newsfirstkannada.com

RCBಯಲ್ಲಿ ವಿರಾಟ್​ ಒನ್​ ಮ್ಯಾನ್ ಶೋ.. ಉಳಿದ ಪ್ಲೇಯರ್ಸ್​ ಆಟಕ್ಕುಂಟು, ಲೆಕ್ಕಕ್ಕಿಲ್ಲ; ಕಾರಣವೇನು?

Share :

Published April 1, 2024 at 11:47am

Update April 1, 2024 at 11:48am

    ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಹಾದಿ ಮಾತ್ರ ವಿಭಿನ್ನ

    ಎಲ್ಲ ಮ್ಯಾಚ್​ ಅಲ್ಲೂ ಒಬ್ಬನೇ ನಂಬಿಕೊಂಡ್ರೆ, ಸದಾ ಗೆಲ್ಲೋಕಾಗುತ್ತಾ?

    ಆರ್​ಸಿಬಿ 3 ಪಂದ್ಯಗಳಲ್ಲಿ 8 ಮಂದಿಯಿಂದ 498 ರನ್ ಗಳಿಕೆಯಷ್ಟೇ!

ಐಪಿಎಲ್​​​​ ಫೀವರ್ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಮಿಲಿಯನ್ ಡಾಲರ್​ ಕಿರೀಟಕ್ಕೆ ಮುತ್ತಿಡಲು 9 ತಂಡಗಳು ಟಫ್​ ಫೈಟ್​ ನಡೆಸ್ತಿವೆ. ಆದ್ರೆ, ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹಾದಿ ಮಾತ್ರ ವಿಭಿನ್ನವಾಗಿದೆ. ಕಪ್​ ಗೆಲ್ಲೋ ಗುರಿಯೇನೋ ಇದೆ. ಆದ್ರೆ, ಇದಕ್ಕಾಗಿ ನೆಚ್ಚಿಕೊಂಡಿರೋದು ಒಬ್ಬನನ್ನ ಮಾತ್ರ. ಇದನ್ನ ನೋಡಿದ್ರೆ, ಕಪ್​ ಗೆಲ್ಲೋದಲ್ಲ. ಪ್ಲೇ ಆಫ್​ಗೆ ರೀಚ್​ ಆಗೋದು ಕಷ್ಟ.

ಕ್ರಿಕೆಟ್​.. ಇದು ಟೀಮ್ ಗೇಮ್​.. ಇಲ್ಲಿ ಒಬ್ಬನೇ ಪ್ಲೇಯರ್​ ಸಿಂಗಲ್ ಹ್ಯಾಂಡೆಡ್ಲಿ ಮ್ಯಾಚ್ ಗೆಲ್ಲೋದೂ ಉಂಟು. ಸಿಂಗಲ್ ಮಿಸ್ಟೇಕ್​​ಗೆ ಮ್ಯಾಚ್ ಸೋಲೋದು ಉಂಟು. ಆದ್ರೆ, ಎಲ್ಲ ಮ್ಯಾಚ್​ ಅಲ್ಲೂ ಒಬ್ಬನೇ ನಂಬಿಕೊಂಡ್ರೆ, ಸದಾ ಗೆಲ್ಲೋಕಾಗುತ್ತಾ, ಸಾಧ್ಯಾನೇ ಇಲ್ಲ ಅಲ್ವಾ. ಈ ಸಿಂಪಲ್​ ಲಾಜಿಕ್​ ಆರ್​​ಸಿಬಿಗೆ ಅರ್ಥವಾಗ್ತಿಲ್ಲ.

8 ಮಂದಿ ಫ್ಲಾಪ್​..​ ಕಿಂಗ್​​ ಕೊಹ್ಲಿಯ ದರ್ಬಾರ್​​..!

ಪ್ರಸಕ್ತ ಆವೃತ್ತಿಯಲ್ಲಿ 3 ಪಂದ್ಯಗಳನ್ನಾಡಿರುವ ಆರ್​ಸಿಬಿ, ಎರಡು ಪಂದ್ಯಗಳಲ್ಲಿ ಮುಗ್ಗರಿಸಿದೆ. ಈ 3 ಪಂದ್ಯಗಳಲ್ಲಿ 8 ಮಂದಿ ಬ್ಯಾಟರ್​ಗಳು ಬ್ಯಾಟ್ ಬೀಸಿದ್ದಾರೆ. ಒಟ್ಟು 498 ರನ್ ಕಲೆಹಾಕಿದ್ದಾರೆ. ಆದ್ರೆ, ಈ 8 ಮಂದಿ ಬ್ಯಾಟರ್​ಗಳ ಪೈಕಿ ಅರ್ಧಶತಕ ಗಳಿಸಿದ ಒನ್​ ಆ್ಯಂಡ್ ಒನ್ಲಿ ಬ್ಯಾಟ್ಸ್​​ಮನ್​ ಅಂದ್ರೆ ಅದು ವಿರಾಟ್ ಕೊಹ್ಲಿ ಮಾತ್ರ.

ಪ್ರಸಕ್ತ ಸೀಸನ್​ನಲ್ಲಿ ಆರ್​ಸಿಬಿ ಬ್ಯಾಟರ್ಸ್​

ಈ ಸೀಸನ್​​ನಲ್ಲಿ ಆರ್​ಸಿಬಿ ಗಳಿಸಿರುವ 498 ರನ್​ಗಳ ಪೈಕಿ ಕೊಹ್ಲಿಯ ಬ್ಯಾಟ್​ನಿಂದಲೇ 181 ರನ್​ಗಳು ಸಿಡಿದಿವೆ. 128 ಎಸೆತ ಎದುರಿಸಿರುವ ವಿರಾಟ್, 141.41ರ ಸ್ಟ್ರೈಕ್​ರೇಟ್​​ನಲ್ಲಿ ಬ್ಯಾಟ್ ಬೀಸಿದ್ದಾರೆ. ಇನ್ನು ದಿನೇಶ್​ 44 ಎಸೆತಗಳಿಂದ 195.45ರ ಸ್ಟ್ರೈಕ್​​ರೇಟ್​ನಲ್ಲಿ ಬ್ಯಾಟ್ ಬೀಸಿದ್ರೆ. ಉಳಿದ ಬ್ಯಾಟರ್​ಗಳು 184 ಎಸೆತಗಳಿಂದ ಕೇವಲ 230 ರನ್ ಗಳಿಸಿದ್ದಾರೆ. ಒಂದೇ ಒಂದು ಫಿಫ್ಟಿ ಸಿಡಿಸದ ಇತರೆ ಬ್ಯಾಟರ್ಸ್​ ಕೇವಲ 125ರ ಸ್ಟ್ರೈಕ್​ರೇಟ್​ನಲ್ಲಿ ರನ್​ಗಳಿಸಿದ್ದಾರೆ.

ಚೆನ್ನೈ ಎದುರಿನ ಮೊದಲ ಪಂದ್ಯವೊಂದು ಬಿಟ್ಟರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಪೂರ್ಣ ವಿರಾಟ್ ಮೇಲೆ ಡಿಪೆಂಡ್​​ ಆಗಿದೆ. ಪಂಜಾಬ್ ಎದುರು ಚೇಸಿಂಗ್ ಮಾಸ್ಟರ್​ 77 ರನ್ ಗಳಿಸಿ ಗೆಲುವಿನ ದಡ ಸೇರಿಸಿದ್ರೆ. ಕೆಕೆಆರ್ ಎದುರು ಏಕಾಂಗಿ ಹೋರಾಟ ನಡೆಸಿ ತಂಡದ ಮಾನ ಕಾಪಾಡಿದ್ರು. ಈ ಮೂರು ಮ್ಯಾಚ್​​ಗಳಲ್ಲಿ ವಿರಾಟ್​ ಜೊತೆ ತಂಡಕ್ಕೆ ಒಂದಿಷ್ಟು ಭರವಸೆ ಮೂಡಿಸಿದ್ದು ದಿನೇಶ್​ ಕಾರ್ತಿಕ್ ಮಾತ್ರ.

ಇವರಿಬ್ಬರನ್ನ ಬಿಟ್ರೆ ಉಳಿದೆಲ್ಲ ಬ್ಯಾಟರ್​ಗಳು ಇದ್ದು, ಇಲ್ಲದಂತಿದ್ದಾರೆ. ಮ್ಯಾಚ್ ಫಿನಿಷರ್​ಗಳಾಗಿ ಗುರುತಿಸಿಕೊಳ್ಳಬೇಕಾದ ಗ್ಲೆನ್ ಮ್ಯಾಕ್ಸ್​ವೆಲ್​, ಕ್ಯಾಮರೂನ್​ ಗ್ರೀನ್​ ಪರದಾಡ್ತಿದ್ರೆ, ರಜತ್ ಪಟಿದಾರ್​ ನನಗೂ ಬ್ಯಾಟಿಂಗ್​ಗೂ ಸಂಬಂಧವೇ ಇಲ್ಲ ಎಂಬಂತೆ ಬ್ಯಾಟ್​ ಬೀಸ್ತಿದ್ದಾರೆ.

ಹೀಗಾದರೆ ಕಪ್​ ಅಲ್ಲ.. ಪ್ಲೇ-ಆಫ್​ಗೂ ತಲುಪಲ್ಲ..!

ಮುಂದಿನ ದಿನಗಳಲ್ಲಿ ವಿರಾಟ್​​ ಕೊಹ್ಲಿಗೆ ಉಳಿದ ಬ್ಯಾಟರ್ಸ್​ ಸಾಥ್​ ನೀಡದಿದ್ದರೆ, ಈ ಸಲ ಕಪ್​ ಅಲ್ಲ.. ಪ್ಲೇ-ಆಫ್​​ಗೂ ಆರ್​​ಸಿಬಿ ಎಂಟ್ರಿ ಕೊಡಲ್ಲ. ಹೀಗಾಗಿ ಸ್ಟಾರ್​​ಗಳಾದ ಮ್ಯಾಕ್ಸ್​ವೆಲ್, ಕ್ಯಾಮರೂನ್​​ ಗ್ರೀನ್ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್​ ನೀಡಬೇಕಿದೆ. ಟೀಮ್ ಮ್ಯಾನೇಜ್​ಮೆಂಟ್ & ಕ್ಯಾಪ್ಟನ್​​ ಫಾಫ್ ಡುಪ್ಲೆಸಿ, ಬ್ಯಾಟಿಂಗ್​ ವಿಭಾಗಕ್ಕೆ ಸರ್ಜರಿ ಮಾಡಬೇಕಿದೆ. ಇಲ್ದಿದ್ರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾತಾಳಕ್ಕೆ ಕುಸಿಯೋದ್ರಲ್ಲಿ ಅನುಮಾನನೇ ಇಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

RCBಯಲ್ಲಿ ವಿರಾಟ್​ ಒನ್​ ಮ್ಯಾನ್ ಶೋ.. ಉಳಿದ ಪ್ಲೇಯರ್ಸ್​ ಆಟಕ್ಕುಂಟು, ಲೆಕ್ಕಕ್ಕಿಲ್ಲ; ಕಾರಣವೇನು?

https://newsfirstlive.com/wp-content/uploads/2024/04/VIRAT_KOHLI_RCB-1.jpg

Load More