/newsfirstlive-kannada/media/post_attachments/wp-content/uploads/2024/05/SHREYANKA_PATIL_VIRAT.jpg)
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಅದೃಷ್ಟ ಕುಲಾಯಿಸಿದೆ. ಒಂದಾದ ಮೇಲೆ ಒಂದರಂತೆ 6 ಪಂದ್ಯಗಳನ್ನು ಗೆಲ್ಲುವ ಮೂಲಕ ಪ್ಲೇ ಆಫ್ ಆಗಿ ಹೋಗಿದ್ದು ಇನ್ನೇನು ಮುಂದಿನ ಪಂದ್ಯಗಳಲ್ಲಿ ಎದುರಾಳಿಗಳನ್ನು ಸದೆಬಡಿದು ಫೈನಲ್ ಪ್ರವೇಶಿಸಬೇಕಿದೆ. ಎಂ.ಚಿನ್ನಸ್ವಾಮಿಯಲ್ಲಿ ಸ್ಟೇಡಿಯಂನಲ್ಲಿ ಚೆನ್ನೈ ವಿರುದ್ಧ ನಡೆದ ಪಂದ್ಯವನ್ನು ವೀಕ್ಷಿಸಲು ಮಹಿಳಾ ಆರ್ಸಿಬಿ ಆಟಗಾರ್ತಿಯರು ಆಗಮಿಸಿದ್ದರು. ಮ್ಯಾಚ್ ಗೆದ್ದ ಮೇಲೆ ಸ್ಟಾರ್ ಪ್ಲೇಯರ್ ವಿರಾಟ್ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮಾ ಜೊತೆ ಕನ್ನಡತಿ ಶ್ರೇಯಾಂಕ ಪಾಟೀಲ್ ಫೋಟೋಗೆ ಪೋಸ್ ಕೊಟ್ಟಿದ್ದಾರೆ.
ಆರ್ಸಿಬಿ ಮಹಿಳಾ ತಂಡದ ಪ್ಲೇಯರ್ ಆದ ಶ್ರೇಯಾಂಕ ಪಾಟೀಲ್ಗೆ ವಿರಾಟ್ ಕೊಹ್ಲಿ ಎಂದರೆ ಎಲ್ಲಿಲ್ಲದ ಇಷ್ಟವಂತೆ. ಈಗಾಗಲೇ ಈ ಬಗ್ಗೆ ಸಾಕಷ್ಟು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಅದರಂತೆ ನಿನ್ನೆ ಚೆನ್ನೈ ವಿರುದ್ಧದ ಪಂದ್ಯ ವೀಕ್ಷಣೆ ಮಾಡಲು ಶ್ರೇಯಾಂಕ ಪಾಟೀಲ್ ಚಿನ್ನಸ್ವಾಮಿ ಸ್ಟೇಡಿಯಂಗೆ ತೆರಳಿದ್ದರು. ಈ ವೇಳೆ ಬೆಂಗಳೂರು ತಂಡ ಗೆಲುವಿನ ಬಳಿಕ ವಿರಾಟ್ ಕೊಹ್ಲಿ ಹಾಗೂ ಅವರ ಪತ್ನಿ ಅನುಷ್ಕಾ ಶರ್ಮಾರನ್ನ ಶ್ರೇಯಾಂಕ ಪಾಟೀಲ್ ಮೀಟ್ ಮಾಡಿದ್ದಾರೆ. ಅಷ್ಟೇ ಅಲ್ಲ, ಅವರ ಜೊತೆ ಸೆಲ್ಫಿ, ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಸಖತ್ ಖುಷಿ ಪಟ್ಟಿದ್ದಾರೆ.
Our RCB hudugi with the King and Queen ❤️ pic.twitter.com/5vPEB4qRlx
— Pari (@BluntIndianGal)
Our RCB hudugi with the King and Queen ❤️ pic.twitter.com/5vPEB4qRlx
— Pari (@BluntIndianGal) May 18, 2024
">May 18, 2024
ಆರ್ಸಿಬಿ ಪ್ಲೇಯರ್ ಶ್ರೇಯಾಂಕ ಪಾಟೀಲ್ ಬೆಂಗಳೂರಿನ ಗೆಲುವನ್ನು ಸಖತ್ ಆಗಿಯೇ ಸೆಲೆಬ್ರೆಷನ್ ಮಾಡಿದ್ದಾರೆ. ಫಾಫ್ ಪಡೆಯ ಆಟಗಾರರು ಸಿಕ್ಸರ್, ಬೌಂಡರಿ ಸಿಡಿಸಿದಾಗೆಲ್ಲ ಸ್ಟೇಡಿಯಂ ಗ್ಯಾಲರಿಯಲ್ಲಿ ಇದ್ದ ಮಹಿಳಾ ಆಟಗಾರ್ತಿಯರೆಲ್ಲ ಕುಣಿದು ಕುಪ್ಪಳಿಸಿದ್ದಾರೆ. ನಿರ್ಣಾಯಕ ಪಂದ್ಯದಲ್ಲಿ ಬೆಂಗಳೂರು ತಂಡಕ್ಕೆ ಸಪೋರ್ಟ್ ಮಾಡಲು ಆರ್ಸಿಬಿ ಮಹಿಳಾ ತಂಡದ ನಾಯಕಿ ಸ್ಮೃತಿ ಮಂದಾನ, ಆಶಾ ಸೋಭಾನಾ ಹಾಗೂ ಡೆಲ್ಲಿ ಟೀಮ್ ಆಟಗಾರ್ತಿ ಜೆಮಿಮಾ ರಾಡ್ರಿಗಸ್ ಆಗಮಿಸಿದ್ದರು. ಹೈವೋಲ್ಟೇಜ್ ಮ್ಯಾಚ್ನಲ್ಲಿ ಬೆಂಗಳೂರು ಗೆಲುವಿನ ದಡ ಸೇರುತ್ತಿದ್ದಂತೆ ಕರ್ನಾಟಕದ್ಯಾಂತ ಸಂಭ್ರಮ ಮುಗಿಲು ಮುಟ್ಟಿತ್ತು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ