/newsfirstlive-kannada/media/post_attachments/wp-content/uploads/2024/11/RCB-5.jpg)
ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಈಗಾಗಲೇ ಶುರುವಾಗಿದೆ. ಕೆಕೆಆರ್​ ವಿರುದ್ಧ ಮೊದಲ ಪಂದ್ಯದಲ್ಲಿ ಗೆದ್ದು ಬೀಗಿದ್ದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು 2ನೇ ಪಂದ್ಯದಲ್ಲಿ ಚೆನ್ನೈ ವಿರುದ್ಧ ಸೆಣಸಾಡಲಿದೆ. ನಾಳೆ ಎಂದರೆ ಮಾರ್ಚ್​​ 28ನೇ ತಾರೀಕು ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಬೆಂಗಳೂರು ಟೀಮ್​​​ ಕಣಕ್ಕಿಳಿಯಲಿದೆ. ಇದರ ಮಧ್ಯೆ ಆರ್​​​ಸಿಬಿ ಪ್ಲೇಯಿಂಗ್​​ ಎಲೆವೆನ್​ ಹೇಗಿರಲಿದೆ? ಅನ್ನೋ ಚರ್ಚೆ ಶುರುವಾಗಿದೆ.
ಆರ್​​ಸಿಬಿ ಪ್ಲೇಯಿಂಗ್​​ ಎಲೆವೆನ್​ ಹೇಗಿರಲಿದೆ!
ಇನ್ನು, ಆರ್​​ಸಿಬಿ ತಂಡದಲ್ಲಿ ಅನುಭವಿ ಆಟಗಾರರ ದಂಡೇ ಇದೆ. ಮಾಜಿ ಕ್ಯಾಪ್ಟನ್​ ವಿರಾಟ್​ ಕೊಹ್ಲಿ, ಸ್ಟಾರ್​ ವಿಕೆಟ್​ ಕೀಪರ್​ ಬ್ಯಾಟರ್​​​ ಫಿಲ್​​ ಸಾಲ್ಟ್​​ ಓಪನಿಂಗ್​ ಮಾಡಲಿದ್ದಾರೆ. ಕ್ಯಾಪ್ಟನ್​ ರಜತ್​ 3ನೇ ಕ್ರಮಾಂಕದಲ್ಲಿ ಬ್ಯಾಟ್​ ಬೀಸಲಿದ್ದಾರೆ. ಮಿಡಲ್​ ಆರ್ಡರ್​ನಲ್ಲಿ ಬಿಗ್ ಹಿಟ್ಟರ್ಸ್​ ಆದ ಲಿಯಾಮ್​ ಲಿವಿಂಗ್​ಸ್ಟೋನ್​, ಜಿತೇಶ್ ಶರ್ಮಾ, ಟಿಮ್ ಡೇವಿಡ್ ಮತ್ತು ಕೃನಾಲ್ ಪಾಂಡ್ಯ ಆಡಲಿದ್ದಾರೆ. ಇಂಡಿಯನ್​ ಯಂಗ್​ ಬ್ಯಾಟರ್​​ ಜಿತೇಶ್ ಶರ್ಮಾ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿಭಾಯಿಸಲಿದ್ದಾರೆ.
ಬೌಲಿಂಗ್​ ವಿಭಾಗದಲ್ಲಿ ಭುವನೇಶ್ವರ್ ಕುಮಾರ್ ಆರ್‌ಸಿಬಿ ತಂಡವನ್ನು ಲೀಡ್​ ಮಾಡಬಹುದು. ಇವರಿಗೆ ಜೋಶ್​ ಹೇಜಲ್​ವುಡ್ ಸಾಥ್​ ನೀಡಬಹುದು​​. ಇವರಿಗೆ ಯಶ್ ದಯಾಳ್ ಮತ್ತು ರಸಿಕ್ ಸಲಾಂ ಬೆಂಬಲ ಇದೆ. ಆಲ್‌ರೌಂಡರ್ ಕೃನಾಲ್ ಪಾಂಡ್ಯಾ ಜತೆಗೆ ಸುಯಾಶ್ ಶರ್ಮಾ ಸ್ಪಿನ್ ದಾಳಿ ನಡೆಸಲಿದ್ದಾರೆ.
ಎಂದಿನಂತೆ ಈ ವರ್ಷವೂ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಮೇಲೆ ಭಾರೀ ನಿರೀಕ್ಷೆ ಇದೆ. ಹಾಗಾಗಿ ಈ ಸಲ ಕಪ್​ ನಮ್ದೇ ಎಂದು ಫ್ಯಾನ್ಸ್​​​ ಮತ್ತೊಮ್ಮೆ ಹೇಳಲು ಶುರು ಮಾಡಿದ್ದಾರೆ. ಈ ಬಾರಿ ಆರ್​​ಸಿಬಿ ತಂಡವನ್ನು ಕ್ಯಾಪ್ಟನ್​ ರಜತ್​ ಪಾಟಿದಾರ್​ ಲೀಡ್​ ಮಾಡುತ್ತಿರೋದು ವಿಶೇಷ.
ಬೆಂಗಳೂರು ಟೀಮ್​ ಹೀಗಿದೆ!
ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ (ಕ್ಯಾಪ್ಟನ್​), ಯಶ್ ದಯಾಳ್, ಲಿಯಾಮ್ ಲಿವಿಂಗ್‌ಸ್ಟೋನ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಜೋಶ್ ಹೇಜಲ್‌ವುಡ್, ರಸಿಕ್ ದಾರ್, ಸುಯಾಶ್ ಶರ್ಮಾ, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ನುವಾನ್ ತುಷಾರ, ಮನೋಜ್ ಭಂಡಗೆ, ಜಾಕೋಬ್ ಬೆಥೆಲ್, ದೇವದತ್ ಪಡಿಕ್ಕಲ್, ಸ್ವಸ್ತಿಕ್ ಚಿಕಾರ, ಲುಂಗಿ ಎನ್‌ಗಿಡಿ, ಅಭಿನಂದನ್ ಸಿಂಗ್, ಮೋಹಿತ್ ರಾಠಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us