ಇನ್ಮೇಲೆ ಆರ್​ಸಿಬಿ ಲೆಕ್ಕಾನೇ ಬೇರೆ.. ಪ್ಲೇ ಆಫ್​ ಎಂಟ್ರಿ ಭವಿಷ್ಯ ಅಷ್ಟು ಸುಲಭ ಇಲ್ಲ..!

author-image
Ganesh
Updated On
RCB vs PBKS: ಪಂಜಾಬ್ ವಿರುದ್ಧದ ಪಂದ್ಯಕ್ಕೂ ಮೊದಲೇ ಶಾಕಿಂಗ್ ನ್ಯೂಸ್..!
Advertisment
  • ಮನೆ ಹೊರಗೆ ಗೆದ್ದ ಆರ್​ಸಿಬಿಗೆ ಹೋಮ್​​ನದ್ದೇ ಟೆನ್ಶನ್..!
  • ರಾಯಲ್ ಚಾಲೆಂಜರ್ಸ್​ ಮುಂದಿದೆ ‘ಹೋಮ್​ ಚಾಲೆಂಜ್’
  • ‘ಚಿನ್ನಸ್ವಾಮಿ ಚಾಲೆಂಜ್​’ ಗೆದ್ದರಷ್ಟೇ ಚಾಲೆಂಜರ್ಸ್​​ ಸೇಫ್​​​​..!

4 ಗೆಲುವು.. 2 ಸೋಲು.. ಇದು ಈ ಸೀಸನ್​​ನಲ್ಲಿ ಆರ್​ಸಿಬಿಯ ಆಟದ ಸಿಂಪಲ್​ ಲೆಕ್ಕಾಚಾರ. ಪಿಎಲ್​ನಲ್ಲಿ ಫಸ್ಟ್ ಹಾಫ್ ಮುಗಿಸಲು ಸನ್ನದ್ಧರಾಗಿರುವ ಆರ್​ಸಿಬಿ ಇದೀಗ ಬೆಂಗಳೂರು ಚಾಲೆಂಜ್ ಗೆಲ್ಲಬೇಕಿದೆ. ತವರಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ ಪರದಾಡಿರೋ ರೆಡ್ ಆರ್ಮಿ ಮುಂದೆ ಈಗ ಸಾಲು ಸಾಲು ಅಗ್ನಿಪರೀಕ್ಷೆಗಳಿವೆ. ಆ ಚಾಲೆಂಜ್​ ಗೆದ್ದರಷ್ಟೇ ಆರ್​ಸಿಬಿ ಸೇಫ್​​.

ಕೊಲ್ಕತ್ತಾ, ಚೆನ್ನೈ, ಮುಂಬೈ, ರಾಜಸ್ಥಾನ್.. ಹೀಗೆ ನಾಲ್ಕಕ್ಕೇ ನಾಲ್ಕು ಅವೇ ಮ್ಯಾಚ್ ಗೆದ್ದಿರುವ ಆರ್​ಸಿಬಿ ಐಪಿಎಲ್​ ರಣರಂಗದಲ್ಲಿ ಅದ್ಭುತ ಪ್ರದರ್ಶನ ನೀಡ್ತಿದೆ. ಎದುರಾಳಿಗಳ ಮೇಲೆ ದಂಡಯಾತ್ರೆ ಮಾಡ್ತಿದೆ. ಅವೇ ಮ್ಯಾಚ್​ಗಳಲ್ಲಿ ಡಾಮೀನೇಟಿಂಗ್ ಪರ್ಫಾಮೆನ್ಸ್ ನೀಡ್ತಿರೋ ಆರ್​​ಸಿಬಿ ಹೋಮ್ ಕಂಡೀಷನ್ಸ್​ನಲ್ಲಿ ಕಂಪ್ಲೀಟ್​ ಉಲ್ಟಾ ಇದೆ.

ಇದನ್ನೂ ಓದಿ: ಡೆಲ್ಲಿ ಕ್ಯಾಪಿಟಲ್ಸ್​ ಮೊದಲ ಸೋಲಿನ ಬೆನ್ನಲ್ಲೇ ಕ್ಯಾಪ್ಟನ್​ ಅಕ್ಷರ್​ ಪಟೇಲ್​ಗೆ ಬಿಗ್ ಶಾಕ್

publive-image

ಸೋಲಿಲ್ಲದ ಸರದಾರನಾಗಿ ಮೆರೆದಾಡ್ತಿರುವ ಆರ್​ಸಿಬಿ ಆಡಿದ 2 ಪಂದ್ಯಗಳಲ್ಲೂ ತವರಿನಲ್ಲಿ ಮುಂಖಭಂಗ ಅನುಭವಿಸಿದೆ. ಗುಜರಾತ್, ಡೆಲ್ಲಿ ಎದುರು ಹೀನಾಯ ಸೋಲು ಅನುಭವಿಸಿದೆ. ಇದೀಗ ಜೈಪುರದಲ್ಲಿ ವಿಜಯ ಸಾಧಿಸಿ ಮತ್ತೆ ತವರಿಗೆ ಆಗಮಿಸಿರುವ ಆರ್​ಸಿಬಿ ಹಾಗೂ ಆರ್​ಸಿಬಿ ಅಭಿಮಾನಿಗಳಿಗೆ ಬೆಂಗಳೂರಿನದ್ದೇ ಟೆನ್ಶನ್, ಟೆನ್ಶನ್.

ಆರ್​ಸಿಬಿಗೆ ಹೋಮ್ ಚಾಲೆಂಜ್ ಟೆನ್ಶನ್..!

ಟೂರ್ನಿಯಲ್ಲಿ ಆಡಿರೋ 6ರಲ್ಲಿ 4 ಪಂದ್ಯ ಗೆದ್ದಿರುವ ಆರ್​ಸಿಬಿಗೆ ಮುಂದಿನ 8 ಪಂದ್ಯಗಳೂ ಮಹತ್ವದ್ದಾಗಿದೆ. ಅವೇ ಮ್ಯಾಚಸ್​​ನಲ್ಲಿ ಗೆದ್ದು​, ತವರಲ್ಲೇ ಸೋತಿರುವ ಆರ್​ಸಿಬಿ, ಬೆಂಗಳೂರಿನಲ್ಲೇ ಮುಂದಿನ 5 ಪಂದ್ಯಗಳನ್ನಾಡಲಿದೆ. ಈ ಹೋಮ್​ ಮ್ಯಾಚ್​ಗಳೇ ರೆಡ್ ಆರ್ಮಿಯ ಅಳಿವು ಉಳಿವು ನಿರ್ಧರಿಸಲಿದೆ. ಹೀಗಾಗಿ ಈ ಸವಾಲನ್ನ ಹೇಗೆ ಮೆಟ್ಟಿ ನಿಲ್ಲುತ್ತೆ ಎಂಬ ಪ್ರಶ್ನೆ ಕಾಡ್ತಿದೆ.

ಇದನ್ನೂ ಓದಿ: ಕನ್ನಡ ಡಿಜಿಟಲ್ ಮಾಧ್ಯಮ ಲೋಕದ ಹಿರಿಯ ಪತ್ರಕರ್ತ ಎಸ್​​.ಕೆ. ಶ್ಯಾಮಸುಂದರ್ ನಿಧನ

publive-image

ಗೆದ್ದರಷ್ಟೇ ಚಾಲೆಂಜರ್ಸ್​ ಸೇಫ್

ಸೀಸನ್​ನಲ್ಲಿ ಉಳಿದ 8 ಪಂದ್ಯಗಳ ಪೈಕಿ 5 ಪಂದ್ಯಗಳನ್ನು ಆರ್​ಸಿಬಿ, ಹೋಮ್​ ಗ್ರೌಂಡ್ ಚಿನ್ನಸ್ವಾಮಿಯಲ್ಲೇ ಆಡಲಿದೆ. ಇಲ್ಲಿ ಆಡಿದ ಎರಡೂ ಪಂದ್ಯಗಳನ್ನು ಸೋತಿರುವ ರೆಡ್ ಆರ್ಮಿ, ಉಳಿದ ಪಂದ್ಯಗಳಲ್ಲಿ ಕನಿಷ್ಠ ಮೂರು ಮ್ಯಾಚ್ ಗೆಲ್ಲಬೇಕು. ಇದು ಅಂದುಕೊಂಡಷ್ಟು ಸುಲಭ ಇಲ್ಲ. ಚಿನ್ನಸ್ವಾಮಿಯಲ್ಲಿ ಪಂಜಾಬ್ ಕಿಂಗ್ಸ್, ಸನ್ ರೈರ್ಸರ್ಸ್ ಹೈದ್ರಾಬಾದ್​​ನಂಥ ಬಲಿಷ್ಠ ತಂಡಗಳ ಸವಾಲು ಎದುರಾಗಲಿದೆ. ಇವುಗಳ ಜೊತೆಗೆ ರಾಜಸ್ಥಾನ್ ರಾಯಲ್ಸ್, ಚೆನ್ನೈ ಸೂಪರ್ ಕಿಂಗ್ಸ್, ಕೊಲ್ಕತ್ತಾ ನೈಟ್​ ರೈಡರ್ಸ್ ತಂಡಗಳು ಚಿನ್ನಸ್ವಾಮಿಯಲ್ಲಿ ಆರ್​ಸಿಬಿಗೆ ಸವಾಲೊಡ್ಡಲಿವೆ. ಬಲಿಷ್ಟ ಬ್ಯಾಟಿಂಗ್​ ಲೈನ್​ ಅಪ್​ ಹೊಂದಿರೋ ಈ ತಂಡಗಳನ್ನ ಕಟ್ಟಿ ಹಾಕೋದು ಅಂದುಕೊಂಡಷ್ಟು ಸುಲಭವಿಲ್ಲ.

ಮನೆ ಹೊರಗೂ ಕಠಿಣ ಸವಾಲು..!

ಸದ್ಯ ತವರಿನ ಅಂಗಳದಾಚೆ ಆಡಿರೋ 4 ಪಂದ್ಯಗಳನ್ನು ಗೆದ್ದಿರುವ ಆರ್​ಸಿಬಿಗೆ ಇನ್ನುಳಿದ 3 ಪಂದ್ಯಗಳಲ್ಲಿ ಕಠಿಣ ಸವಾಲು ಎದುರಾಗಿದೆ. ಪಂಜಾಬ್ ಕಿಂಗ್ಸ್​, ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಜೈಂಟ್ಸ್​ನಂತ ಬಲಿಷ್ಟ ತಂಡಗಳನ್ನ ಅವೇ ಕಂಡೀಷನ್ಸ್​ನಲ್ಲಿ ಎದುರಿಸಲಿದೆ. ಹೋಮ್​ಗ್ರೌಂಡ್​​ನಲ್ಲಿ ಸಾಲಿಡ್​ ಪರ್ಫಾಮೆನ್ಸ್​ ನೀಡುತ್ತಿರೋ ಈ ತಂಡಗಳನ್ನ ಸೋಲಿಸೋದು ಕಷ್ಟದ ವಿಚಾರವೇ.

ತವರಿನ ಅಂಗಳದಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಏರಿಕೆ ಕಾಣಬೇಕಿದ್ದ ಆರ್​ಸಿಬಿ, ಹೋಮ್​ಗ್ರೌಂಡ್​ನಲ್ಲೇ ಪರದಾಟ ನಡೆಸಿದೆ. ಮೊದಲ 2 ಪಂದ್ಯಗಳಲ್ಲಿ ಮುಗ್ಗರಿಸಿದ ಆರ್​​ಸಿಬಿ ಇದೀಗ ಪಂಜಾಬ್ ಕಿಂಗ್ಸ್​ ಎದುರಿನ ಪಂದ್ಯದೊಂದಿಗೆ ತವರಿನಲ್ಲಿ ಮೂರನೇ ಅಗ್ನಿಪರೀಕ್ಷೆಗೆ ಇಳಿಯುತ್ತಿದೆ. ಈ ಸವಾಲನ್ನ ಗೆಲ್ಲುವಲ್ಲಿ ಎಷ್ಟರ ಮಟ್ಟಿಗೆ ಸಕ್ಸಸ್ ಕಾಣುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

ಇದನ್ನೂ ಓದಿ: ಜೈಲಿಗೆ ಹೋಗಿ ಬಂದರೂ ಮಚ್ಚಿನ ರೀಲ್ಸ್​ ಇನ್ನೂ ಡಿಲೀಟ್ ಆಗಿಲ್ಲ.. ರಜತ್ ವಿರುದ್ಧ ಭಾರೀ ಆಕ್ರೋಶ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment