/newsfirstlive-kannada/media/post_attachments/wp-content/uploads/2025/05/RAJATH_PATIDAR_SALT.jpg)
ಆರ್ಸಿಬಿ ಪ್ಲೇ ಆಫ್ಗೆ ಹೋಗುತ್ತಾ, ಇಲ್ವಾ ಅನ್ನೋ ಟೆನ್ಶನ್ ಮುಗೀತು. ಇದೀಗ ಪ್ಲೇ ಆಫ್ಗೆ ಎಂಟ್ರಿ ನೀಡಿದ ಬಳಿಕ ಆರ್ಸಿಬಿಗೆ ಮತ್ತೊಂದು ಟೆನ್ಶನ್ ಶುರುವಾಗಿದೆ. ಪಾಯಿಂಟ್ಸ್ ಟೇಬಲ್ನ ಟಾಪ್-2 ಸ್ಥಾನದ ಮೇಲೆ ಆರ್ಸಿಬಿ ಕಣ್ಣಿದೆ. ಆ ಕನಸು ನನಸಾಗಬೇಕಾದ್ರೆ, ಆರ್ಸಿಬಿ ಮುಂದಿನ 2 ಪಂದ್ಯಗಳಲ್ಲಿ ಎದುರಾಗೂ ಅಗ್ನಿಪರೀಕ್ಷೆಗಳನ್ನ ಗೆಲ್ಲಬೇಕಿದೆ. ಆ ಅಗ್ನಿಪರೀಕ್ಷೆ ಏನು?.
2 ಮ್ಯಾಚ್, 5 ಚಾಲೆಂಜ್, ಟಾರ್ಗೆಟ್ ಟಾಪ್-2.!
ಸೀಸನ್-18ರ ಐಪಿಎಲ್ ಮಹತ್ವದ ಘಟ್ಟ ತಲುಪಿದೆ. ಲೀಗ್ ಹಂತದಲ್ಲಿ ಸಾಲಿಡ್ ಪರ್ಫಾಮೆನ್ಸ್ ನೀಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ನಿರೀಕ್ಷೆಯಂತೆ ಪ್ಲೇ ಆಫ್ಗೆ ಎಂಟ್ರಿ ನೀಡಿದೆ. 2 ಪಂದ್ಯ ಬಾಕಿ ಇರುವಂತೆ ಪ್ಲೇ ಆಫ್ಗೆ ಕ್ವಾಲಿಫೈ ಆಗಿ ಕಪ್ ಗೆಲುವಿನತ್ತ ದಿಟ್ಟ ಹೆಜ್ಜೆ ಇಟ್ಟಿರುವ ರೆಡ್ ಆರ್ಮಿ, ಇದೀಗ ಟೇಬಲ್ನ ಮೊದಲ 2 ಸ್ಥಾನದ ಮೇಲೆ ಕಣ್ಣಿಟ್ಟಿದೆ. ಈ ಕನಸಿನ ಹಾದಿಯಲ್ಲಿ ಆರ್ಸಿಬಿ ಮುಂದೆ ಸವಾಲುಗಳ ಬೆಟ್ಟವಿದೆ. ಆ ಸವಾಲುಗಳನ್ನು ಮೆಟ್ಟಿ ನಿಂತರಷ್ಟೇ ಟಾಪ್-2 ಕನಸು ನನಸಾಗಲಿದೆ.
ಆರಂಭಿಕರಿಂದ ಬೇಕಿದೆ ಸಾಲಿಡ್ ಸ್ಟಾರ್ಟ್..!
ಈ ಸೀಸನ್ನಲ್ಲಿ ಆರ್ಸಿಬಿ ಕಂಡ ಸಕ್ಸಸ್ನಲ್ಲಿ ಓಪನರ್ಸ್ ಪಾತ್ರ ಮಹತ್ವದ್ದು. ಮುಂದಿನ ಪಂದ್ಯಗಳಲ್ಲೂ ಓಪನರ್ಸ್ ಸಾಲಿಡ್ ಓಪನಿಂಗ್ ನೀಡಬೇಕಿದೆ. ಶಾರ್ಟ್ ಬ್ರೇಕ್ನ ಬಳಿಕ ಒಂದಾದಾಗ್ತಿರುವ ಫಿಲ್ ಸಾಲ್ಟ್ ಆ್ಯಂಡ್ ವಿರಾಟ್ ಕೊಹ್ಲಿ ಜೋಡಿ ಈ ಹಿಂದಿನಂತೆ ಬೌಲರ್ಗಳನ್ನು ಚಿಂದಿ ಉಡಾಯಿಸಬೇಕಿದೆ. ಆರಂಭದಲ್ಲೇ ಆರ್ಸಿಬಿ ಗೆಲುವಿಗೆ ಭದ್ರಬುನಾದಿ ಹಾಕಬೇಕಿದೆ.
ಮಿಡಲ್ ಆರ್ಡರ್ ಬ್ಯಾಟಿಂಗ್ಗೆ ಬೇಕಿದೆ ಮದ್ದು.!
ಆರ್ಸಿಬಿ ಈ ಸೀಸನ್ನಲ್ಲಿ ಗೆಲುವಿನ ನಾಗಲೋಟದಲ್ಲಿದೆ ನಿಜ. ಆದ್ರೆ, ಆರ್ಸಿಬಿಯ ಮಿಡಲ್ ಆರ್ಡರ್ ಹೇಳಿಕೊಳ್ಳುವಂತಾ ಪರ್ಫಾಮೆನ್ಸ್ ನೀಡಿಲ್ಲ. ಮುಂಬೈ ಎದುರಿನ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದು ಬಿಟ್ರೆ, ನಂತರ ನಾಯಕ ರಜತ್ ಪಾಟಿದಾರ್ ಬಿಗ್ ಇನ್ನಿಂಗ್ಸ್ ಕಟ್ಟಿಲ್ಲ. ಕಳೆದ 7 ಪಂದ್ಯಗಳಿಂದ 78 ರನ್ ಗಳನ್ನಷ್ಟೇ ಗಳಿಸಿದ್ದಾರೆ.
ರಜತ್ ಪಾಟಿದಾರ್ ಮಾತ್ರವಲ್ಲ. ಮ್ಯಾಚ್ ಫಿನಿಷರ್ ಜಿತೇಶ್ ಶರ್ಮಾ ಆಟವೂ ಅಷ್ಟಕ್ಕಷ್ಟೇ. ಕಳೆದ 5 ಇನ್ನಿಂಗ್ಸ್ಗಳಿಂದ 33 ರನ್ಗಳನ್ನಷ್ಟೇ ಗಳಿಸಿರುವ ಜಿತೇಶ್ ಶರ್ಮಾ ಎಚ್ಚೆತ್ತುಕೊಳ್ಳಬೇಕಿದೆ. ಪ್ಲೇ ಆಫ್ಗೂ ಮುನ್ನ ಇವರಿಬ್ಬರ ಕಮ್ಬ್ಯಾಕ್ ತಂಡಕ್ಕೆ ಅತ್ಯಗತ್ಯವಾಗಿದೆ.
ಬದಲಾಗಬೇಕಿದೆ ರಜತ್ ಕ್ಯಾಪ್ಟನ್ಸಿ ಸ್ಟೈಲ್.!
ರಜತ್ ಪಾಟಿದಾರ್ ಬ್ಯಾಟಿಂಗ್ ಮಾತ್ರವಲ್ಲ, ನಾಯಕತ್ವದಲ್ಲೂ ಕೊಂಚ ಬದಲಾವಣೆ ಮಾಡಿಕೊಳ್ಳಬೇಕಿದೆ. ಆನ್ಫೀಲ್ಡ್ನಲ್ಲಿ ಕೂಲ್ ಆ್ಯಂಡ್ ಕಾಮ್ ಆಗಿ ಕಾಣುವ ರಜತ್, ಸ್ಟ್ರಾಟರ್ಜಿ ವಿಚಾರದಲ್ಲಿ ಸಖತ್ ಅಗ್ರೆಸ್ಸಿವ್ ಅನ್ನೋದನ್ನು ಬಿಡಿಸಿ ಹೇಳಬೇಕಿಲ್ಲ. ಆದ್ರೀಗ ಮಹತ್ವದ ಘಟ್ಟದಲ್ಲಿ ನಾಯಕನಾಗಿ ರಜತ್, ರಕ್ಷಣಾತ್ಮಕ ನಡೆ ಅನುಸರಿಬೇಕಿದೆ. ಬಿಗ್ ಸ್ಟೇಜ್ನಲ್ಲಿ ಎದುರಾಗೂ ಫ್ರೆಷರ್ ಹಾಗೂ ಗೊಂದಲಗಳನ್ನ ಕೇರ್ಫುಲ್ ಆಗಿ ಹ್ಯಾಂಡಲ್ ಮಾಡಬೇಕಿದೆ.
ಇದನ್ನೂ ಓದಿ: ತಿಂಗಳಿಗೆ 40 ಲಕ್ಷ ರೂಪಾಯಿ ಜೀವನಾಂಶ.. ನಟ ಜಯಂ ರವಿಗೆ ಭಾರೀ ಬೇಡಿಕೆ ಇಟ್ಟ ಹೆಂಡತಿ ಆರತಿ
ಡೆತ್ ಓವರ್ ಬೌಲಿಂಗ್ ವಿಭಾಗಕ್ಕೆ ಬೇಕಿದೆ ಜೋಶ್.!
ರಾಜಸ್ಥಾನ, ಚೆನ್ನೈ ಎದುರು ಆರ್ಸಿಬಿ ಗೆಲುವಿಗೆ ಮೇನ್ ರೀಸನ್ ಡೆತ್ ಓವರ್ಗಳಲ್ಲಿ ಬೌಲರ್ಸ್ ಮಾಡಿದ ಕರಾಮತ್ತು. ಇದೀಗ ಮಹತ್ವದ ಘಟ್ಟದಲ್ಲಿ ಪ್ರಮುಖ ವೇಗಿ ಜೋಶ್ ಹೇಜಲ್ವುಡ್ ಅಲಭ್ಯತೆ ಎದುರಾಗಿದೆ. ಹೇಜ್ಲ್ವುಡ್ ಅಲಭ್ಯತೆಯಲ್ಲಿ ಭುವನೇಶ್ವರ್ ಕುಮಾರ್ ಬೌಲಿಂಗ್ ವಿಭಾಗದ ಜೋಶ್ ಹೆಚ್ಚಿಸಬೇಕಿದೆ. ಯಶ್ ದಯಾಳ್, ಲುಂಗಿ ಎನ್ಗಿಡಿ ಜೊತೆಗೆ ಬೌಲಿಂಗ್ನಲ್ಲೂ ಗ್ರೇಟ್ ಪಾರ್ಟನರ್ಶಿಪ್ ಮಾಡಬೇಕಿದೆ.
ಲಕ್ನೋದಲ್ಲಿರೋ 2 ಪಂದ್ಯಗಳಲ್ಲಿ ಗೆಲುವು ಅನಿವಾರ್ಯ.!
ಸದ್ಯ ಆರ್ಸಿಬಿ, ಮುಂದಿನ 2 ಮ್ಯಾಚ್ ಲಕ್ನೋದಲ್ಲೇ ನಡೆಯಲಿದೆ. ಎಕಾನ ಮೈದಾನದಲ್ಲಿ ಆಡ್ತಾ ಇರೋದು ಆರ್ಸಿಬಿ ಪಾಲಿಗೆ ಒಂದು ಲೆಕ್ಕದಲ್ಲಿ ಅಡ್ವಾಂಟೇಜೇ.! ಹೋಮ್ಗ್ರೌಂಡ್ನಲ್ಲಿ ಗೆಲುವಿಗೆ ತಡಕಾಡಿದ್ದ ಆರ್ಸಿಬಿ ತವರಿನಾಚೆ ಸಖತ್ ಪರ್ಫಾಮೆನ್ಸ್ ನೀಡಿದೆ. ಇದೀಗ ಲಕ್ನೋದಲ್ಲೂ ಆರ್ಸಿಬಿ 3 ವಿಭಾಗಗಳಲ್ಲಿ ಸಂಘಟಿತ ಹೋರಾಟ ನಡೆಸಬೇಕಿದೆ. ಒಗ್ಗಟ್ಟಿನ ಮಂತ್ರ ಜಪಿಸಿದ್ರೆ ಎರಡಕ್ಕೆ ಎರಡೂ ಮ್ಯಾಚ್ ಗೆಲ್ಲೋದು ಕಷ್ಟವೇನಿಲ್ಲ. ಪಾಯಿಂಟ್ ಟೇಬಲ್ನ ಟಾಪ್-2 ಸ್ಥಾನದ ಕನಸೂ ನನಸಾಗುವುದರಲ್ಲಿ ಡೌಟೇ ಇಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ