newsfirstkannada.com

ಕುಡಿದು ಪ್ರಜ್ಞೆ ತಪ್ಪಿಬಿದ್ದ ಆರ್​ಸಿಬಿ ಆಟಗಾರ! ಬೆಂಗಳೂರು ಫ್ಯಾನ್ಸ್​ಗೆ ಕಂಟಕ ಎದುರಾಗಿದ್ಯಾ?

Share :

Published January 23, 2024 at 1:12pm

    ಅತಿಯಾದ ಮದ್ಯ ಸೇವನೆ RCB ಆಟಗಾರನಿಗೆ ಅನಾರೋಗ್ಯ

    ಅನಾರೋಗ್ಯದ ವಿಚಾರವಾಗಿ ತನಿಖೆ ನಡೆಸಲು ಮುಂದಾದ ಸಿಎ

    ಒಂದು ವೇಳೆ ತಪ್ಪಿತಸ್ಥ ಎಂದು ಕಂಡುಬಂದರೆ RCBಗೆ ಆಘಾತ ಪಕ್ಕಾ

ಆಸ್ಟ್ರೇಲಿಯಾ ಕ್ರಿಕೆಟಿಗ, ಆರ್​ಸಿಬಿ ಆಟಗಾರ ಗ್ಲೆನ್​ ಮ್ಯಾಕ್ಸ್​ವೆಲ್​ ಪ್ರಜ್ಞೆ ತಪ್ಪಿ ಬಿದ್ದು ಆಸ್ಪತ್ರೆ ದಾಖಲಾಗಿದ್ದಾರೆ. ಕಳೆದ ವಾರ ಅಡಿಲೇಟ್​​ನಲ್ಲಿ ನಡೆದ ಲೇಟ್​ ನೈಟ್​ ಪಾರ್ಟಿಯಲ್ಲಿ ಹಾಜರಾಗಿದ್ದ ವೇಳೆ ಕ್ರಿಕೆಟಿಗ ನೆಲಕ್ಕಪ್ಪಳಿಸಿದ್ದಾರೆ. ಸದ್ಯ ಈ ಕ್ರಿಕೆಟಿಗ ಆಸ್ಪತ್ರೆಯಿಂದ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ ಎನ್ನಲಾಗುತ್ತಿದ್ದು, ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಈ ಪ್ರಕರಣ ಕುರಿತು ​ಗಂಭೀರವಾಗಿ ತನಿಖೆ ನಡೆಸಲು ಮುಂದಾಗಿದೆ.

ಮ್ಯಾಕ್ಸ್​ವೆಲ್​ ‘‘ಸಿಕ್ಸ್​​ ಆ್ಯಂಡ್​​ ಔಟ್​’’ ಬ್ಯಾಂಡ್​​ನ ಸಂಗೀತಗೋಷ್ಠಿಯಲ್ಲಿ ಹಾಜರಾಗಿದ್ದರು. ಇದು ಆಸ್ಟ್ರೆಲಿಯಾ ಮಾಜಿ ಕ್ರಿಕೆಟಿಗ ಬ್ರೆಟ್​​ ಲೀ ಅವರ ಕಾರ್ಯಕ್ರಮವಾಗಿತ್ತು. ಹೀಗಾಗಿ ಇದರಲ್ಲಿ ಭಾಗವಹಿಸಿದ್ದ ಮ್ಯಾಕ್ಸ್​ವೆಲ್​​ ಅತಿಯಾದ ಮದ್ಯಪಾನ ಸೇವಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಅವರು ಅಸ್ವಸ್ಥರಾಗಿದ್ದು, ತಕ್ಷಣ ಅವರನ್ನು ಆ್ಯಂಬುಲೆನ್ಸ್​ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ ಎನ್ನಲಾಗುತ್ತಿದೆ.

ಆಸ್ಪತ್ರೆಗೆ ದಾಖಲಾಗಿದ್ದ ಮ್ಯಾಕ್ಸ್​ವೆಲ್​ ಮರುದಿನವೇ ಡಿಸ್ಚಾರ್ಜ್​ ಆಗಿದ್ದಾರೆ. ಸದ್ಯ ಮ್ಯಾಕ್ಸ್​ವೆಲ್​ ಅನಾರೋಗ್ಯದ ಕುರಿತು ಗಂಭೀರವಾಗಿ ಸಿಎ ತನಿಖೆ ನಡೆಸುತ್ತಿದೆ. ಒಂದು ವೇಳೆ ಇದರಲ್ಲಿ ತಪ್ಪಿತಸ್ಥ ಎಂದು ಕಂಡುಬಂದರೆ ಮ್ಯಾಕ್ಸ್​ವೆಲ್​ಗೆ ನಿಷೇಧ ಶಿಕ್ಷೆಯನ್ನು ವಿಧಿಸುವ ಸಾಧ್ಯತೆ ಇದೆ. ಮತ್ತೊಂದೆಡೆ ಮುಂಬರುವ ಐಪಿಎಲ್​ನಲ್ಲಿ ಆರ್​ಸಿಬಿ ಪರವಾಗಿಯೂ ಇವರು ಆಡಬೇಕಿದೆ.

ಆಸ್ಟ್ರೇಲಿಯಾ ಕ್ಯಾಪ್ಟನ್​ ಏನಂದ್ರು?

‘‘ನಾವೆಲ್ಲರೂ ವಯಸ್ಕರು, ರಾತ್ರಿ ವಿಹಾರಗಳಲ್ಲಿ ಭಾಗವಾಗಿಸುತ್ತೇವೆ. ನೀವು ನಿಮ್ಮ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಈ ನೈಜ ಘಟನೆಯಲ್ಲಿ ಅವರು ಆಸ್ಟ್ರೇಲಿಯನ್ನರೊಂದಿಗೆ ಪ್ರವಾಸದಲ್ಲಿ ಇರಲಿಲ್ಲ ಎಂದು ನಾನು ಭಾವಿಸುತ್ತೇನೆ. ಅವರು ಖಾಸಗಿ ಕಾರ್ಯಕ್ರಮಕ್ಕಾಗಿ ಅಲ್ಲಿದ್ದರು. ಅವರು ಕ್ರಿಕೆಟ್ ತಂಡದೊಂದಿಗೆ ಇರಲಿಲ್ಲ. ಆದ್ದರಿಂದ, ಇದು ಸ್ವಲ್ಪ ವಿಭಿನ್ನವಾಗಿದೆ. ಸಂಪೂರ್ಣವಾಗಿ, ನೀವು ತೆಗೆದುಕೊಳ್ಳುವ ಯಾವುದೇ ನಿರ್ಧಾರ ಅದರೊಂದಿಗೆ ಆರಾಮವಾಗಿರಬೇಕು” ಎಂದು ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮ್ಮಿನ್ಸ್ ಪ್ರತಿಕ್ರಿಯೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕುಡಿದು ಪ್ರಜ್ಞೆ ತಪ್ಪಿಬಿದ್ದ ಆರ್​ಸಿಬಿ ಆಟಗಾರ! ಬೆಂಗಳೂರು ಫ್ಯಾನ್ಸ್​ಗೆ ಕಂಟಕ ಎದುರಾಗಿದ್ಯಾ?

https://newsfirstlive.com/wp-content/uploads/2024/01/Maxwell.jpg

Load More