ಟಾಸ್ ಗೆದ್ದವನೇ ಬಾಸು.. ಆರ್​ಸಿಬಿ ಪ್ಲೇಯಿಂಗ್-11ನಲ್ಲಿ ಭಾರೀ ಬದಲಾವಣೆ ನಿರೀಕ್ಷೆ..!

author-image
Bheemappa
Updated On
ಚಿನ್ನಸ್ವಾಮಿಯಲ್ಲಿ ಸತತ 2ನೇ ಸೋಲು.. ಪಿಚ್ ಕ್ಯೂರೇಟರ್ ಹೊಣೆ ಮಾಡಿದ ಮ್ಯಾನೇಜ್ಮೆಂಟ್..!
Advertisment
  • ಮುಂಬೈ ವರ್ಸಸ್​ ಆರ್​ಸಿಬಿ ಎರಡರಲ್ಲೂ ಹೆಚ್ಚು ಪಂದ್ಯ ಗೆದ್ದವರು?
  • ಆರ್​ಸಿಬಿ ಪ್ಲೇಯಿಂಗ್-11ರಲ್ಲಿ ಭಾರೀ ಬದಲಾವಣೆ ಸಾಧ್ಯತೆ ಇದೆ
  • ಈ ಆಟಗಾರನನ್ನು ಇಂದಿನ ಪಂದ್ಯದಿಂದ ಕೈಬಿಡುತ್ತಾ ಬೆಂಗಳೂರು?

2025ರ ಹೈವೋಲ್ಟೇಜ್ ಮ್ಯಾಚ್ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್​ ನಡುವೆ ನಡೆಯಲಿದೆ. ಈ ಪಂದ್ಯಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಎರಡು ತಂಡಗಳ ಗುರಿ ಗೆಲುವೇ ಆಗಿದ್ದರಿಂದ ಪಂದ್ಯದಲ್ಲಿ ಭಾರೀ ಫೈಪೋಟಿ ಇದೆ. ಹೀಗಾಗಿ ಆರ್​ಸಿಬಿ ಪ್ಲೇಯಿಂಗ್-11ನಲ್ಲಿ ಭಾರೀ ಬದಲಾವಣೆ ನಿರೀಕ್ಷಿಸಲಾಗುತ್ತಿದೆ.

ವಾಂಖೆಡೆ ಸ್ಟೇಡಿಯಂ ಕೆಂಪು ಮಣ್ಣಿನ ಪಿಚ್ ಆಗಿದ್ದರಿಂದ ಬ್ಯಾಟಿಂಗ್ ಸ್ನೇಹಿ ಆಗಿದೆ. ಇದರ ಜೊತೆ ಮೈದಾನ ಕೂಡ ಚಿಕ್ಕದಾಗಿರುವುದರಿಂದ ಬೌಂಡರಿ, ಸಿಕ್ಸರ್​ಗಳು ಬರುವುದು ಸಾಮಾನ್ಯವಾದ ಹಿನ್ನೆಲೆಯಲ್ಲಿ ಬಿಗ್ ಸ್ಕೋರ್ ನಿರೀಕ್ಷೆ ಮಾಡಬಹುದು. 2ನೇ ಬ್ಯಾಟಿಂಗ್​ ಮಾಡುವಾಗ ಮೈದಾನದಲ್ಲಿ ಬೀಳುವ ಇಬ್ಬನಿ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಚೇಸಿಂಗ್ ಮಾಡುವ ತಂಡ ಜಯ ಸಾಧಿಸುವ ಸಾಧ್ಯತೆ ಹೆಚ್ಚಿಗಿದೆ. ಈ ಎಲ್ಲದರಿಂದಾಗಿ ಇಂದಿನ ಪಂದ್ಯಕ್ಕೆ ಟಾಸ್ ಹೆಚ್ಚು ಮುಖ್ಯವಾಗಿರುತ್ತದೆ ಎಂದು ಹೇಳಬಹುದು.

ಇದನ್ನೂ ಓದಿ:ಇಂದು ಪಾಂಡ್ಯ ಟೀಮ್​ಗೆ ಕಾದಿದೆ ಮಾರಿಹಬ್ಬ.. ವಿರಾಟ್ ಕೊಹ್ಲಿ ಬ್ಲಾಕ್​​ಬಸ್ಟರ್ ಇನ್ನಿಂಗ್ಸ್ ಪಕ್ಕಾ!

publive-image

ಮೂರರಲ್ಲಿ ಒಂದು ಪಂದ್ಯ ಸೋತಿರುವ ಆರ್​ಸಿಬಿ ಈ ಮ್ಯಾಚ್ ಗೆಲ್ಲಲೇಬೇಕು ಎಂದು ಪಣತೊಟ್ಟಿದೆ. ಇದರಿಂದ ತಂಡದಲ್ಲಿ ಬದಲಾವಣೆ ನಿರೀಕ್ಷೆ ಮಾಡಬಹುದು. 3ನೇ ಕ್ರಮಾಂಕದಲ್ಲಿ ಕ್ರೀಸ್​ಗೆ ಬರುವ ಕನ್ನಡಿಗ ದೇವದತ್ ಪಡಿಕ್ಕಲ್ ಅವರನ್ನು ಇಂದಿನ ಪಂದ್ಯದಿಂದ ಕೈಬಿಟ್ಟು, ರಸಿಕ್ ದಾರ್​ಗೆ ಅವಕಾಶ ನೀವು ಸಾಧ್ಯತೆ ಇದೆ. ಓಪನರ್ಸ್​ ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ನಾಯಕ ರಜತ್ ಪಾಟಿದಾರ್ ಅವರಂತಹ ಆಟಗಾರರು ಬ್ಯಾಟಿಂಗ್‌ನಲ್ಲಿ ಮಿಂಚುತ್ತಿದ್ದಾರೆ. ಜೋಶ್ ಹ್ಯಾಜಲ್‌ವುಡ್, ಭುವನೇಶ್ವರ್ ಕುಮಾರ್ ಹಾಗೂ ಸುಯಾಶ್ ಶರ್ಮಾ ಬೌಲಿಂಗ್​ನಲ್ಲಿ ಆಕ್ರಮಣಕಾರಿಯಾಗಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇದುವರೆಗೂ 33 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಹೆಚ್ಚು ಬಾರಿ ಮುಂಬೈ ತಂಡ ಮೇಲುಗೈ ಸಾಧಿಸಿದೆ. ಕೇವಲ 14 ಪಂದ್ಯಗಳಲ್ಲಿ ಆರ್​ಸಿಬಿ ಜಯ ಸಾಧಿಸಿದ್ದರೇ, 19 ಮ್ಯಾಚ್​​ಗಳಲ್ಲಿ ಮುಂಬೈ ಜಯಭೇರಿ ಬಾರಿಸಿದೆ. ಮುಂಬೈ ವಿರುದ್ಧ ಆರ್​ಸಿಬಿ ತಂಡ 235 ರನ್​ ಗಳಿಸಿರುವುದು ದೊಡ್ಡ ಸ್ಕೋರ್ ಆಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment