RCB 7 ಪಂದ್ಯ ಗೆದ್ದರೂ ಪ್ಲೇ ಆಫ್ ಎಂಟ್ರಿ ಸುಲಭ ಇಲ್ಲ.. ಬೆಂಗಳೂರಲ್ಲಿ ಅಗ್ನಿಪರೀಕ್ಷೆನಾ?

author-image
Bheemappa
Updated On
RCB 7 ಪಂದ್ಯ ಗೆದ್ದರೂ ಪ್ಲೇ ಆಫ್ ಎಂಟ್ರಿ ಸುಲಭ ಇಲ್ಲ.. ಬೆಂಗಳೂರಲ್ಲಿ ಅಗ್ನಿಪರೀಕ್ಷೆನಾ?
Advertisment
  • ಆರ್​ಸಿಬಿ ಎದುರಾಳಿಗಳಿಗೆ ಪ್ರತಿ ಮ್ಯಾಚ್ ಡು ಆರ್​ ಡೈ!
  • ಟೂರ್ನಿ ಅಂತ್ಯದಲ್ಲಿ ಎಚ್ಚರ ತಪ್ಪಿದರೆ ಗೇಟ್​ಪಾಸ್​​ ಫಿಕ್ಸ್
  • ಚೆನ್ನೈ ಸೂಪರ್ ಕಿಂಗ್ಸ್​ ಅಬ್ಬರಿಸಿದ್ರೆ ದೊಡ್ಡ ಡ್ಯಾಮೇಜ್

IPL ಸೀಸನ್​ನಲ್ಲಿ 18ರಲ್ಲಿ ಬೊಂಬಾಟ್​ ಪರ್ಫಾಮೆನ್ಸ್​ ನೀಡ್ತಾ ಇರೋ ಆರ್​​​ಸಿಬಿ ಪ್ಲೇ ಆಫ್​ ಎಂಟ್ರಿಗೆ ತುದಿಗಾಲಲ್ಲಿ ನಿಂತಿದೆ. ಆರ್​ಸಿಬಿ ಟ್ರೋಫಿ ಗೆಲ್ಲುತ್ತೋ ಇಲ್ವೋ ಗೊತ್ತಿಲ್ಲ. ಆದ್ರೆ, ಪ್ಲೇ ಆಫ್​ಗೆ ಎಂಟ್ರಿ ಅಂತಾ ಫ್ಯಾನ್ಸ್​​ ಲೆಕ್ಕಾಚಾರ ಹಾಕ್ತಿದ್ದಾರೆ. ಹಾಗಾದ್ರೆ, ಆರ್​​ಸಿಬಿ ಪ್ಲೇ ಆಫ್​​ ದಾರಿ ಅಷ್ಟು ಸಲೀಸಾಗಿದ್ಯಾ.? ನೋ ವೇ ಚಾನ್ಸೇ ಇಲ್ಲ. ಸ್ವಲ್ಪ ಯಾಮಾರಿದ್ರೆ ಪ್ಲೇ ಆಫ್ ಕ್ವಾಲಿಫೈನೂ ಆಗಲ್ಲ.

ಸೀಸನ್​-18ರ ಐಪಿಎಲ್ ಕಾವೇರುತ್ತಿದೆ. ಬಿಸಿಲದಗೆ ಏರಿದಂತೆ ಐಪಿಎಲ್​​ ಪಂದ್ಯಗಳ ಹೀಟ್​ ಜಾಸ್ತಿಯಾಗ್ತಿದೆ. ನೆಕ್​ ಟು ನೆಕ್​ ಫೈಟ್​​ಗಳು, ಫ್ಲೇ ಆಫ್​​ ಪೈಪೋಟಿ ಫ್ಯಾನ್ಸ್​ಗೆ ಸಖತ್ ಕಿಕ್ ನೀಡ್ತಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಾಲಿಡ್ ಆಟವಂತೂ ಲಾಯಲ್ ಅಭಿಮಾನಿಗಳ ಜೋಶ್ ಡಬಲ್ ಮಾಡಿದೆ. ಅಸಲಿಗೆ ಆರ್​​ಸಿಬಿಯ ರಿಯಲ್​​ ಆಟ ಇನ್ನು ಶುರುವಾಗುತ್ತೆ.

publive-image

ಮುಂದಿನ 4 ಪಂದ್ಯಗಳಲ್ಲಿ ಚಾಲೆಂಜರ್ಸ್​ಗೆ ಚಾಲೆಂಜ್​​​..!

ಪ್ರಸಕ್ತ ಆವೃತ್ತಿಯಲ್ಲಿ ಸಾಲಿಡ್ ಆಟವಾಡ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಈಗಾಗಲೇ ಪ್ಲೇ ಆಫ್​ ಪ್ರವೇಶಕ್ಕೆ ತುದಿಗಾಲಲ್ಲಿ ನಿಂತಿದೆ. ಫಾರ್ಮ್​ನಲ್ಲಿರೋ ಆರ್​ಸಿಬಿ ಹುಡುಗ್ರ ಪ್ಲೇ ಆಫ್ ಎಂಟ್ರಿ ಕಷ್ಟವೇನಿಲ್ಲ. ಆದ್ರೆ, ನಾಳೆಯ ಚೆನ್ನೈ ಎದುರಿನ ಪಂದ್ಯದೊಂದಿಗೆ ಪ್ಲೇ-ಆಫ್ ಅಂಚಿನಲ್ಲಿರುವ ಆರ್​ಸಿಬಿಗೆ ಅಸಲಿ ಅಗ್ನಿಪರೀಕ್ಷೆ ಶುರುವಾಗಲಿದೆ. ಮುಂದಿನ 4 ಪಂದ್ಯಗಳು ಚಾಲೆಂಜರ್ಸ್​​ಗೆ ರಿಯಲ್​ ಚಾಲೆಂಜ್​ ತಂದೊಡ್ಡಲಿದೆ.

7 ಪಂದ್ಯ ಗೆದ್ರೂ ಆರ್​ಸಿಬಿಗೆ ಪ್ಲೇ ಆಫ್ ಸ್ಥಾನ ಸೇಫ್ ಇಲ್ಲ..!

ಟೂರ್ನಿಯಲ್ಲಿ ಆಡಿದ 10ರ ಪೈಕಿ ಆರ್​ಸಿಬಿ 7 ಗೆದ್ದಾಗಿದೆ. ರೆಡ್ ಆರ್ಮಿಯ ಫ್ಲೇ-ಆಫ್ ಸ್ಥಾನ ಸೇಫ್ ಅನ್ನೋ ಡಿಶಿಷನ್​ಗೆ ಬಂದಿದ್ರೆ ಅದು ದೊಡ್ಡ ತಪ್ಪು.! ರಜತ್ ಪಾಟಿದಾರ್ ಪಡೆ 14 ಅಂಕಗಳು ಪಡೆದಿದ್ರೂ, ಫ್ಲೇ-ಆಫ್ ಎಂಟ್ರಿ ಅಷ್ಟು ಸುಲಭವಾಗಿಲ್ಲ. ಯಾಕಂದ್ರೆ, ಪ್ಲೇಗೆ ಆಫ್​​ ಎಂಟ್ರಿ ರೇಸ್​​ನಲ್ಲಿ ಅಂಕಪಟ್ಟಿಯ ಟಾಪ್​ 7 ತಂಡಗಳಿವೆ. ಸನ್​ರೈಸರ್ಸ್​ ಹೈದ್ರಾಬಾದ್​​ಗೂ ತಂಡಕ್ಕೂ ಇನ್ನೂ ಅವಕಾಶವಿದೆ. ಹೀಗಾಗಿ ಉಳಿದ 4 ಪಂದ್ಯಗಳಲ್ಲಿ ಆರ್​​​ಸಿಬಿ ಯಾಮಾರೋ ಹಾಗೇ ಇಲ್ಲ.

ಪ್ಲೇ-ಆಫ್ ಎಂಟ್ರಿಗೆ ಮುಳ್ಳಾಗುತ್ತಾ ಚಿನ್ನಸ್ವಾಮಿ ಚಾಲೆಂಜ್​​.?

ಸದ್ಯ 7 ಪಂದ್ಯಗಳನ್ನ ಗೆದ್ದಿರುವ ಆರ್​ಸಿಬಿ, ಮುಂದಿನ 4 ಪಂದ್ಯಗಳ ಪೈಕಿ 3 ಪಂದ್ಯಗಳನ್ನ ಹೋಮ್​​​ಗ್ರೌಂಡ್​​​ ಚಿನ್ನಸ್ವಾಮಿಯಲ್ಲೇ ಆಡಲಿದೆ. ಈ ಚಿನ್ನಸ್ವಾಮಿ ಚಾಲೆಂಜೇ ದೊಡ್ಡ ಟೆನ್ಶನ್​ ತಂದಿಟ್ಟಿದೆ. ತವರಿನಾಚೆ ಸೋಲಿಲ್ಲದ ಸರದಾರನಾಗಿರುವ ಆರ್​​ಸಿಬಿ, ತವರಿನಲ್ಲಿ ಆಡಿದ 4 ಪಂದ್ಯಗಳ ಪೈಕಿ ಜಸ್ಟ್ ಒಂದೇ ಒಂದು ಪಂದ್ಯ ಗೆದ್ದಿದೆ. ಹೋಮ್​ ಕಂಡಿಷನ್ಸ್​ಗೆ ಹೊಂದಿಕೊಳ್ಳೋದು ಆರ್​​ಸಿಬಿ ಆಟಗಾರರಿಗೆ ಕಬ್ಬಿಣದ ಕಡಲೆಯಾಗಿದೆ. ಹೋಮ್​ಗ್ರೌಂಡ್​​ನಲ್ಲಿ ಆರ್​​​ಸಿಬಿಯ ಆಟ ನೋಡಿದವರಿಗೆ ತವರಿನಲ್ಲಿ ನಡೆಯೋ ಮುಂದಿನ 3 ಪಂದ್ಯಗಳನ್ನ ಗೆಲ್ಲುತ್ತಾ ಎಂಬ ಪ್ರಶ್ನೆ ಹುಟ್ಟದೆ ಇರಲ್ಲ.

ಆರ್​ಸಿಬಿ ಮುಂದೆ ಬಲಾಢ್ಯರ ಸೇನೆ

ಮುಂದಿನ 4ರಲ್ಲಿ 2 ಮ್ಯಾಚ್ ಗೆದ್ರೆ ಆರ್​ಸಿಬಿ ಸೇಫ್​ ಆಗುತ್ತೆ. ಆದ್ರೆ, ಗೆಲ್ಲೋದು ಸುಲಭವಿಲ್ಲ. ಯಾಕಂದ್ರೆ, ಆರ್​ಸಿಬಿ ಮುಂದಿನ ಪಂದ್ಯಗಳಲ್ಲಿ ಎದುರಿಸುತ್ತಿರುವುದು ಬಲಾಢ್ಯರನ್ನು. ಚೆನ್ನೈ ಈ ಸೀಸನ್​ನಲ್ಲಿ ಇನ್​​ಕನ್ಸಿಸ್ಟೆಂಟ್​ ಪರ್ಫಾಮೆನ್ಸ್​ನಿಂದ ಬಳಲಿ ಪಾತಾಳಕ್ಕೆ ಕುಸಿದಿದೆ ನಿಜ. ಹಾಗಂತ ನಾವು ಗೆದ್ದೇ ಬಿಡ್ತೀವಿ ಅನ್ನೋ ಅತಿಯಾದ ಆತ್ಮವಿಶ್ವಾಸದಲ್ಲಿ ಕಣಕ್ಕಿಳಿಯುವಂತಿಲ್ಲ. ಪ್ರಯೋಗಗಳನ್ನ ಮಾಡ್ತಿರೋ ಚೆನ್ನೈ ಚಿನ್ನಸ್ವಾಮಿಯಲ್ಲಿ ಅಬ್ಬರಿಸಿದ್ರೆ, ಆರ್​​ಸಿಬಿಗೆ ದೊಡ್ಡ ಡ್ಯಾಮೇಜ್​ ಮಾಡಲಿದೆ.

ಇದನ್ನೂ ಓದಿ:ಮಾಜಿ ಕ್ರಿಕೆಟರ್​​ S ಶ್ರೀಶಾಂತ್​ಗೆ ಭಾರೀ ಸಂಕಷ್ಟ.. ಕ್ರಿಕೆಟ್​ನಿಂದ ಮತ್ತಷ್ಟು ದೂರ ದೂರ, ಯಾಕೆ?

publive-image

ಇನ್ನುಳಿದ ಮೂವರು ಎದುರಾಳಿಗಳಿಗೆ ಪ್ರತಿ ಮ್ಯಾಚ್​ ಡು ಆರ್​ ಡೈ ಆಗಿದೆ. ಲಕ್ನೋ ಸೂಪರ್ ಜೈಂಟ್ಸ್​, ಸನ್ ರೈಸರ್ಸ್ ಹೈದ್ರಾಬಾದ್, ಕೊಲ್ಕತ್ತಾ ನೈಟ್​ ರೈಡರ್ಸ್ ತಂಡಗಳಿಗೆ ಗೆಲುವು ಅನಿವಾರ್ಯ. ಹೀಗಾಗಿ ಆರ್​​ಸಿಬಿ ವಿರುದ್ಧ ಜಿದ್ದಿಗೆ ಬಿದ್ದು ಹೋರಾಡೋದು ಪಕ್ಕಾ. ಈ ಫೈಟ್​​ನ ಎದುರಿಸಿ ಗೆಲ್ಲೋದು ಸುಲಭದ ಮಾತಲ್ಲ. ಸಣ್ಣ ಯಡವಟ್ಟಾದ್ರೂ ಆರ್​ಸಿಬಿ ಪ್ಲೇ ಆಫ್​ ಎಂಟ್ರಿಯ ದಾರಿಗೆ ಡ್ಯಾಮೇಜ್​ ಆಗಲಿದೆ.

ಅಂದ್ಹಾಗೆ, ಉಳಿದ 4ರಲ್ಲಿ 2 ಪಂದ್ಯ ಗೆದ್ದು ಪ್ಲೇ ಆಫ್​ಗೆ ಎಂಟ್ರಿ ಕೊಡೋದು ಮಾತ್ರ ಆರ್​​ಸಿಬಿ ಟಾರ್ಗೆಟ್​ ಆಗಿಲ್ಲ. ಟೇಬಲ್​ ಟಾಪ್​ 2 ಸ್ಥಾನ ಆರ್​​ಸಿಬಿಯ ಟಾರ್ಗೆಟ್​ ಆಗಿದೆ. ಟಾಪ್​ 1 ಅಥವಾ 2ನೇ ತಂಡವಾಗಿ ಪ್ಲೇ ಆಫ್​ಗೆ ಪ್ರವೇಶಿಸಿದ್ರೆ, ಕಪ್​ ಗೆಲ್ಲೋ ಹಾದಿಯಲ್ಲಿ ಒಂದು ಅವಕಾಶ ಹೆಚ್ಚು ಸಿಗಲಿದೆ. ಇಲ್ಲದಿದ್ರೆ, ಸತತವಾಗಿ 3 ಪಂದ್ಯ ಗೆಲ್ಲಬೇಕಾಗುತ್ತೆ. ಹೀಗಾಗಿ ಮುಂದಿನ 4 ಪಂದ್ಯಗಳು ಆರ್​​ಸಿಬಿ ಪಾಲಿಗೆ ಮಹತ್ವದ್ದಾಗಿದ್ದು, ಇದುವರೆಗೆ ಅದ್ಭುತ ಆಟವಾಡ್ತಿರುವ ಪ್ಲೇಯರ್ಸ್​​ ಮುಂದೆಯೂ ಅತ್ಯದ್ಭುತವಾದ ಪ್ರದರ್ಶನ ನೀಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment