RCB ಈ ಚಾನ್ಸ್​ ಬಳಸಿದ್ರೆ ಬಲಿಷ್ಠ ಟೀಮ್ ಕಟ್ಟಬಹುದಿತ್ತು.. ಫ್ರಾಂಚೈಸಿ ಮಾಡಿದ ತಪ್ಪು ಯಾವುದು?

author-image
Bheemappa
Updated On
RCBಗೆ ಈ ಐವರೇ ರಿಟೈನ್ ಆಗಲು ಮುಖ್ಯ ಕಾರಣ ಏನು.. ಕೊಹ್ಲಿ ಜೊತೆ ಸ್ಥಾನ ಪಡೆದ ಪ್ಲೇಯರ್ಸ್?
Advertisment
  • ವಿಲ್​ ಜಾಕ್ಸ್​ ಆರ್​​ಸಿಬಿಗೆ ಬಂದೇ ಬರ್ತಾರೆ ಅನ್ಕೊಂಡಿದ್ರು
  • ಹಳೆಯ ಆಟಗಾರರಿಗೆ ಮಣೆ ಹಾಕಿದ್ದೇಕೆ ಚೆನ್ನೈ, ಮುಂಬೈ.?
  • ಕಳೆದ ಸಲ ಹೀನಾಯ ಪರ್ಫಾಮೆನ್ಸ್​ ನೀಡಿದ್ದ​ ಮ್ಯಾಕ್ಸ್​​ವೆಲ್

IPL ಮೆಗಾ ಹರಾಜು ಅಂತ್ಯ ಕಂಡಿದೆ. ಅಳೆದು ತೂಗಿ ಲೆಕ್ಕಾಚಾರ ಹಾಕಿ ಆಟಗಾರರನ್ನ ಖರೀದಿ ಮಾಡಿರೋ ತಂಡಗಳ ಬಲಾಬಲದ ಲೆಕ್ಕಾಚಾರ ಜೋರಾಗಿದೆ. ₹83 ಕೋಟಿ ಇಟ್ಟು ಕೊಂಡು ಆ್ಯಕ್ಷನ್​ಗೆ ಇಳಿದ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ಡಿಸೆಂಟ್​ ತಂಡವನ್ನ ಕಟ್ಟುವಲ್ಲಿ ಯಶಸ್ವಿಯಾಗಿದೆ. ಆದ್ರೆ, ಆರ್​​ಟಿಎಮ್​ ಅವಕಾಶವನ್ನ ಸರಿಯಾಗಿ ಬಳಸಿಕೊಂಡಿದ್ರೆ, ಬಲಿಷ್ಠ ತಂಡವನ್ನೇ ಕಟ್ಟಬಹುದಿತ್ತು. ಹಾಗಾದ್ರೆ, ಆರ್​​ಸಿಬಿ ಎಡವಿದ್ದೆಲ್ಲಿ.?

ಅಪಾರ ನಿರೀಕ್ಷೆಯೊಂದಿಗೆ ಹರಾಜಿನ ಕಣಕ್ಕೆ ಧುಮುಕಿದ್ದ ಆರ್​​ಸಿಬಿ ತಂಡ ಬರೋಬ್ಬರಿ 22 ಆಟಗಾರರನ್ನ ಖರೀದಿಸಿದೆ. ಹೊಸ ತಂಡ ಹೊಸ ಹುರುಪಿನೊಂದಿಗೆ ಸೀಸನ್​ 18ಕ್ಕೆ ಕಾಲಿಡಲು ಸಜ್ಜಾಗಿದೆ. ಆದ್ರೆ, ಹರಾಜಿನಲ್ಲಿ ದೊಡ್ಡ ಯಡವಟ್ಟು ಮಾಡಿಕೊಂಡಿದೆ. ಮಾಜಿ ಆಟಗಾರರನ್ನ ಕಡೆಗಣಿಸಿ ದೊಡ್ಡ ತಪ್ಪು ಮಾಡಿದೆ.

publive-image

ಕೋರ್​ ಟೀಮ್​ ಖರೀದಿಯಲ್ಲಿ ಎಡವಿದ ಆರ್​​ಸಿಬಿ.!

ರಿಟೈನ್ಶನ್​ ಅವಕಾಶದಲ್ಲಿ ಮೂವರು ಆಟಗಾರರನ್ನ ಉಳಿಸಿಕೊಂಡಿದ್ದ ಆರ್​​ಸಿಬಿ ಬಿಗ್​ ಪರ್ಸ್​ನೊಂದಿಗೆ ಮೆಗಾ ಹರಾಜಿಗೆ ಹೋಗಿತ್ತು. ಮೂರು ರೈಟ್​ ಟು ಕಾರ್ಡ್​ ಆಪ್ಷನ್​ ಕೂಡ ತಂಡಕ್ಕಿತ್ತು. ಹೀಗಾಗಿ ಹಳೆಯ ಆಟಗಾರರಿಗೆ ಆರ್​​ಸಿಬಿ ಮಣೆ ಹಾಕುತ್ತೆ ಅನ್ನೋ ನಿರೀಕ್ಷೆಯಿತ್ತು. ಆದ್ರೆ, ಆರ್​​ಸಿಬಿ ಹಳೆ ಆಟಗಾರರನ್ನ ರಿಜೆಕ್ಟ್​ ಮಾಡಿಬಿಡ್ತು. ಉಳಿದೆಲ್ಲಾ ತಂಡಗಳು ಕೋರ್​​ ಟೀಮ್​ಗೆ ಆದ್ಯತೆ ನೀಡಿದ್ವು. ಆದ್ರೆ, ಆರ್​​ಸಿಬಿ ಕೋರ್​ ಟೀಮ್ ಬಿಟ್ಟು ಹೊಸ ಆಟಗಾರರ ಹೊಸ ತಂಡಕ್ಕೆ ಆದ್ಯತೆ ನೀಡಿತು. ಈ ನಿರ್ಧಾರ ಅಖಾಡದಲ್ಲಿ ಆರ್​​ಸಿಬಿಗೆ ಹಿನ್ನಡೆಯಾಗೋ ಸಾಧ್ಯತೆ ದಟ್ಟವಾಗಿದೆ.

ತಂಡಕ್ಕಾಗಿ 7 ಸೀಸನ್​​ ದುಡಿದ ಸಿರಾಜ್​ಗೆ ಗುಡ್​ ಬೈ.!

ಒಂದಲ್ಲ.. ಎರಡಲ್ಲ.. 7 ಸೀಸನ್​.. 2018ರಿಂದ 2024ರ ಐಪಿಎಲ್​ವರೆಗೆ ವೇಗಿ ಮೊಹಮ್ಮದ್​ ಸಿರಾಜ್ ಆರ್​​ಸಿಬಿಯ ಅವಿಭಾಜ್ಯ ಅಂಗವಾಗಿದ್ರು. ಈ ಬಾರಿಯೂ ಸಿರಾಜ್​ ಆರ್​​ಸಿಬಿಯಲ್ಲೇ ಇರ್ತಾರೆ ಅನ್ನೋದು ಎಲ್ಲರ ನಿರೀಕ್ಷೆಯಾಗಿತ್ತು. ಆದ್ರೆ, ರಿಟೈನ್​​ ಮಾಡಿಕೊಳ್ಳದ ಆರ್​​ಸಿಬಿ ಆಕ್ಷನ್​ನಲ್ಲಿ, ರೈಟ್​​ ಟು ಮ್ಯಾಚ್​​ ಕಾರ್ಡ್ ಅವಕಾಶವನ್ನೂ​​ ಬಳಸಲಿಲ್ಲ.

ಒಂದು ಸೀಸನ್​​ ಫ್ಲಾಪ್​.. ಮ್ಯಾಕ್ಸ್​​ವೆಲ್​ ಬೇಡವಾದ್ರಾ.?

ಅಸಿಸ್​​​ನ ಸ್ಫೋಟಕ ಆಲ್​​ರೌಂಡರ್​​ ಗ್ಲೇನ್​ ಮ್ಯಾಕ್ಸ್​​ವೆಲ್​ ಕಳೆದ ಸೀಸನ್​​ನಲ್ಲಿ ಅತ್ಯಂತ ಹೀನಾಯ ಪರ್ಫಾಮೆನ್ಸ್​ ನೀಡಿದ್ರು. ಆದ್ರೆ, ಅದಕ್ಕೂ ಹಿಂದಿನ 3 ಸೀಸನ್​ಗಳಲ್ಲಿ ಸಾಲಿಡ್​ ಪರ್ಫಾಮೆನ್ಸ್​ ನೀಡಿದ್ರು. 160+ ಸ್ಟ್ರೈಕ್​ರೇಟ್​​ನಲ್ಲಿ ಬ್ಯಾಟ್​ ಬೀಸಿದ್ರು. ಕ್ರಿಕೆಟರ್​ ಅಂದ್ಮೇಲೆ ಲೀನ್​ ಪ್ಯಾಚ್​ ಸಹಜ. ಕೊಹ್ಲಿನೇ 3 ವರ್ಷ ವೈಫಲ್ಯದ ಸುಳಿಗೆ ಸಿಲುಕಿರಲಿಲ್ವೆ.? ಹೀಗಿರೋವಾಗ ಮ್ಯಾಕ್ಸ್​ವೆಲ್​ನ ಬ್ಯಾಕ್​ ಮಾಡಬೇಕಿತ್ತು. ಸಿಂಗಲ್​ ಹ್ಯಾಂಡೆಡ್ಲಿ ಪಂದ್ಯದ ಗತಿಯನ್ನೇ ಬದಲಿಸೋ ತಾಕತ್ತು ಮ್ಯಾಕ್ಸ್​ವೆಲ್​ಗಿತ್ತು. ಬ್ಯಾಟಿಂಗ್​ ಜೊತೆ ಬೌಲಿಂಗ್​ನಲ್ಲೂ ತಂಡಕ್ಕೆ ನೆರವಾಗ್ತಿದ್ರು. ಆದ್ರೆ, ನಿರೀಕ್ಷೆಗಿಂತ ಕಡಿಮೆ ಮೊತ್ತಕ್ಕೆ ಮ್ಯಾಕ್ಸಿ ಲಭ್ಯವಿದ್ರೂ, ಆರ್​​ಸಿಬಿ ಆರ್​​ಟಿಎಮ್​ ಬಳಸೋ ಗೋಜಿಗೆ ಹೋಗಲಿಲ್ಲ.

ಇದನ್ನೂ ಓದಿ:RCBಯ 7 ಕ್ಯಾಪ್ಟನ್​ಗಳ ಪೈಕಿ ದಿ ಬೆಸ್ಟ್ ಯಾರು.. ಕೊಹ್ಲಿ ಸಾರಥ್ಯದಲ್ಲಿ ಟೀಮ್ ಹೇಗಿತ್ತು?

publive-image

ಆಕಾಶ್​ ಅಂಬಾನಿ ಥ್ಯಾಂಕ್ಸ್​ ಹೇಳಿದ್ದಲ್ಲ.. ಕಾಲೆಳೆದಿದ್ದು.!

ಎಲ್ಲರೂ ಹೋದ್ರೂ, ವಿಲ್​ ಜಾಕ್ಸ್​ ಆರ್​​ಸಿಬಿ ಬಂದೇ ಬರ್ತಾರೆ ಅನ್ನೋದು ಫ್ಯಾನ್ಸ್​ ಆಸೆ ಆಗಿತ್ತು. ಆರ್​​ಟಿಎಮ್​ ಬಳಸಿ ವಾಪಾಸ್​ ತಂಡಕ್ಕೆ ಕರೆ ತರಬಹುದಿತ್ತು. ಆದ್ರೆ, ಆರ್​​ಸಿಬಿ ಮ್ಯಾನೇಜ್​ಮೆಂಟ್​ ಅದೇನು ಲೆಕ್ಕಾಚಾರ ಹಾಕ್ತೋ ಗೊತ್ತಿಲ್ಲ. ಉದಾರವಾಗಿ ಮುಂಬೈಗೆ ಬಿಟ್ಟು ಕೊಡ್ತು. ಅದಾದ ಬಳಿಕ ಮುಂಬೈ ಓನರ್​ ಆಕಾಶ್​ ಅಂಬಾನಿ ಬಂದು ಆರ್​​ಸಿಬಿಯ ಪ್ರಥಮೇಶ್​ ಮಿಶ್ರಾಗೆ ಶೇಕ್​ ಹ್ಯಾಡ್​ ಕೊಟ್ರು. ಅಸಲಿಗೆ ಅದು ದೊಡ್ಡ ಉಪಕಾರ ಮಾಡಿದ್ರಿ ಅಂತ ಧನ್ಯವಾದ ಹೇಳಿದಲ್ಲ. ನಿಮಗೆ ಇವ್ನ ವ್ಯಾಲ್ಯೂ ಗೊತ್ತಿಲ್ಲ ಬಿಡಿ ಎಂದು ಕಾಲೆಳೆದಿದ್ದು.

ಕೊನೆಯದಾಗಿ ಕನ್ನಡಿಗ ವೈಶಾಕ್​ ವಿಜಯ್​ ಕುಮಾರ್​ಗಾದ್ರೂ ಆರ್​​ಟಿಎಮ್​ ಯೂಸ್​ ಮಾಡಬಹುದಿತ್ತು. ಆದ್ರೆ, ಫುಲ್​ ಆ್ಯಟಿಟ್ಯೂಡ್​ನಲ್ಲಿ ಮ್ಯಾನೇಜ್​ಮೆಂಟ್​​ ನೋ ಎಂದಿತು. ವೈಶಾಕ್​ ವ್ಯಾಲ್ಯೂ ಗೊತ್ತಿದ್ದ ಪಂಜಾಬ್​ ಹೆಡ್​ ಕೋಚ್​ ರಿಕಿ ಪಾಂಟಿಂಗ್​ ಫುಲ್​​ ಖುಷ್​ ಆಗಿ ಖರೀದಿಸಿದರು.

ಹಳೆ ಆಟಗಾರರನ್ನ ಬಿಟ್ಟು ಕೊಟ್ಟಿದ್ದೆ ದೊಡ್ಡ ಹಿನ್ನಡೆ.!

ಹರಾಜಿನಲ್ಲಿ ಆರ್​​ಸಿಬಿ ಬಿಟ್ಟು ಉಳಿದಲ್ಲ ತಂಡಗಳು ಕೋರ್​ ಟೀಮ್​ ಖರೀದಿಗೆ ಒತ್ತು ನೀಡಿದ್ವು. 5 ಬಾರಿಯ ಚಾಂಪಿಯನ್​ಗಳಾದ ಮುಂಬೈ, ಚೆನ್ನೈ ತಂಡಗಳು ಈ ಬಾರಿಯೂ ಕೋರ್​ ಟೀಮ್​ ಬಿಟ್ಟು ಕೊಡಲಿಲ್ಲ. ಹಾಗಾದ್ರೆ, ಅವ್ರೇನು ದಡ್ಡರಾ.? ನೋ ವೇ.. ಇದ್ರ, ಹಿಂದೆ ಲೆಕ್ಕಾಚಾರವಿದೆ. ಕಳೆದ 3 ಸೀಸನ್​ಗಳಿ ತಂಡದಲ್ಲಿರೋ ಆಟಗಾರನಿಗೆ ಫ್ರಾಂಚೈಸಿ ಕಲ್ಚರ್​ ಬಗ್ಗೆ ಗೊತ್ತಿರುತ್ತೆ. ಟೀಮ್​ ವಾತಾವರಣ, ಮ್ಯಾನೇಜ್​ಮೆಂಟ್​ನ ನಿರೀಕ್ಷೆ, ಫ್ಯಾನ್ಸ್​ ಪಲ್ಸ್​ ಬಗ್ಗೆ ಅರಿವಿರುತ್ತೆ. ಹಳೆ ಆಟಗಾರರು ತಂಡದಲ್ಲಿದ್ರೆ, ಡ್ರೆಸ್ಸಿಂಗ್​ ರೂಮ್​ ವಾತಾವರಣ ಚನ್ನಾಗಿರುತ್ತೆ. ಇದು ಚನ್ನಾಗಿದ್ರೆ, ಆನ್​ ಫೀಲ್ಡ್​​ನಲ್ಲಿ ರಿಸಲ್ಟೂ ಸಿಗುತ್ತೆ. ಆದ್ರೆ, 18 ಸೀಸನ್​ ಕಳೆದ್ರೂ ಆರ್​​ಸಿಬಿಗೆ ಇದು ಅರ್ಥವಾಗಿಲ್ಲ ಅನ್ಸುತ್ತೆ.

publive-image

ಹಳೆ ಆಟಗಾರರ ಖರೀದಿ ಬಿಡಿ.. ಆರಂಭದಲ್ಲಿ ಮಾರ್ಕ್ಯೂ ಪ್ಲೇಯರ್ಸ್​ ಲಿಸ್ಟ್​ನಲ್ಲಿ ಬಂದ ಬೇರ್ಯಾವ ದೊಡ್ಡ ಆಟಗಾರರನ್ನ ಖರೀದಿಗೂ ಆರ್​​ಸಿಬಿ ಆಸಕ್ತಿ ತೋರಲಿಲ್ಲ. ನಾವು ಬಿಡ್​​ ಮಾಡಿದ್ವಿ ಅಂತಾ ತೋರಿಸೋದಕ್ಕೋ ಏನೋ ಸ್ವಲ್ಪ ಬಿಡ್​ ಮಾಡಿ ಬಳಿಕ ಸೈಲೆಂಟ್​ ಆಗ್ತಿತ್ತು. ಬರೋಬ್ಬರಿ ₹83 ಕೋಟಿ ಪರ್ಸ್​​ನಲ್ಲಿದ್ರು, ಮ್ಯಾನೇಜ್​ಮೆಂಟ್​ ಸುಮ್ಮನೆ ಕೂತಿತ್ತು.

ಕಳೆದ ಕೆಲ ಸೀಸನ್​ಗಳಿಗೆ ಹೋಲಿಸಿದ್ರೆ, ಈ ಬಾರಿ ಆರ್​​ಸಿಬಿ ಯಾರ ಮೇಲೂ ಬಿಗ್​ ಅಮೌಂಟ್​​ ಸ್ಪೆಂಡ್​ ಮಾಡದೇ ಡಿಸೆಂಟ್​ ಬೈ ಮಾಡಿದೆ. ಆದ್ರೆ, ಕೋರ್​ ಟೀಮ್​ ಇಲ್ಲದ ಕೊರಗನ್ನ ಹೇಗೆ ನಿಭಾಯಿಸುತ್ತೆ ಅನ್ನೋದೆ ದೊಡ್ಡ ಪ್ರಶ್ನೆಯಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment