/newsfirstlive-kannada/media/post_attachments/wp-content/uploads/2025/05/JITESH_RCB.jpg)
- ಕ್ವಾಲಿಫೈಯರ್- 1ರಲ್ಲೇ ಗೆಲ್ಲುವುದು ಆರ್ಸಿಬಿ ಇಂಪಾರ್ಟೆಂಟ್
- ಲಕ್ನೋ ತಂಡದ ವಿರುದ್ಧ ದೊಡ್ಡ ಜಯ ದಾಖಲಿಸಿದ ಆರ್ಸಿಬಿ
- ಕ್ವಾಲಿಫೈಯರ್- 2ರಲ್ಲಿ ಆಡಿದ್ರೆ ಆರ್ಸಿಬಿಗೆ ಏನ್ ಸಮಸ್ಯೆ ಆಗುತ್ತೆ?
2025ರ ಐಪಿಎಲ್ ಸೀಸನ್​- 18ರಲ್ಲಿ ಲೀಗ್​ ಪಂದ್ಯದಲ್ಲಿ ಮೊದಲು ಗೆದ್ದಿರುವುದು ಹಾಗೂ ಕೊನೆ ಪಂದ್ಯದಲ್ಲಿ ಗೆದ್ದಿರುವ ಖ್ಯಾತಿಗೆ ರಾಯಲ್ ಚಾಲೇಂಜರ್ಸ್​ ಬೆಂಗಳೂರು ಟೀಮ್ ಪಾತ್ರವಾಗಿದೆ. ರಿಷಭ್ ಪಂತ್ ನೇತೃತ್ವದ ಲಕ್ನೋ ತಂಡದ ವಿರುದ್ಧ ದೊಡ್ಡ ಜಯ ದಾಖಲಿಸಿದ ಆರ್​ಸಿಬಿ ಕ್ವಾಲಿಫೈಯರ್​-1ಗೆ ಎಂಟ್ರಿ ಕೊಟ್ಟಿದ್ದು ಫೈನಲ್​ಗೆ ಇನ್ನೊಂದೆ ಹೆಜ್ಜೆ ಬಾಕಿ ಇದೆ.
ಚಂಡೀಗಢ ಮುಲ್ಲನಪುರದ ನ್ಯೂ ಪಿಸಿಎ ಸ್ಟೇಡಿಯಂನಲ್ಲಿ ಮೇ 29ರಂದು ಕ್ವಾಲಿಫೈಯರ್​- 1ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಆರ್​ಸಿಬಿ ತಂಡ ಅಖಾಡಕ್ಕೆ ಧುಮುಕಲಿದೆ. ಈ ಪಂದ್ಯವನ್ನು ಸೋತರೂ ಆರ್​ಸಿಬಿಗೆ ಕ್ವಾಲಿಫೈಯರ್​- 2ರಲ್ಲಿ ಆಡುವ ಇನ್ನೊಂದು ಅವಕಾಶ ಇರುತ್ತದೆ. ಆದರೆ ಆರ್​ಸಿಬಿ ಇನ್ನೊಂದು, ಮತ್ತೊಂದು ಎಂದು ಅವಕಾಶ ನೋಡದೇ ಕ್ವಾಲಿಫೈಯರ್​- 1ರ ಪಂದ್ಯದಲ್ಲೇ ಕಠಿಣ ಪ್ರದರ್ಶನ ನೀಡಿ, ಗೆದ್ದು ನೇರವಾಗಿ ಫೈನಲ್​ಗೆ ಎಂಟ್ರಿ ಕೊಡುವುದು ಉತ್ತಮ. ಒಂದು ವೇಳೆ ಸೋತರೇ..!
ಗುಜರಾತ್ ಹಾಗೂ ಮುಂಬೈ ಇಂಡಿಯನ್ಸ್​ ಎಲಿಮಿನೇಟರ್ ಪಂದ್ಯ ಆಡಲಿವೆ. ಈ ಎಲಿಮಿನೇಟರ್ ಪಂದ್ಯದಲ್ಲಿ ವಿಜಯ ಸಾಧಿಸಿದ ತಂಡದ ಜೊತೆ ಆರ್​ಸಿಬಿ ಕಾದಟ ಮಾಡಬೇಕಿರುತ್ತದೆ. ಇಲ್ಲಿ ಕೇವಲ 2 ದಿನಗಳ ವಿಶ್ರಾಂತಿ ಸಿಗುವುದರಿಂದ ಇದು ಆಟಗಾರರಿಗೆ ಕಠಿಣವಾಗುತ್ತದೆ. ಏಕೆಂದರೆ ಈಗಾಗಲೇ ಲಕ್ನೋ ವಿರುದ್ಧ ಗೆದ್ದು ಒಂದು ದಿನದ ನಂತರ ಕ್ವಾಲಿಫೈಯರ್​- 1ರಲ್ಲಿ ಆಡಿರುತ್ತದೆ. ಇದಾದ ಮತ್ತೆ 2 ದಿನದ ಬಳಿಕ ಅಂದರೆ ಜೂನ್​- 1 ರಂದು ಪಂದ್ಯವೆಂದರೆ ಆಟಗಾರರೆಲ್ಲಾ ಧಣಿದಿರುತ್ತಾರೆ. ಗಾಯಗಳಿಂದ ಬಳಲುತ್ತಿರುವ ಆಟಗಾರರು ನಿರೀಕ್ಷಿತ ಪರ್ಫಾಮೆನ್ಸ್ ನೀಡುವುದು ಸುಲಭವಲ್ಲ.
ಇದರಿಂದ ಕ್ವಾಲಿಫೈಯರ್​- 2ರ ಪಂದ್ಯದಲ್ಲಿ ಗೆಲ್ಲಲು ಆರ್​ಸಿಬಿ ಪ್ಲೇಯರ್ಸ್​ ಒತ್ತಡಕ್ಕೆ ಸಿಲುಕಿದಂತೆ ಅಗುತ್ತದೆ. ಈ ವೇಳೆ ಮ್ಯಾಚ್​ ಕೈಜಾರಿ ಹೋದರೂ ದೊಡ್ಡ ನಷ್ಟ ಎದುರಿಸಬೇಕಾಗುತ್ತದೆ. ಹೀಗಾಗಿ ದೊಡ್ಡ ಪ್ಲಾನ್​ನೊಂದಿಗೆ ಆರ್​ಸಿಬಿ ಕ್ವಾಲಿಫೈಯರ್​- 1ರಲ್ಲಿ ಪಂಜಾಬ್​ ಕಿಂಗ್ಸ್​ ಅನ್ನು ಮಣಿಸಿದರೆ ಎಲ್ಲವೂ ಅನುಕೂಲವಾಗುತ್ತದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್- 11 ಸಂಭಾವ್ಯ ಆಟಗಾರರು
ಜಿತೇಶ್ ಶರ್ಮಾ (ನಾಯಕ, ವಿಕೆಟ್ ಕೀಪರ್), ಫಿಲಿಪ್ ಸಾಲ್ಟ್, ವಿರಾಟ್ ಕೊಹ್ಲಿ, ಮಯಾಂಕ್ ಅಗರವಾಲ್, ರಜತ್ ಪಾಟಿದಾರ್, ಲಿಯಾಮ್ ಲಿವಿಂಗ್‌ಸ್ಟೋನ್, ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಶ್ ದಯಾಲ್, ನುವಾನ್ ತುಷಾರ.
ಜೋಶ್ ಹ್ಯಾಜಲ್‌ವುಡ್, ಟಿಮ್ ಡೇವಿಡ್, ಮನೋಜ್ ಭಾಂಡಗೆ, ಬ್ಲೆಸಿಂಗ್ ಮುಜರಬಾನಿ, ಸುಯಾಶ್ ಶರ್ಮಾ, ರಸಿಖ್ ದಾರ್ ಸಲಾಂ, ಸ್ವಪ್ನಿಲ್ ಸಿಂಗ್, ಮೋಹಿತ್ ರಾಠಿ, ಅಭಿನಂದನ್ ಸಿಂಗ್, ಸ್ವಸ್ತಿಕ್ ಚಿಕಾರಾ,
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ