newsfirstkannada.com

ಸಿಎಸ್​ಕೆ ವಿರುದ್ಧ ಓಪನಿಂಗ್​ ಮಾಡೋದ್ಯಾರು? ಬಲಿಷ್ಠ ಆರ್​​​ಸಿಬಿ ತಂಡದಲ್ಲಿ ಯಾರಿಗೆ ಅವಕಾಶ?

Share :

Published March 20, 2024 at 6:15pm

Update March 20, 2024 at 6:17pm

    ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ 17ನೇ ಸೀಸನ್

    ಸಿಎಸ್​ಕೆ, ಆರ್​​ಸಿಬಿ ಮಧ್ಯೆ ನಡೆಯಲಿದೆ ಮೊದಲ ಹೈವೋಲ್ಟೇಜ್​​​​​ ಪಂದ್ಯ..!

    ಆರ್​​ಸಿಬಿ ಪರ ಓಪನಿಂಗ್​ ಮಾಡೋದ್ಯಾರು? ಬ್ಯಾಟಿಂಗ್​ ಆರ್ಡರ್​ ಹೇಗಿದೆ?

ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ 17ನೇ ಸೀಸನ್​​ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇವೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಸಿಎಸ್​ಕೆ, ಆರ್​​ಸಿಬಿ ಮಧ್ಯೆ ಮೊದಲ ಐಪಿಎಲ್​ ಪಂದ್ಯಗಳು ನಡೆಯಲಿವೆ. ಅದರಲ್ಲೂ ವುಮೆನ್​ ಪ್ರೀಮಿಯರ್​ ಲೀಗ್​ ಕಪ್​ ಗೆದ್ದಿರೋ ಬಳಿಕ ಆರ್​​ಸಿಬಿ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ಹೌದು, ವಿಶೇಷವಾಗಿ ಆರ್​​​ಸಿಬಿ ಬ್ಯಾಟಿಂಗ್​​ ಕ್ರಮಾಂಕದ ಬಗ್ಗೆ ಬಹಳ ಚರ್ಚೆ ನಡೆಯುತ್ತಿದೆ. ಆರ್‌ಸಿಬಿ ತಂಡಕ್ಕೆ ಓಪನಿಂಗ್​ ಮಾಡೋರು ನಿರ್ಣಾಯಕವಾಗಿದ್ದು, ಯಾರು ಮೊದಲು ಕ್ರೀಸ್ ತೆಗೆದುಕೊಳ್ಳುತ್ತಾರೆ ಎಂಬುದರ ಬಗ್ಗೆ ಚರ್ಚೆಯಾಗಿದೆ.
ಆರ್​​ಸಿಬಿ ತಂಡದ ಪರ ಕ್ಯಾಪ್ಟನ್​ ಫಾಫ್​​ ಡುಪ್ಲೆಸಿಸ್​​, ವಿರಾಟ್​ ಕೊಹ್ಲಿ ಜೋಡಿ ಓಪನಿಂಗ್​ ಮಾಡಲಿದೆ ಎಂದು ಹೇಳಲಾಗುತ್ತಿದೆ.

ಸದ್ಯ ಕ್ಯಾಮೆರಾನ್ ಗ್ರೀನ್ ಆರ್​​ಸಿಬಿ ಸೇರಿದ್ದು, ಇವರು ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಸಾಧ್ಯತೆ ಇದೆ.
3ನೇ ಕ್ರಮಾಂಕದಲ್ಲಿ ಕ್ಯಾಮೆರಾನ್​ ಗ್ರೀನ್​​​, 4ನೇ ಕ್ರಮಾಂಕದಲ್ಲಿ ರಜತ್ ಪಾಟಿದಾರ್ ಸ್ಥಿರವಾದ ಬ್ಯಾಟಿಂಗ್ ಮಾಡಲಿದ್ದಾರೆ. ಮಧ್ಯಮ ಕ್ರಮಾಂಕದ 5ನೇ ಸ್ಥಾನದಲ್ಲಿ ಸ್ಟಾರ್​​ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಪರಿಣಾಮಕಾರಿ ಆಟವಾಡಲಿದ್ದಾರೆ. ದಿನೇಶ್​ ಕಾರ್ತಿಕ್​​ ಫಿನಿಶರ್​ ಆಗಿ, ಮಹಿಪಾಲ್ ಲೊಮ್ರೋರ್, ಅನುಜ್ ರಾವತ್ ಮತ್ತು ಸುಯಶ್ ಪ್ರಭುದೇಸಾಯ್​​ ಪರಿಸ್ಥಿತಿಗಳ ಆಧಾರದ ಮೇಲೆ ಬ್ಯಾಟಿಂಗ್ ಮಾಡಲಿದ್ದಾರೆ.

ಆರ್​​ಸಿಬಿ ಪ್ಲೇಯಿಂಗ್​ ಎಲೆವೆನ್​ ಆಗಿದೆ..!

ಫಾಫ್ ಡುಪ್ಲೆಸಿಸ್ (ನಾಯಕ), ಕ್ಯಾಮೆರಾನ್ ಗ್ರೀನ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೋಮ್ರೋರ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಕರ್ಣ್ ಶರ್ಮಾ, ಅಲ್ಜಾರಿ ಜೋಸೆಫ್.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿಎಸ್​ಕೆ ವಿರುದ್ಧ ಓಪನಿಂಗ್​ ಮಾಡೋದ್ಯಾರು? ಬಲಿಷ್ಠ ಆರ್​​​ಸಿಬಿ ತಂಡದಲ್ಲಿ ಯಾರಿಗೆ ಅವಕಾಶ?

https://newsfirstlive.com/wp-content/uploads/2024/03/RCB-Opening-pair.jpg

Load More