Advertisment

ಕೆಕೆಆರ್ ವಿರುದ್ಧ ನಾಳೆ ಬಲಿಷ್ಠ ಟೀಂ ಕಣಕ್ಕೆ.. ಆರ್​ಸಿಬಿ ತಂಡದಲ್ಲಿ ಯಾರೆಲ್ಲ ಇರ್ತಾರೆ..?

author-image
Ganesh
Updated On
ಕೊಹ್ಲಿಗೂ ಅಲ್ಲ, ಕೃನಾಲ್​ಗೂ ಅಲ್ಲ.. ಗೆಲುವಿನ ಕ್ರೆಡಿಟ್ ಯಾರಿಗೆ ಕೊಟ್ರು ರಜತ್ ಪಾಟೀದಾರ್..?
Advertisment
  • ಅಮಾನತು ಬಳಿಕ ನಾಳೆ ಮೊದಲ ಪಂದ್ಯ
  • ಬೆಂಗಳೂರಿನಲ್ಲಿ ನಡೆಯುತ್ತಿರುವ ಮೊದಲ ಮ್ಯಾಚ್
  • ಕೋಲ್ಕತ್ತ ನೈಟ್ ರೈಡರ್ಸ್, ಆರ್​ಸಿಬಿ ಮಧ್ಯೆ ಫೈಟ್

ಭಾರತ ಮತ್ತು ಪಾಕ್ ನಡುವೆ ಯುದ್ಧದ ಬಿಕ್ಕಟ್ಟು ಹಿನ್ನೆಲೆಯಲ್ಲಿ ಐಪಿಎಲ್ ಪಂದ್ಯಗಳನ್ನ ಅಮಾನತಿನಲ್ಲಿ ಇಡಲಾಗಿತ್ತು. ಇದೀಗ ಐಪಿಎಲ್ ಹಬ್ಬ ಮತ್ತೆ ಶುರುವಾಗುತ್ತಿದ್ದು, ಕೋಲ್ಕತ್ತ ನೈಟ್ ರೈಡರ್ಸ್, ಆರ್​ಸಿಬಿ ಮುಖಾಮುಖಿ ಆಗ್ತಿವೆ. ನಾಳೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ಮೊದಲ ಪಂದ್ಯ ನಡೆಯಲಿದೆ.

Advertisment

ಹೇಗಿದೆ ಪಿಚ್..?

ಚಿನ್ನಸ್ವಾಮಿಯಲ್ಲಿ ಹಲವು ಬಾರಿ 200ಕ್ಕೂ ಹೆಚ್ಚು ರನ್ ದಾಖಲಾಗಿದೆ. ಬ್ಯಾಟರ್​​ಗಳಿಗೆ ಹೇಳಿ ಮಾಡಿಸಿದ ಪಿಚ್ ಇದಾಗಿದೆ. ಜೊತೆಗೆ ಸ್ಪಿನ್ನರ್​ ಸ್ನೇಹಿಯೂ ಆಗಿದೆ. ಮೊದಲು ಬ್ಯಾಟ್ ಮಾಡಿದ ತಂಡ ಆಟದಲ್ಲಿ ಪ್ರಾಭಲ್ಯ ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ತಂಡ 43 ಬಾರಿ ಗೆದ್ದರೆ, ಚೇಸಿಂಗ್ ತಂಡ 53 ಬಾರಿ ಗೆದ್ದಿದೆ.

ಹವಾಮಾನ ವರದಿ

ಹವಾಮಾನ ವರದಿಯು ಮಳೆಯಾಗುವ ನಿರೀಕ್ಷೆ ಇದೆ ಎಂದಿದೆ. ಸಂಜೆ ಮತ್ತು ರಾತ್ರಿ ಆಕಾಶದಲ್ಲಿ ಮಿಂಚು ಬೀಳಬಹುದು. ಮಳೆಯಿಂದಾಗಿ ಪಂದ್ಯವು ಹಲವು ಬಾರಿ ನಿಲ್ಲುವ ಸಾಧ್ಯತೆ ಇದೆ.

ಇದನ್ನೂ ಓದಿ: VIDEO- ಚಿನ್ನಸ್ವಾಮಿ ಪಿಚ್ ಅನ್ನೇ ಸ್ವಿಮ್ಮಿಂಗ್ ಪೂಲ್ ಮಾಡಿಕೊಂಡ ಆರ್​ಸಿಬಿ ಸ್ಟಾರ್.. ಫುಲ್ ಎಂಜಾಯ್!

Advertisment

ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಇಲ್ಲಿಯವರೆಗೆ ಆರ್‌ಸಿಬಿ ಮತ್ತು ಕೆಕೆಆರ್ ನಡುವೆ 35 ಪಂದ್ಯಗಳು ನಡೆದಿವೆ. ಅದರಲ್ಲಿ ಕೋಲ್ಕತ್ತಾ 20 ಬಾರಿ ಗೆದ್ದಿದ್ದರೆ, ಬೆಂಗಳೂರು 15 ಬಾರಿ ಗೆದ್ದಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಬ್ಬರ ನಡುವೆ 12 ಪಂದ್ಯಗಳು ನಡೆದಿವೆ. ಕೆಕೆಆರ್ 8 ಪಂದ್ಯ ಗೆದ್ದಿದೆ. ಚಿನ್ನಸ್ವಾಮಿಯಲ್ಲಿ ಆರ್​ಸಿಬಿ ಕೊನೆಯ ಬಾರಿಗೆ ಕೆಕೆಆರ್​ ವಿರುದ್ಧ ಗೆದ್ದಿರೋದು 2015ರಲ್ಲಿ.

ಬಲಿಷ್ಠ ಆರ್​ಸಿಬಿ (ಸಂಭಾವ್ಯ ತಂಡ): ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ರಜತ್ ಪಾಟಿದಾರ್ (ನಾಯಕ), ಮಯಾಂಕ್ ಅಗರ್ವಾಲ್, ಜಿತೇಶ್ ಶರ್ಮಾ, ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ರೊಮಾರಿಯೋ ಶೆಫರ್ಡ್, ಭುವನೇಶ್ವರ್ ಕುಮಾರ್, ಲುಂಗಿ ಎನ್‌ಗಿಡಿ, ಯಶ್ ದಯಾಲ್.

ಇದನ್ನೂ ಓದಿ: ಪಾಕಿಸ್ತಾನ ಸೂಪರ್ ಲೀಗ್​ಗೆ ಗುಡ್​ಬೈ.. ಐಪಿಎಲ್​​ಗೆ ಹಾಯ್ ಹಾಯ್ ಹೇಳಿದ ಸ್ಟಾರ್ ಪ್ಲೇಯರ್..!

Advertisment

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment