/newsfirstlive-kannada/media/post_attachments/wp-content/uploads/2025/04/Abhishek-Sharma-SRH.jpg)
ಸನ್‌ರೈಸರ್ಸ್ ಹೈದರಾಬಾದ್ ಯಂಗ್ ಬ್ಯಾಟರ್​ ಅಭಿಷೇಕ್​ ಶರ್ಮಾ ಮತ್ತೊಮ್ಮೆ ಘರ್ಜನೆ ಮಾಡಿದ್ದಾರೆ. ನಿನ್ನೆ ತವರಿನಲ್ಲಿ ಪಂಜಾಬ್​ ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ಅಮೋಘ ಸೆಂಚುರಿ ಸಿಡಿಸಿದ್ದಾರೆ.
ಹೈದ್ರಾಬಾದ್​ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಿನ್ನೆ ನಡೆದ ಪಂಜಾಬ್​ ಕಿಂಗ್ಸ್​ ತಂಡದ ವಿರುದ್ಧ ಅಭಿಷೇಕ್ ಶರ್ಮಾ ಸಿಡಿದು ನಿಂತರು. ಕೇವಲ 40 ಬಾಲ್​ಗಳನ್ನು ಎದುರಿಸಿದ ಅಭಿಷೇಕ್ ಶರ್ಮಾ, 11 ಬೌಂಡರಿ ಹಾಗೂ 6 ಬಿಗ್​ ಸಿಕ್ಸರ್​ಗಳಿಂದ ಶತಕ ಸಿಡಿಸಿದರು.
/newsfirstlive-kannada/media/post_attachments/wp-content/uploads/2025/04/Abhishek_Sharma_1.jpg)
ಈ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಒಟ್ಟು 55 ಎಸೆತಗಳನ್ನು ಎದುರಿಸಿದ್ದು 14 ಬೌಂಡರಿ ಹಾಗೂ 10 ಆಕಾಶದೆತ್ತರದ ಸಿಕ್ಸರ್​ಗಳಿಂದ 141 ರನ್​ಗಳಿಸಿ ಔಟ್​ ಆದರು. ಅಭಿಷೇಕ್ ಅಬ್ಬರದ ಜೊತೆಗೆ 246 ರನ್​ಗಳ ಬಿಗ್​ ಟಾರ್ಗೆಟ್ ಚೇಸ್​ ಮಾಡಿದ SRH ಐಪಿಎಲ್​ ಇತಿಹಾಸದಲ್ಲೇ 2ನೇ ಅತಿ ದೊಡ್ಡ ಗೆಲುವು ಸಾಧಿಸಿದೆ.
/newsfirstlive-kannada/media/post_attachments/wp-content/uploads/2025/04/Chris-gayle-175-not-out.jpg)
RCB ಹೆಸರಲ್ಲಿದೆ ಆ ರೆಕಾರ್ಡ್!
ಅಭಿಷೇಕ್ ಶರ್ಮಾ ಅಬ್ಬರದ ಈ ಬ್ಯಾಟಿಂಗ್ ಶೈಲಿ ಐಪಿಎಲ್ ಹಣಾಹಣಿಯಲ್ಲೇ ಹೊಸ ದಾಖಲೆ ಬರೆದಿದೆ. ಆದರೆ ವೈಯಕ್ತಿಕವಾಗಿ ಅತಿ ಹೆಚ್ಚು ರನ್ ಬಾರಿಸಿದ ಸಾರ್ವಕಾಲಿಕ ದಾಖಲೆ ಮಾತ್ರ ಆರ್‌ಸಿಬಿ ಆಟಗಾರನ ಹೆಸರಿನಲ್ಲೇ ಉಳಿದಿದೆ.
RCB ಮಾಜಿ ದೈತ್ಯ ಆಟಗಾರ ಕ್ರಿಸ್ ಗೇಲ್ ಅವರು 12 ವರ್ಷಗಳ ಹಿಂದೆಯೇ 66 ಬಾಲ್‌ಗಳಿಗೆ 175 ರನ್ ಸಿಡಿಸಿ ಅಜೇಯರಾಗಿ ಉಳಿದಿದ್ದರು. 66 ಬಾಲ್‌ಗಳಲ್ಲಿ 13 ಬೌಂಡರಿ, 17 ಸಿಕ್ಸರ್‌ಗಳನ್ನು ಗೇಲ್ ಬಾರಿಸಿದ್ದರು.
ಕ್ರಿಸ್ ಗೇಲ್ ಅವರ ಬಳಿಕ 2ನೇ ಅತಿ ಹೆಚ್ಚು ವೈಯಕ್ತಿಕ ರನ್ ಗಳಿಸಿದ ದಾಖಲೆ ಬ್ರೆಂಡನ್ ಮೆಕಲಮ್ ಅವರ ಹೆಸರಿನಲ್ಲಿದೆ. ಮೆಕಲಮ್ ಅವರು ಆರ್‌ಸಿಬಿ ವಿರುದ್ಧ 73 ಎಸೆತಗಳಲ್ಲಿ 158 ರನ್ ಸಿಡಿಸಿದ್ದಾರೆ. ಇನ್ನು ನಿನ್ನೆ ನಡೆದ ಪಂದ್ಯದಲ್ಲಿ 141 ರನ್ ಗಳಿಸಿದ ಅಭಿಷೇಕ್ ಶರ್ಮಾ ಅವರು ಐಪಿಎಲ್‌ನಲ್ಲಿ ವೈಯಕ್ತಿಕವಾಗಿ ಅತಿಹೆಚ್ಚು ರನ್ ಬಾರಿಸಿದ 3ನೇ ಆಟಗಾರ ಅನ್ನೋ ಕೀರ್ತಿಗೆ ಪಾತ್ರರಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us