Advertisment

ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಈಜಾಡಿದ RCB ಪ್ಲೇಯರ್​.. ಎಲ್ರೂ ಫುಲ್ ಶಾಕ್!

author-image
Bheemappa
Updated On
ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಈಜಾಡಿದ RCB ಪ್ಲೇಯರ್​.. ಎಲ್ರೂ ಫುಲ್ ಶಾಕ್!
Advertisment
  • ಡ್ರೆಸ್ಸಿಂಗ್​ ರೂಮ್​ಗೆ ಬರುತ್ತಿದ್ದಂತೆ ಚಪ್ಪಾಳೆಯಿಂದ ಸ್ವಾಗತ
  • ಮಳೆ ಬರುವಾಗ ಮೈದಾನದಲ್ಲೇ ಸ್ನಾನ ಮಾಡಿದ ಆಟಗಾರ
  • ಈಗಾಗಲೇ ಆರ್​ಸಿಬಿ ತಂಡಕ್ಕೆ ಮರಳಿದ ವಿದೇಶಿ ಪ್ಲೇಯರ್ಸ್​

ಐಪಿಎಲ್ ಆರಂಭಕ್ಕೆ ಕೌಂಟ್​ಡೌನ್ ಶುರುವಾಗಿದೆ. ಎಲ್ಲ ತಂಡಗಳು ಮತ್ತೆ ಅಖಾಡಕ್ಕೆ ಧುಮಕಲಿದ್ದು ಈಗಾಗಲೇ ಬಹುತೇಕ ಆಟಗಾರರು ತಮ್ಮ ತಮ್ಮ ತಂಡವನ್ನು ಸೇರಿಕೊಂಡಿದ್ದಾರೆ. ಪುನರಾರಂಭದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಹಾಗೂ ಕೋಲ್ಕತ್ತಾ ನೈಟ್​ ರೈಡರ್ಸ್ ಸೆಣಸಾಟ ನಡೆಸಲಿವೆ. ಇದರ ಮಧ್ಯೆ​ ಚಿನ್ನಸ್ವಾಮಿ ಮೈದಾನದಲ್ಲಿ ಟಿಮ್ ಡೇವಿಡ್​ ಈಜಾಡಿದ್ದಾರೆ.

Advertisment

ಆರ್​ಸಿಬಿ ತನ್ನ ಸೋಶಿಯಲ್ ಮೀಡಿಯಾದಲ್ಲಿ ಸ್ಫೋಟಕ ಬ್ಯಾಟರ್ ಟಿಮ್ ಡೇವಿಡ್​ ಅವರ ವಿಡಿಯೋವೊಂದನ್ನು ಶೇರ್ ಮಾಡಿದೆ. ವಿಡಿಯೋದಲ್ಲಿ ಮಳೆ ಬರುವ ಸಂದರ್ಭದಲ್ಲಿ ಟಿಮ್ ಡೇವಿಡ್ ಚಿನ್ನಸ್ವಾಮಿ ಮೈದಾನದಲ್ಲಿ ಈಜಾಡಿ ಎಂಜಾಯ್​ ಮಾಡಿದ್ದಾರೆ. ಮೈದಾನದಲ್ಲಿ ನಿಂತಿರುವ ಮಳೆ ನೀರಿನಲ್ಲಿ ಮುಖ ತೊಳೆದ ಟಿಮ್ ಡೇವಿಡ್, ಬಳಿಕ ಓಡಿ ಹೋಗಿ ನೀರಲ್ಲಿ ಡೈವ್ ಮಾಡಿದ್ದಾರೆ. ಸ್ನಾನ ಮುಗಿಸಿ ಡ್ರೆಸ್ಸಿಂಗ್ ರೂಮ್​ಗೆ ಬರುವ ಟಿಮ್​ ಡೇವಿಡ್​ ಅವರನ್ನು ಚಪ್ಪಾಳೆ ತಟ್ಟಿ ಆರ್​ಸಿಬಿ ತಂಡ ಸ್ವಾಗತಿಸಿದೆ.

ಇದನ್ನೂ ಓದಿ: RCB ಪಂದ್ಯಕ್ಕೆ ಭಾರೀ ಬಿಗಿ ಭದ್ರತೆ.. ಹೇಗಿದೆ ಗೊತ್ತಾ ರಕ್ಷಣೆ..?

publive-image

ಟಿಮ್ ಡೇವಿಡ್, ಫಿಲಿಪ್ ಸಾಲ್ಟ್, ಜಾಕೋಬ್ ಬೆಥೆಲ್, ಲಿವಿಂಗ್​​ಸ್ಟೋನ್, ಶೆಫರ್ಡ್​ ಸೇರಿಂದತೆ ಎಲ್ಲ ವಿದೇಶಿ ಆಟಗಾರರು ಈಗಾಗಲೇ ತಂಡವನ್ನು ಮರಳಿ ಸೇರಿಕೊಂಡಿದ್ದಾರೆ. ಇನ್ನೇನು ನಾಳೆ ಕೆಕೆಆರ್​ ವಿರುದ್ಧ ಆರ್​ಸಿಬಿ ಪ್ಲೇಯರ್ಸ್​ ಅಬ್ಬರ ಜೋರಾಗಿ ಇರಲಿದೆ. ಇನ್ನು ಈ ವಿಡಿಯೋ ಹಳೆಯದಾಗಿದ್ದು ಇದೀಗ ಆರ್​ಸಿಬಿ ಫ್ರಾಂಚೈಸಿಯು ತನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದೆ. ಇದಕ್ಕೆ ಅಭಿಮಾನಿಗಳು ಕಾಮೆಂಟ್ಸ್ ಮಾಡುತ್ತಿದ್ದಾರೆ. ​

ಟಿಮ್ ಡೇವಿಡ್​ ಆರ್​ಸಿಬಿಯ ಸ್ಫೋಟಕ ಬ್ಯಾಟರ್ ಆಗಿದ್ದು ಕೊನೆಯಲ್ಲಿ ತಂಡವನ್ನು ಹೇಗಾದರೂ ಪಾರು ಮಾಡುವಂತ ಛಲದಂಕ. ಈ ಹಿಂದಿನ ಐಪಿಎಲ್​ ಸೀಸನ್​ನಲ್ಲಿ ಮುಂಬೈ ಇಂಡಿಯನ್ಸ್​ ತಂಡದಲ್ಲಿದ್ದ ಟಿಮ್ ಡೇವಿಡ್ ಅವರನ್ನು 3 ಕೋಟಿ ರೂಪಾಯಿಗಳಿಗೆ ಈ ಬಾರಿ ಆರ್​ಸಿಬಿ ಖರೀದಿ ಮಾಡಿತ್ತು.

Advertisment

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment