/newsfirstlive-kannada/media/post_attachments/wp-content/uploads/2025/04/KOHLI_KRUNAL.jpg)
2025ರ ಐಪಿಎಲ್ನ 19 ಪಂದ್ಯ ಇಂದು ಸನ್ ರೈಸರ್ಸ್ ಹೈದ್ರಾಬಾದ್ ಹಾಗೂ ಗುಜರಾತ್ ಟೈಟನ್ಸ್ ನಡುವೆ ನಡೆಯಲಿದೆ. ಸತತ ಸೋಲುಗಳಿಂದ ಕಂಗೆಟ್ಟ ಹೈದ್ರಾಬಾದ್ ಗೆಲುವನ್ನು ಎದುರು ನೋಡುತ್ತಿದೆ. ಸ್ಫೋಟಕ ಬ್ಯಾಟ್ಸ್ಮನ್ಗಳು ಇದ್ದರೂ ಎಸ್ಆರ್ಹೆಚ್ ಸೋಲಿನ ಸುಳಿಯಲ್ಲಿ ಸಿಕ್ಕಿದೆ. 300 ರನ್ಗಳ ಟಾರ್ಗೆಟ್ ಗುರಿ ಇಟ್ಟುಕೊಂಡ ಕಮಿನ್ಸ್ 150 ರನ್ಗಳ ಗಡಿ ದಾಟಲು ಈಗ ಸುಸ್ತಾಗುತ್ತಿದೆ. ಇಂದಿನ ಪಂದ್ಯದಲ್ಲಿ ಪ್ರದರ್ಶನ ಹೇಗೆ ನೀಡಲಿದೆ ಎಂದು ಕಾದು ನೋಡಬೇಕಿದೆ.
ಹೈದ್ರಾಬಾದ್ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಸಂಜೆ 7:30ಕ್ಕೆ ಮುಖಾಮುಖಿ ಆಗುತ್ತಿವೆ. ಸತತ ಸೋಲುಂಡಿರುವ ಸನ್ ರೈಸರ್ಸ್, ತವರಿನಲ್ಲಿ ಗೆಲುವಿನ ಹಳಿಗೇರುವ ಲೆಕ್ಕಚಾರದಲ್ಲಿದೆ. ಇತ್ತ ಗುಜರಾತ್ ಟೈಟನ್ಸ್ ಗೆಲುವಿನ ಓಟ ಮುಂದುವರಿಸುವ ತವಕದಲ್ಲಿದೆ.
ವಾಂಖೆಡೆಯಲ್ಲಿ ಆರ್ಸಿಬಿ ಸಮರಾಭ್ಯಾಸ
ಮುಂಬೈ ಇಂಡಿಯನ್ಸ್ ಎದುರಿನ ಪಂದ್ಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಿದ್ಧತೆ ಜೋರಾಗಿದೆ. ಈಗಾಗಲೇ ಮುಂಬೈನಲ್ಲಿ ಬೀಡು ಬಿಟ್ಟಿರುವ ಆರ್ಸಿಬಿ ಆಟಗಾರರು, ವಾಂಖೆಡೆ ಸ್ಟೇಡಿಯಂನಲ್ಲಿ ಭರ್ಜರಿ ಸಮರಾಭ್ಯಾಸ ನಡೆಸುತ್ತಿದ್ದಾರೆ. ಆರ್ಸಿಬಿ ನಾಯಕ ರಜತ್ ಪಾಟಿದಾರ್, ವಿರಾಟ್ ಕೊಹ್ಲಿ, ಫಿಲಿಪ್ ಸಾಲ್ಟ್, ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ ಸೇರಿದಂತೆ ಎಲ್ಲಾ ಆಟಗಾರರು ನೆಟ್ಸ್ನಲ್ಲಿ ಬೆವರಿಳಿಸುತ್ತಿದ್ದಾರೆ.
ಗ್ರೌಂಡ್ ಸ್ಟಾಫ್ ಜೊತೆ ಕೃನಾಲ್ ಸೆಲ್ಫಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಲ್ರೌಂಡರ್ ಕೃನಾಲ್ ಪಾಂಡ್ಯ ಅಭಿಮಾನಿಗಳ ಮನ ಗೆದ್ದಿದ್ದಾರೆ. ಮುಂಬೈ ಇಂಡಿಯನ್ಸ್ ಎದುರಿನ ಪಂದ್ಯಕ್ಕಾಗಿ ವಾಂಖೆಡೆಯಲ್ಲಿ ಆರ್ಸಿಬಿ ಕಠಿಣ ಅಭ್ಯಾಸ ನಡೆಸ್ತಿದೆ. ಆದ್ರೆ, ಈ ನಡುವೆ ಕೃನಾಲ್ ಪಾಂಡ್ಯ, ವಾಂಖೆಡೆಯ ಗ್ರೌಂಡ್ ಸ್ಟಾಫ್ ಜೊತೆ ಸೆಲ್ಫಿ ತೆಗೆದುಕೊಂಡು ಸರಳತೆ ಮೆರೆದಿದ್ದಾರೆ. ಸದ್ಯ ಕೃನಾಲ್ ಪಾಂಡ್ಯರ ಈ ವಿಡಿಯೋವನ್ನು ಆರ್ಸಿಬಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
ಪವರ್ ಕಟ್.. ಫ್ಲಡ್ ಲೈಟ್ ಆಫ್.. ಉದ್ವಿಗ್ನ..!
ನ್ಯೂಜಿಲೆಂಡ್, ಪಾಕಿಸ್ತಾನ ನಡುವಿನ ಪಂದ್ಯ ಆಘಾತಕಾರಿ ಘಟನೆಗೆ ಸಾಕ್ಷಿಯಾಗಿದೆ. ಪಾಕ್ ಇನ್ನಿಂಗ್ಸ್ನ 39ನೇ ಓವರ್ನಲ್ಲಿ ಕಿವೀಸ್ ವೇಗಿ ಜಾಕೋಬ್ ಡಫಿ ಬೌಲಿಂಗ್ ಮಾಡುತ್ತಿದ್ದಾಗ ಫ್ಲಡ್ ಲೈಟ್‌ಗಳು ಇದ್ದಕ್ಕಿದ್ದಂತೆ ಆಫ್ ಆಗಿವೆ. ಇದರಿಂದ ಮೈದಾನದಲ್ಲಿ ಕೆಲ ಕಾಲ ಉದ್ವಿಗ್ನತೆ ಉಂಟಾಗಿತ್ತು. ಆದ್ರೆ, ಪಾಕ್ ಬ್ಯಾಟರ್ ತಯ್ಯಬ್ ತಾಹಿರ್, ಪ್ಲಡ್ ಲೈಟ್ ಆಫ್ ಆಗುತ್ತಿದ್ದಂತೆ ಪಕ್ಕಕ್ಕೆ ಸರಿದಿದ್ದಾರೆ. ಇದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ.
ಇದನ್ನೂ ಓದಿ: ಚೆನ್ನೈ ನೆಲದಲ್ಲಿ ಕನ್ನಡಿಗನ ಅಬ್ಬರ.. KL ರಾಹುಲ್ ಅರ್ಧಶತಕ, ಸಿಎಸ್ಕೆಗೆ ದೊಡ್ಡ ಸವಾಲು
ಪಾಕ್ಗೆ ಕ್ಲೀನ್ಸ್ವೀಪ್ ಮುಖಭಂಗ
ನ್ಯೂಜಿಲೆಂಡ್ ಎದುರಿನ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಕ್ ವೈಟ್ವಾಶ್ ಮುಖಭಂಗ ಅನುಭವಿಸಿದೆ. ಓವಲ್ನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿ ಕಿವೀಸ್, ನಿಗದಿತ 42 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 264 ರನ್ ಗಳಿಸಿತ್ತು. ಈ ಟಾರ್ಗೆಟ್ ಬೆನ್ನಟ್ಟಿದ ಪಾಕ್, 40 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 221 ರನ್ಗೆ ಆಲೌಟ್ ಆಯ್ತು. ಇದರೊಂದಿಗೆ ಕಿವೀಸ್, 3-0 ಅಂತರದಿಂದ ಸರಣಿ ಕೈವಶ ಮಾಡಿಕೊಂಡಿದೆ.
ಅಭಿಮಾನಿ ಜೊತೆ ಖುಶ್ದಿಲ್ ಶಾ ಫೈಟ್
ಪಾಕಿಸ್ತಾನದ ಆಟಗಾರ ಖುಶ್ದಿಲ್ ಶಾ ಅಭಿಮಾನಿಗಳ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಸ್ಟಾರ್ ಆಟಗಾರರಿಲ್ಲದ ನ್ಯೂಜಿಲೆಂಡ್ ಎದುರಿನ ಸೋಲಿಗೆ ಕೋಪಗೊಂಡಿದ್ದ ಪಾಕ್ ಅಭಿಮಾನಿ, ಪಾಕ್ ಆಟಗಾರರನ್ನು ಹೀಯಾಳಿಸಿದ್ದಾರೆ. ಇದಕ್ಕೆ ತಾಳ್ಮೆ ಕಳೆದುಕೊಂಡ ಖುಶ್ದಿಲ್ ಶಾ, ಬ್ಯಾರಿಕೇಡ್ ಹತ್ತಿ ಅಭಿಮಾನಿ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಖುಶ್ದಿಲ್ ಶಾನ ತಡೆದ ಸೆಕ್ಯುರಿಟಿ ಸಿಬ್ಬಂದಿ, ಅಲ್ಲಿದ್ದ ಪ್ರೇಕ್ಷಕರನ್ನು ಹೊರಗೆ ಕಳುಹಿಸಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ