/newsfirstlive-kannada/media/post_attachments/wp-content/uploads/2025/04/Devdutt_Padikkal_1.jpg)
ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಂದು ಮುಂಬೈ ಇಂಡಿಯನ್ಸ್ ಜೊತೆ 4ನೇ ಪಂದ್ಯವಾಡಲೂ ಎಲ್ಲ ರೀತಿಯಿಂದ ಸಿದ್ಧತೆ ಮಾಡಿಕೊಂಡಿದೆ. ಕೊನೆ ಪಂದ್ಯ ಗುಜರಾತ್ ಟೈಟನ್ಸ್ ಜೊತೆ ಮುಖಭಂಗ ಅನುಭವಿಸಿದ್ದರಿಂದ ಮುಂಬೈ ವಿರುದ್ಧ ಗೆಲಲ್ಲು ರಜತ್ ಪಡೆ ಭಾರೀ ಪ್ಲಾನ್ಗಳನ್ನು ರೂಪಿಸಿದೆ. ಇದರಲ್ಲಿ ಒಂದಾದ ದೇವದತ್ ಪಡಿಕ್ಕಲ್ ಅವರನ್ನು ಪಂದ್ಯದಿಂದ ಹೊರಗಿಡಲು ಯೋಜಿಸಲಾಗಿದೆ.
ವಾಂಖೆಡೆಯಲ್ಲಿ ಸಂಜೆ 7:30ಕ್ಕೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಈ ಮ್ಯಾಚ್ನಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್ ಅವರನ್ನು ಹೊರಗಿಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಏಕೆಂದರೆ ದೇವದತ್ ಪಡಿಕ್ಕಲ್ಗೆ ಈಗಾಗಲೇ ಮೂರು ಪಂದ್ಯಗಳಲ್ಲಿ ಅವಕಾಶ ಕೊಡಲಾಗಿದೆ. ಈ ಮೂರರಲ್ಲೂ ಪಡಿಕ್ಕಲ್ ಬ್ಯಾಟಿಂಗ್ನಲ್ಲಿ ವಿಫಲರಾಗಿದ್ದಾರೆ. ಕೇವಲ 41 ರನ್ಗಳು ಮಾತ್ರ ಗಳಿಸಿರುವುದು ಅವರ ವಿಫಲ ಬ್ಯಾಟಿಂಗ್ ಪರ್ಫಾಮೆನ್ಸ್ ತೋರಿಸುತ್ತಿದೆ.
ಇದನ್ನೂ ಓದಿ:ಇಂದು ಪಾಂಡ್ಯ ಟೀಮ್ಗೆ ಕಾದಿದೆ ಮಾರಿಹಬ್ಬ.. ವಿರಾಟ್ ಕೊಹ್ಲಿ ಬ್ಲಾಕ್ಬಸ್ಟರ್ ಇನ್ನಿಂಗ್ಸ್ ಪಕ್ಕಾ!
ಆರ್ಸಿಬಿ ಬ್ಯಾಟಿಂಗ್ ಲೈನ್ ಅಪ್ನಲ್ಲಿ 3ನೇ ಕ್ರಮಾಂಕದಲ್ಲಿ ಕ್ರೀಸ್ಗೆ ಬರುವ ಪಡಿಕ್ಕಲ್ ಹೀಗೆ ಬಂದು ಹಾಗೇ ಹೋಗುತ್ತಿದ್ದಾರೆ. ಕೋಲ್ಕತ್ತಾ ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ ಪಡಿಕ್ಕಲ್ ಕೇವಲ 10 ರನ್ಗೆ ವಿಕೆಟ್ ಒಪ್ಪಿಸಿದ್ದರು. ಇದಾದ ಮೇಲೆ ಚೆನ್ನೈ ಸೂಪರ್ ಕಿಂಗ್ಸ್ ಜೊತೆ ಆಡುವಾಗ ಕೊಂಚ ಅಬ್ಬರಿಸಿದ್ದಾದರೂ 2 ಫೋರ್, 2 ಸಿಕ್ಸರ್ ಇಂದ 14 ಎಸೆತಗಳಲ್ಲಿ 27 ರನ್ ಬಾರಿಸಿದ್ದರು. ಇದರ ನಂತರ ಗುಜರಾತ್ ವಿರುದ್ಧ ತವರಿನಲ್ಲಿ ನಡೆದ ಪಂದ್ಯದಲ್ಲಿ ಕೇವಲ 4 ರನ್ಗೆ ಔಟ್ ಆಗಿರುವುದು ಅಭಿಮಾನಿಗಳಿಗೆ ಭಾರೀ ಬೇಸರ ಮೂಡಿಸಿತ್ತು.
ದೇವದತ್ ಪಡಿಕ್ಕಲ್ ಅವರ ಸ್ಟ್ರೈಕ್ ರೇಟ್ ಹಾಗೂ ಸ್ಕೋರಿಂಗ್ ಸಾಮರ್ಥ್ಯದ ಬಗ್ಗೆ ತಂಡದಲ್ಲಿ ಕಳವಳಗಳಿವೆ. ಒಂದು ವೇಳೆ ಮುಂಬೈ ಜೊತೆಗಿನ ಇಂದಿನ ಪಂದ್ಯದಲ್ಲಿ ಚಾನ್ಸ್ ಕೊಟ್ಟರೇ ಪಡಿಕ್ಕಲ್ ತನ್ನ ಫಾರ್ಮ್ ಅನ್ನು ಮರಳಿ ಪಡೆಯಲು ಮತ್ತೊಂದು ಅವಕಾಶ ಸಿಕ್ಕಂತೆ ಆಗುತ್ತದೆ. ಇದನ್ನು ಚೆನ್ನಾಗಿ ಉಪಯೋಗಿಸಿಕೊಂಡರೆ ತಂಡದಲ್ಲಿ ಮುಂದಿನ ದಿನಗಳಲ್ಲಿ ಸ್ಥಾನ ಸಿಗಬಹುದು. ಇಲ್ಲದಿದ್ದರೇ ರಸಿಕ್ ದಾರ್ ಅಥವಾ ಬದಲಿ ಆಟಗಾರರಿಗೆ ಫ್ರಾಂಚೈಸಿ ಅವಕಾಶ ನೀಡಬಹುದು ಎನ್ನಲಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ