/newsfirstlive-kannada/media/post_attachments/wp-content/uploads/2024/11/Jacob_Bethell.jpg)
2025ರ ಐಪಿಎಲ್ ಟೂರ್ನಿ​ ಇನ್ನೇನು ಕೆಲವೇ ತಿಂಗಳಲ್ಲಿ ಆರಂಭವಾಗಲಿದ್ದು 10 ಫ್ರಾಂಚೈಸಿಗಳು ಟ್ರೋಫಿ ಗೆಲ್ಲಲು ಬಲಿಷ್ಠ ತಂಡವನ್ನು ಕಟ್ಟಿಕೊಂಡಿವೆ. ಚೆನ್ನೈ, ಮುಂಬೈ ಸೇರಿದಂತೆ ಕೆಲ ತಂಡಗಳು ಟ್ರೋಫಿಯನ್ನು ಗೆದ್ದುಕೊಂಡಿವೆ. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಮ್, ಕಪ್​ ಗೆಲ್ಲಲು ಆಗದೇ ವರ್ಷ.. ವರ್ಷ ನಿರಾಸೆ ಅನುಭವಿಸುತ್ತಿದೆ. ಒಂದು ವೇಳೆ ಈ 18ರ ಸೀಸನ್​ನಲ್ಲಿ ಆರ್​ಸಿಬಿ ಫೈನಲ್​​ ಪ್ರವೇಶ ಮಾಡಿದರೆ ಈ ಯುವ ಆಟಗಾರ ಆಡಲ್ಲ ಎನ್ನಲಾಗುತ್ತಿದೆ.
ಮಾರ್ಚ್​ 2025ರಿಂದ ಐಪಿಎಲ್​ ಸೀಸನ್ 18 ಆರಂಭವಾಗುತ್ತದೆ. ಎಲ್ಲ ದೇಶಗಳ ಕ್ರಿಕೆಟರ್ಸ್​ ಇದರಲ್ಲಿ ಆಡಿ ತಮ್ಮ ಶಕ್ತಿ ಪ್ರದರ್ಶನ ತೋರಲಿದ್ದಾರೆ. ಸತತ ಎರಡು ತಿಂಗಳುಗಳ ಕಾಲ ನಡೆಯುವ ಈ ಕ್ರಿಕೆಟ್​ ಹಬ್ಬ ಅಭಿಮಾನಿಗಳ ಕುತೂಹಲ ದುಪ್ಪಟ್ಟು ಮಾಡುತ್ತದೆ. ಐಪಿಎಲ್​​ನ ಕೇಂದ್ರ ಬಿಂದುವಾಗುವ ಆರ್​ಸಿಬಿ ಟೀಮ್ ಪ್ರತಿ ವರ್ಷ ಒಂದಿಲ್ಲೊಂದು ಕಾರಣದಿಂದ ಹೆಚ್ಚು ಪ್ರಚಾರ ಪಡೆಯುತ್ತದೆ. ಕಪ್​ ಗೆಲ್ಲುವ ನಿರೀಕ್ಷೆಯಲ್ಲಿರುವ ಆರ್​ಸಿಬಿ ಒಂದು ವೇಳೇ ಫೈನಲ್​ಗೆ ಎಂಟ್ರಿ ಕೊಟ್ಟರೇ ಯುವ ಆಲ್​​ರೌಂಡರ್ ಜೇಕಬ್ ಬೆಥೆಲ್ ಆಡುವುದು ಡೌಟ್ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಭಾರತ- ಆಸ್ಟ್ರೇಲಿಯಾ ಟೆಸ್ಟ್​ ಪಂದ್ಯ ದಾಖಲೆ ಮಟ್ಟದಲ್ಲಿ ವೀಕ್ಷಣೆ.. ಸ್ಟೇಡಿಯಂಗೆ ಬಂದ ಜನಸಂಖ್ಯೆ ಎಷ್ಟು?
ಮಾರ್ಚ್ 14 ರಿಂದ ಆರಂಭವಾಗಲಿರುವ ಈ ಟೂರ್ನಿಯ ಫೈನಲ್​ ಪಂದ್ಯ ಮೇ 25ರಂದು ನಡೆಯಲಿದೆ ಎಂದು ಅಂದಾಜಿಸಲಾಗಿದೆ. ಆದರೆ ಇದೇ ಸಮಯಕ್ಕೆ ಅಂದರೆ ಮೇ 22 ರಿಂದ ಇಂಗ್ಲೆಂಡ್ ಮತ್ತು ಜಿಂಬಾಬ್ವೆ ನಡುವೆ ಟೆಸ್ಟ್ ಸರಣಿ ನಡೆಯಲಿದೆ. ಹೀಗಾಗಿ ಐಪಿಎಲ್ ಆಡುವ ಈ ಎರಡು ದೇಶದ ಪ್ಲೇಯರ್ಸ್​ ತಮ್ಮ ದೇಶಕ್ಕೆ ವಾಪಸ್ ಆಗಲಿದ್ದಾರೆ. ಅದರಂತೆ ಆರ್​ಸಿಬಿಯು ಯಂಗ್​ಗನ್ ಜೇಕಬ್ ಬೆಥೆಲ್ ಕೂಡ ಇಂಗ್ಲೆಂಡ್​ಗೆ ಹೋಗುವುದರಿಂದ ಆರ್​ಸಿಬಿ ಫೈನಲ್ ಪ್ರವೇಶ ಪಡೆದಿದ್ದೆ ಆದರೆ ಮಿಸ್ ಮಾಡಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಇನ್ನು ಆರ್​ಸಿಬಿ ಫ್ರಾಂಚೈಸಿ ಮೆಗಾ ಆಕ್ಷನ್​​ನಲ್ಲಿ ಜೇಕಬ್ ಬೆಥೆಲ್ ಅವರನ್ನು 2.60 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿತ್ತು. ಈಗಾಗಲೇ ಇಂಗ್ಲೆಂಡ್​​ ತಂಡದಲ್ಲಿ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡ ಜೇಕಬ್ ಬೆಥೆಲ್ ಫೈನಲ್​​ನಲ್ಲಿ ಆಡುವುದು ಅನುಮಾನ ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ