ ದೆಹಲಿ ತಂಡಕ್ಕೆ ಹಿಂತಿರುಗಿದರು.

2015ರಲ್ಲಿ ಆರ್​ಸಿಬಿ ತಂಡ ಸೇರಿದ ದಿನೇಶ್​ ಕಾರ್ತಿಕ್​ 10.5 ಕೋಟಿ ಒಪ್ಪಂದ ಮಾಡಿಕೊಂಡರು. ಬಳಿಕ ಕೆಕೆಆರ್​​ ತಂಡದೊಂದಿಗೆ ನಾಲ್ಕು ವರ್ಷ ಆಡಿದರು. 2016 ಮತ್ತು 2017ರಲ್ಲಿ ಗುಜರಾತ್​ ತಂಡದ ಜೊತೆಯಾದರು.

2018ರ ಗುಜರಾತ್​ ತಂಡ ಸೇರಿದ ಬಳಿಕ ಉತ್ತಮ ಪ್ರದರ್ಶನ ತೋರಿಸಿದರು. ಅದರಂತೆ 2019ರಲ್ಲಿ ಆಟಗಾರರ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿ ಕಾಣಿಸಿಕೊಂಡರು.

2018ರ ಗುಜರಾತ್​ ತಂಡ ಸೇರದ ಬಳಿಕ ಉತ್ತಮ ಪ್ರದರ್ಶನ ತೋರಿಸಿದರು. ಅದರಂತೆ 2019ರಲ್ಲಿ ಆಟಗಾರರ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿ ಕಾಣಿಸಿಕೊಂಡರು.
ಬಳಿಕ ಕಾರ್ತಿಕ್​ ಕೆಕೆಆರ್​ನತ್ತ ಮುಖ ಮಾಡಿದ ದಿನೇಶ್​ ಕಾರ್ತಿಕ್​​ರನ್ನ 2022ರಲ್ಲಿ ಆರ್​ಸಿಬಿ 5.5ಗೆ ಖರೀದಿಸಿತು. ಫಿನೀಶರ್​ ಆಗಿ ರಾಯಲ್​ ಚಾಲೆಂಜರ್ಸ್​ ತಂಡ ಸೇರಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking News: ಬಿಗ್​​ ಶಾಕಿಂಗ್ ನ್ಯೂಸ್ ಕೊಟ್ಟ ದಿನೇಶ್ ಕಾರ್ತಿಕ್; ಆರ್​ಸಿಬಿ ಅಭಿಮಾನಿಗಳು ಭಾವುಕ

https://newsfirstlive.com/wp-content/uploads/2024/03/Dinesh-karthik.jpg

Load More